ಉತ್ತಮ ಜೀವನಕ್ಕೆ ಪುಸ್ತಕಗಳು ಪ್ರೇರಣೆ :ಸಿದ್ದಗಂಗಾ ಕಿರಿಯ ಶ್ರೀಗಳು
ಉತ್ತಮ ಜೀವನಕ್ಕೆ ಪುಸ್ತಕಗಳು ಪ್ರೇರಣೆ :ಸಿದ್ದಗಂಗಾ ಕಿರಿಯ ಶ್ರೀಗಳು
ಕಲಬುರಗಿ :ಪುಸ್ತಕ ಓದುವುದರಿಂದ ಮನುಷ್ಯನ ಜೀವನ ಪರಿವರ್ತನೆಯಾಗುತ್ತದೆ. ಸರಳ ಜೀವನ, ಉನ್ನತ ಯೋಚನೆಗಳಿಗೆ ಪ್ರೇರಣೆಯಾಗುತ್ತವೆ' ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಬುಕ್ ಮಾಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
'ಬೇರೆಯವರಿಗೆ ಯಾವುದೇ ಉಡುಗೊರೆಗಳನ್ನು ನೀಡದೆ, ಅವರಿಗೆ ಪುಸ್ತಕಗಳನ್ನು ನೀಡಿ, ಪುಸ್ತಕಗಳಿಂದ ಅವರಲ್ಲಿಯೂ ಜ್ಞಾನ ಬೆಳೆಯುತ್ತದೆ ಹಾಗೂ ನಿಮಗೆ ಒಂದು ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ' ಎಂದರು.
ಪೂಜ್ಯರಿಂದ ಆಶೀರ್ವಾದ ಪಡೆದ ಡಾ. ಬಸವರಾಜ ಕೊನೆಕ್ ಮಾತನಾಡಿ ಪುಸ್ತಕಗಳು ಶ್ರೀಮಂತರಿಗೆ ಮತ್ತು ವಿದ್ಯಾವಂತರಿಗೆ ಮಾತ್ರ ದೊರೆಯುವಂತಾಗದೆ, ಎಲ್ಲರಿಗೂ ದೊರೆಯುವಂತಾಗಬೇಕು'ಎನ್ನುವ ಉದ್ದೇಶದಿಂದ ಪುಸ್ತಕ ಮಾಲ್ ಸ್ಥಾಪಿಸಿದ್ದು ಜನಪ್ರಿಯ ಮಾಲಿಕೆ, ಸಾಹಿತ್ಯ ಮಾಲಿಕೆ, ವಿಜ್ಞಾನ ಮಾಲಿಕೆ ಅಂತಹ ಪುಸ್ತಕಗಳನ್ನು ಪ್ರಕಟಿಸಿ ಓದುಗರನ್ನು ಸೃಷ್ಟಿಸುವ ಕೆಲಸ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಾಡುತ್ತಿರುವೆವು ಎಂದರು.
ಇದೆ ಸಂದರ್ಭದಲ್ಲಿ ಸಿದ್ದಲಿಂಗ ಬಿ.ಕೊನೆಕ್, ಶರಣು ಬಿ. ಕೊನೆಕ್, ಪ್ರೀತಿ ಎಸ್. ಕೊನೆಕ್, ಹಾಗೂ ದೇವಿoದ್ರಪ್ಪ ಅವಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
