ಮೇಲು ಕೀಳೆಂಬ ಭಾವನೆ ತೊಡೆದು ಹಾಕಿದವರು ಕನಕದಾಸರು - ಪ್ರಕಾಶ್ ದೊರೆ
ಮೇಲು ಕೀಳೆಂಬ ಭಾವನೆ ತೊಡೆದು ಹಾಕಿದವರು ಕನಕದಾಸರು - ಪ್ರಕಾಶ್ ದೊರೆ
ಜೇವರ್ಗಿ : ಮೇಲು ಕೀಳೆಂಬ ಭಾವನೆ ತೊಡೆದು ಹಾಕಿ,ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವುದರ ಜೊತೆಗೆ ಮಹಿಳಾಪರ ಚಿಂತನೆಗಳಿಗೆ ಅತಿ ಹೆಚ್ಚು ಹೊತ್ತು ನೀಡಿ,ಅಲ್ಲದೆ ನೀತಿ ಇರದ ಬಂಡತನ ಬದುಕು ಬೇಡ ಎಂದು ಸಾರಿ ಸಾರಿ ಹೇಳಿದವರು ಕನಕದಾಸರು ಎಂದು ಪತ್ರಕರ್ತ ಪ್ರಕಾಶ್ ದೊರೆ ಹೇಳಿದರು.
ಪಟ್ಟಣದ ಶ್ರೀ ಮಹಾಲಕ್ಷ್ಮಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನ್ನಡದ ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರಬೇಕು ಎಂಬುದೇ ಗಟ್ಟಿ ನಿಲುವು ಕನಕದಾಸರದಾಗಿತ್ತು ಎಂದು ನುಡಿದರು.
ಮಹಿಳೆಯರು ಸಮಾಜದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸಿಮಿತವಾಗಿರದೆ.ಶಿಕ್ಷಣ, ಧಾರ್ಮಿಕ,ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವುದರ ಜೊತೆಗೆ ಮೂಡನಂಬಿಕೆ ಹೆಸರಿನಲ್ಲಿ ಸ್ತ್ರೀಶೋಷಣೆ ವಿರೋಧಿಸಿದವರು ಕನ್ನಡದ ಸಂತ ಕವಿ ಕನಕದಾಸರು ಎಂದು ಕನ್ನಡ ಉಪನ್ಯಾಸಕರಾದ ಸಾವಿತ್ರಿ ಮನಗೂಳಿ ಹೇಳಿದರು.
ಈ ಕಾರ್ಯಕ್ರಮವನ್ನು ಜೇವರ್ಗಿ ಸರಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಉಪನ್ಯಾಸಕರಾದ ಶಿವಶರಣಪ್ಪ ಹಿಪ್ಪರಗಾ ಉದ್ಘಾಟಿಸಿದರು,ಶ್ರೀ ಮಹಾಲಕ್ಷ್ಮಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಧರ್ಮಣ್ಣ ಬಡಿಗೇರ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಪತ್ರಕರ್ತ ವಿಜಯಕುಮಾರ್ ಕಲ್ಲಾ,ಸಿದ್ದಲಿಂಗಪ್ಪ ಬಡಿಗೇರ, ಕಾಶಿನಾಥ್ ಮಂದೆವಾಲ ಸೇರಿದಂತೆ ಇನ್ನಿತರರು ಉಪಸಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷರಾದ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಕು.ಲಕ್ಷ್ಮಿ ಪ್ರಾರ್ಥಿಸಿದರು,ಸುರೇಶ ಹಿರೇಮಠ ನಿರೂಪಿಸಿದರು, ಮಲ್ಲಿಕಾರ್ಜುನ ನೇದಲಗಿ ಸ್ವಾಗತಿಸಿದರು,ಶಿವಶಂಕರ ಕುಮ್ಮನಶಿರಸಿಗಿ ವಂದಿಸಿದರು.
