ಹಳೇ ಶಹಾಬಾದನಲ್ಲಿ ಬಸವ ಜಯಂತಿ ಉತ್ಸವ
ಹಳೇ ಶಹಾಬಾದನಲ್ಲಿ ಬಸವ ಜಯಂತಿ ಉತ್ಸವ
ನಾಗರಾಜ್ ದಂಡಾವತಿ ವರದಿ ಕಲಬುರಗಿ,.: ಜಿಲ್ಲೆಯ ಶಹಾಬಾದ ಪಟ್ಟಣದ ಹಳೇ ಶಹಾಬಾದಿನಲ್ಲಿ 893ನೇ ಬಸವ ಜಯಂತಿ ಉತ್ಸವದ ನಿಮಿತ್ಯ ಬಸವಾದಿ ಶರಣರ ಒಕ್ಕೂಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಹಳೇ ಶಹಾಬಾದ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಭವ್ಯ ಮೆರವಣಿಗೆ ಆಯೋಜಿಸಲಾಗಿದೆ.
ಏಪ್ರಿಲ್ 17 ಮತ್ತು 18 ರಂದು ಎರಡು ದಿನಗಳ ಕಾಲ ಸಂಜೆ 7 ಗಂಟೆಗೆ ಹಳೇ ಶಹಾಬಾದಿನ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ದಿ. ಸ್ಪಿರಿಟ್ ಕಲಾ ತಂಡ ಮತ್ತು ಚಿನ್ಮಯಿ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಏ.17ರ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸುವರು. ರಾವೂರು ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸಂಜಯ್ ಮಾಕಲ್ ಉಪನ್ಯಾಸ ನೀಡುವರು. ಏಪ್ರಿಲ್ 18ರ ಸಾಂಸ್ಕೃತಿಕ ಕಾರ್ಯಕ್ರಮಗಳುಕಲಬುರಗಿಯಮಕ್ಕಂಪುರ ಗದ್ದುಗೆ ಮಠದ ಪೂಜ್ಯ ಚರಲಿಂಗ ಮಹಾಸ್ವಾಮಿಗಳ ನೇತೃತ್ವ ಮತ್ತು ಶ್ರೀ ವೀರಭದ್ರೇಶ್ವರ ಚಾರಿಟೇನಲ್ ಟ್ರಸ್ಟ್ ಅಧ್ಯಕ್ಷಬಸವರಾಜ ತರನಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಭವ್ಯ ಮೆರವಣಿಗೆ: ಏಪ್ರಿಲ್ 20 ರಂದು ಸಂಜೆ 6ಗಂಟೆಗೆ ಹಳೇಶಹಾಬಾದಿನಲ್ಲಿ ನಡೆಯುವ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಿ.ಪಿ.ಐ ಪರಶುರಾಮ ವನಂಜಕರ್ ಚಾಲನೆ ನೀಡುವರು. ಶಹಾಬಾದ ಹಡಪದ ಅಪ್ಪಣ್ಣನವರ ಮಠದ ಪುಜ್ಯ ರಾಜಶಿವಯೋಗಿಗಳ ನೇತೃತ್ವ ಮತ್ತು ಶಹಾಬಾದ ತಾಲೂಕು ಜಾಗತಿ-ಕ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಬಸವಣಪ್ಪ ವಾಲಿ ಅಧ್ಯಕ್ಷತೆಯಲ್ಲಿ ನಡೆಯುವ ಮೆರವಣಿಗೆಯಲ್ಲಿ ಸ್ಥಳೀಯ ಅನೇಕ ಮುಖಂಡರು ಭಾಗಿಯಾಗುವರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಗೌಡ ಪೊ. ಪಾಟೀಲ ಧ್ವಜಾರೋಹಣ ಮಾಡುವರು
