ಬಸವರಾಜ್ ಪಡುಕೋಟೆ ವಿರುದ್ಧದ ಪ್ರಕರಣ ಕೈಬಿಡಲು ನಮ್ಮ ಕರ್ನಾಟಕ ಸೇನೆ ಮನವಿ

ಬಸವರಾಜ್ ಪಡುಕೋಟೆ ವಿರುದ್ಧದ ಪ್ರಕರಣ ಕೈಬಿಡಲು ನಮ್ಮ ಕರ್ನಾಟಕ ಸೇನೆ ಮನವಿ

ಬಸವರಾಜ್ ಪಡುಕೋಟೆ ವಿರುದ್ಧದ ಪ್ರಕರಣ ಕೈಬಿಡಲು ನಮ್ಮ ಕರ್ನಾಟಕ ಸೇನೆ ಮನವಿ

ಕಲಬುರಗಿ : ಬೆಂಗಳೂರಿನ ಶಿವಾಜಿನಗರದಲ್ಲಿ ಜುಲೈ 21ರಂದು ಜಿಬಿಎ (GBA) ಅಧಿಕಾರಿಗಳು ನಡೆಸಿದ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ವೇಳೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ನಮ್ಮ ಕರ್ನಾಟಕ ಸೇನೆ, ತಮ್ಮ ರಾಜ್ಯಾಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕೈಬಿಟ್ಟು, ಅವರ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ನಮ್ಮ ಕರ್ನಾಟಕ ಸೇನೆ ನಗರಾಧ್ಯಕ್ಷ ಸುರೇಶ್ ಜಿ. ಹೊಸಮನಿ ನೇತೃತ್ವದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಬಂಧಿತ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿರುವ ಮನವಿಯಲ್ಲಿ, ನಡೆದ ಘಟನೆ ದುರದೃಷ್ಟಕರವಾಗಿದ್ದು, ಸ್ಥಳದಲ್ಲಿದ್ದ ಕೆಲ ಅಧಿಕಾರಿಗಳ ವರ್ತನೆಯೂ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಕಾರಣವಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.

ಮನವಿಯಲ್ಲಿ, ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಸರ್ಕಾರದ ಕ್ರಮಕ್ಕೆ ನಮ್ಮ ಕರ್ನಾಟಕ ಸೇನೆ

ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಕಾರ್ಯಾಚರಣೆಗೂ ಮುನ್ನ ಸ್ಥಳೀಯ ಕನ್ನಡಪರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ, ಸೌಹಾರ್ದಯುತವಾಗಿ ಚರ್ಚೆ ನಡೆಸಿದ್ದರೆ ಇಂತಹ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಅವರು ಕಳೆದ ಮೂರು ದಶಕಗಳಿಂದ ಕನ್ನಡ ನಾಡು, ನುಡಿ, ಗಡಿ ಹಾಗೂ ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕನ್ನಡಪರ ಹೋರಾಟಗಾರರಾಗಿದ್ದಾರೆ. ಅವರ ಸಮಾಜಮುಖಿ ಸೇವೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹೋರಾಟಗಳನ್ನು ಪರಿಗಣಿಸಿ, ಅವರನ್ನು ಅಪರಾಧಿಯಂತೆ ಪರಿಗಣಿಸದೆ ಮಾನವೀಯ ದೃಷ್ಟಿಕೋನದಿಂದ ಪ್ರಕರಣವನ್ನು ಪರಿಶೀಲಿಸಬೇಕು ಎಂದು ಸರ್ಕಾರವನ್ನು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲದೆ, ಅವರ ವಿರುದ್ಧ ಗುಂಡಾ ಕಾಯ್ದೆಯಂತಹ ಕಠಿಣ ಕಾನೂನು ಕ್ರಮ ಜಾರಿಗೊಳಿಸದೆ, ದಾಖಲಾಗಿರುವ ಪ್ರಕರಣವನ್ನು ಕೈಬಿಟ್ಟು ಬಿಡುಗಡೆಗೊಳಿಸುವಂತೆ ನಮ್ಮ ಕರ್ನಾಟಕ ಸೇನೆ ಸರ್ಕಾರಕ್ಕೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗು ಜಗತಿ ಹಾಗೂ ಶರಣಬಸಪ್ಪ ವಿ ಮುನೋಳ್ಳಿ . ರಾಜ್ಯ ಉಪಾಧ್ಯಕ್ಷರು ಸಾಮಾಜಿಕ ಜಾಲತಾಣ ಹಾಗೂ ಗುಂಡೇಶ್ ಸಂಗವಾರ್ ಶರಣು ಶಾಮರಾವ್ ಶಂಕರ್ ಸಾಗರ ರಾಥೋಡ್ ಸೊಹೈಲ್ ಇದರು.