ಶ್ರೀಮತಿ ವಿ ಜಿ ಮಹಿಳಾ ವಿದ್ಯಾಲಯದ ಮನೋವಿಜ್ಞಾನ ವಿಷಯದ ವಿದ್ಯಾರ್ಥಿನಿಗೆ ಅಕ್ಕಮಹಾದೇವಿ ಮಹಿಳಾ ವಿವಿಯ ಚಿನ್ನದ ಪದಕ

ಶ್ರೀಮತಿ ವಿ ಜಿ ಮಹಿಳಾ ವಿದ್ಯಾಲಯದ ಮನೋವಿಜ್ಞಾನ ವಿಷಯದ ವಿದ್ಯಾರ್ಥಿನಿಗೆ ಅಕ್ಕಮಹಾದೇವಿ ಮಹಿಳಾ ವಿವಿಯ ಚಿನ್ನದ ಪದಕ

.*ಶ್ರೀಮತಿ ವಿ ಜಿ ಮಹಿಳಾ ಮಹಾ ವಿದ್ಯಾಲಯದ ಮನೋವಿಜ್ಞಾನ ವಿಷಯದ ವಿದ್ಯಾರ್ಥಿನಿಗೆ ಅಕ್ಕಮಹಾದೇವಿ ಮಹಿಳಾ ವಿವಿಯ ಚಿನ್ನದ ಪದಕ*

ಕಲಬುರ್ಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾ ವಿದ್ಯಾಲಯದ 2024-25 ನೇ ಸಾಲಿನ ಬಿ ಎ ಪದವಿಯ 6 ನೇ‌ ಸೆಮಿಸ್ಟರ್ ಮುಗಿಸಿರುವ ಹೇಝಲ್ ಠಕ್ಕರ ಮನೋವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ ಪಿ ಎಸ್ ಹಲ್ಯಾಳ ಅವರ ಹೆಸರಿನಲ್ಲಿ ಕೊಡಮಾಡುವ ಚಿನ್ನದ ಪದಕವನ್ನು ಪಡೆದು ಸಂಸ್ಥೆ ಹಾಗೂ ಕಾಲೇಜಿನ ಕೀರ್ತಿಯನ್ನು ಹೇಚ್ಚಿಸಿದ್ದಾಳೆ.

ಇಂದು ವಿಜಯಪೂರದ ವಿಶ್ವವಿದ್ಯಾಲಯದಲ್ಲಿ ನಡೆದ ವಿವಿಯ 17 ನೇಯ ಘಟಿಕೋತ್ಸವದಲ್ಲಿ ವಿಶ್ವ ವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೌರವಾನ್ವಿತ ಘನತೆವತ್ತ ರಾಜ್ಯಪಾಲರಾದ ಶ್ರೀ ಥಾವರಚಂದ ಗೇಹ್ಲೋಟ್ ಚಿನ್ನದ ಪದಕ ನೀಡಿ ಗೌರವಿಸಿದರು.

ಈ ವಿಧ್ಯಾರ್ಥಿನಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳ್ಳಿ, ಜಂಟಿ ಕಾರ್ಯದರ್ಶಿ ಡಾ ಕೈಲಾಸ ಪಾಟೀಲ್ ಸಂಚಾಲಕರಾದ ನಾಗಣ್ಣ ಘಂಟಿ, ಅರುಣಕುಮಾರ ಪಾಟೀಲ್,ಅನಿಲಕುಮಾರ ಮರಗೋಳ ಹಾಗೂ ಎಲ್ಲ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಮನೋವಿಜ್ಞಾನ ವಿಷಯದ ಮುಖ್ಯಸ್ಥರಾದ ಛಾಯಾ ಪಾಟೀಲ್ ಹಾಗೂ ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.