ಬದುಕಿನ ಪರೀಕ್ಷೆಯಲ್ಲಿ ಪಾಸಾಗಲು ಓದು ಅವಶ್ಯ
ಬದುಕಿನ ಪರೀಕ್ಷೆಯಲ್ಲಿ ಪಾಸಾಗಲು ಓದು ಅವಶ್ಯ
ಕಲಬುರಗಿ, ಏ.೯- ಪುಸ್ತಗಳ ಓದು ಎತ್ತರಕ್ಕೆ ಒಯ್ಯುತ್ತದೆ. ಬದುಕಿನ ಪರೀಕ್ಷೆಯಲ್ಲಿ ಪಾಸಾಗಲು ಓದುವುದು ಅತ್ಯಗತ್ಯವಾಗಿದೆ ಎಂದು ದ್ವಿಭಾಷಾ ಕವಿ ಡಾ.ಬಸವ ಪಾಟೀಲ ಜಾವಳಿ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ನಗರದ ಹಳೆ ಜೇವರ್ಗಿ ರಸ್ತೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಲ್ಯಾಣ ನಾಡಿನ ಹಿರಿಯ ಕವಿ ಶಿವಶರಣ ಪಾಟೀಲ ಜಾವಳಿ ಕಾವ್ಯ ಕುರಿತು ವಿಶೇಷ ಉಪನ್ಯಾಸ ಮತ್ತು ಹೂವಿನಹಳ್ಳಿ ನಾಗರಾಜ ಅವರ. " ಮಾರಿಜಪ್ಪ " ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಕಾದಂಬರಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಇಂದಿನ ಮಕ್ಕಳು ಕನಸ್ಸುಗಳಿಂದ ವಿಮುಖರಾಗುತ್ತಿದ್ದಾರೆ. ಮೌಲ್ಯಗಳ ಕುಸಿತವಾಗುತ್ತಿದೆ. ಮೊಬೈಲ್ ಮಾಯಾಲೋ ಕದಲ್ಲಿ ಮುಳುಗಿ ಹೋಗಿದ್ದಾರೆ. ಅವರ ಎದೆಯಲ್ಲಿ ಅಕ್ಷರ ಬಿತ್ತುವುದು ಸವಾಲಾಗಿದೆ ಎಂದರು.
ಶಿವಶರಣ ಪಾಟೀಲ ಜಾವಳಿ ಅವರ ಕಾವ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಸೂರ್ಯಕಾಂತ ಪಾಟೀಲ ಅವರು, " ಹಸಿವು, ಬಡತನ, ಮಹಿಳಾ ಶೋಷಣೆ, ಜಾತಿ ವ್ಯವಸ್ಥೆಯ ಕರಾಳತೆಯ ಬಗ್ಗೆ ಕವಿತೆ ರಚಿಸಿದ ಶಿವಶರಣ ಪಾಟೀಲ ಜಾವಳಿ ಅವರು ಈ ಭಾಗದ ಪ್ರಥಮ ಬಂಡಾಯ ಕವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ದರಾಮ ಹೊನ್ಕಲ್ ಆಶಯ ನುಡಿಗಳನ್ನಾಡಿದರು. ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಡಾ.ಗವಿಸಿದ್ದಪ್ಪ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ಜಯಶ್ರೀ ಮತ್ತು ಕನ್ಯಾಕುಮಾರಿ ಅವರು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ ಮೋರಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಪ್ರಿಯದರ್ಶಿನಿ ಸ್ವಾಗತಿಸಿದರು. ಉಪನ್ಯಾಸಕ ಪ್ರೊ.ಸಿದ್ರಾಮಪ್ಪ ಬಣಗಾರ ಕಾರ್ಯಕ್ರಮ ನಿರೂಪಿಸಿದರು. ಡಾ.ಸುವರ್ಣಾ ಹಿರೇಮಠ ಅತಿಥಿಗಳ ಪರಿಚಯ ಮಾಡಿದರು.ಪ್ರಾಧ್ಯಾಪಕಿ ಡಾ.ಅನುಸೂಯಾ ಪಾಟೀಲ ವಂದಿಸಿದರು.
ಲೇಖಕ ಹೂವಿನಹಳ್ಳಿ ನಾಗರಾಜ, ಡಿ.ಎಂ.ನದಾಫ್, ಡಾ.ರಾಜಕುಮಾರ ಮಾಳಗೆ, ಡಾ.ಶ್ರೀಶೈಲ ಮದಾನೆ, ಡಾ.ಶರಣಮ್ಮ ಪಾಟೀಲ, ಡಾ.ಆನಂದ ಸಿದ್ದಾಮಣಿ, ಡಾ.ಲಕ್ಷ್ಮೀಕಾಂತ ಹೂಗಾರ, ಪ್ರೊ.ಸುನಂದಾ ಶಂಕರ,ಡಾ.ಪದ್ಮರಾಜ ರಾಸಣಗಿ, ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
