ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ

ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ

ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ

ನಿನ್ನೆ ದಿನ ನರೇಗಲ್ಲದಲ್ಲಿ ಜರುಗಿದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ಈಗಾಗಲೇ ನರೇಗಲ್ಲ ಭಾಗದಲ್ಲಿ ಪ್ರಕಟಗೊಂಡ ಪುಸ್ತಕಗಳ ಭಂಡಾರವನ್ನು ಬಿಚ್ಚುವ ಮೂಲಕ ಉದ್ಘಾಟಿಸಿ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಎಲ್ಲರೂ ತಮ್ಮ ಮನೆಯಲ್ಲಿ ದೇವರ ಕೋಣೆ ಇರುವಂತೆ ಪುಸ್ತಕಗಳ ಕೋಣೆ ಮಾಡಿಕೊಳ್ಳಿ ಎಂದು ನರೇಗಲ್ಲ ಭಾಗದ ಕೆಲವು ಮನೆಗಳಿಗೆ ಹೋದಾಗ ಅಲ್ಲಿ ಕಂಡ ಪುಸ್ತಕ ಪ್ರೇಮದ ಭಾವವನ್ನು ಹಂಚಿಕೊಂಡರು 

ಅಧ್ಯಕ್ಷತೆ ವಹಿಸಿದ್ದ ಶ್ರೀ MS ದಡೆಸೂರಮಠ ಕನ್ನಡ ಪ್ರಾಧಿಕಾರ ಈ ಭಾಗದ ಸಾಹಿತ್ಯ ಗುರುತಿಸುವತ್ತ ಗಮನಹರಿಸಬೇಕು ಎಂದು ನುಡಿದರು. ಅತಿಥಿಗಳಾಗಿ ಬ್ರಹ್ಮಕುಮಾರಿ ಸವಿತಕ್ಕ ಬೀಚಿ ಬಳಗದ ಅಧ್ಯಕ್ಷರಾದ ಶಿವಯೋಗಿ ಜಕ್ಕಲಿ ಸಾಹಿತ್ಯ ಚಿಂತಕರಾದ ರವೀಂದ್ರನಾಥ ದೊಡ್ಡಮೇಟಿ ಕನ್ನಡ ಜಾನಪದ ಪರಿಷತ್ ತಾಲೂಕ ಅಧ್ಯಕ್ಷರಾದ MK ಬೇವಿನಕಟ್ಟಿ ಎ ಎಸ್ ಮಕಾನದಾರ ಆಗಮಿಸಿದ್ದರು. 

ಕಾರ್ಯಕ್ರಮದಲ್ಲಿ ಎಂ ಕೆ ಬೇವಿನಕಟ್ಟಿ ಸ್ವಾಗತಿಸಿ ರವಿ ದೇವರಡ್ಡಿ ಪ್ರಸ್ಥಾವಿಕ ನುಡಿಯಾಡಿದರು ಕೆ ಪಿ ಸಾಲಿಮಠ ಸನ್ಮಾನಿತರ ಪರವಾಗಿ ಮಾತನಾಡಿದರು ವಿ ಎ ಕುಂಬಾರ ನಿರೂಪಿಸಿ ಕೆ ಎಸ್ ಕಳಕಣ್ಣವರ ವಂದಿಸಿದರು 

ಕಾರ್ಯಕ್ರಮದಲ್ಲಿ ಸಾಹಿತಿಗಳು ಸಾಹಿತ್ಯ ಪ್ರೇಮಿಗಳು ಮಾಧ್ಯಮ ಪ್ರತಿನಿಧಿಗಳು ಭಾವಹಿಸಿದ್ದರು

*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*