ವಕೀಲರ ಸಂಘದಲ್ಲಿ ದಾಸಿಮಯ್ಯ ಜಯಂತಿ: ವಚನಗಳ ಮಹತ್ವ ಕುರಿತು ಉಪನ್ಯಾಸ

ವಕೀಲರ ಸಂಘದಲ್ಲಿ ದಾಸಿಮಯ್ಯ ಜಯಂತಿ: ವಚನಗಳ ಮಹತ್ವ ಕುರಿತು ಉಪನ್ಯಾಸ

ವಚನ ಸಾಹಿತ್ಯ ವಿಶ್ವಕ್ಕೆ ಮಾರ್ಗದರ್ಶಿ:: ನಿವೃತ್ತ ನ್ಯಾಯಾಧೀಶ ಬಿ.ವಿ. ಪಾಟೀಲ

ಗುಲಬರ್ಗಾ ವಕೀಲರ ಸಂಘದಲ್ಲಿ ದೇವರ ದಾಸಿಮಯ್ಯನವರ 1047ನೇ ಜಯಂತಿ ಆಚರಣೆ

ಕಲಬುರಗಿ: ನಗರದ ಗುಲಬರ್ಗಾ ವಕೀಲರ ಸಂಘದಲ್ಲಿ ಇತ್ತೀಚೆಗೆ ದೇವರ ದಾಸಿಮಯ್ಯನವರ 1047ನೇ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. 

 ನಿವೃತ್ತ ನ್ಯಾಯಾಧೀಶ ಬಿ.ವಿ. ಪಾಟೀಲ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇವರ ದಾಸಿಮಯ್ಯನವರ ವಚನ ಸಾಹಿತ್ಯ ಮತ್ತು ಅವರ ವೈಚಾರಿಕತೆ ವಿಶ್ವಕ್ಕೆ ಮಾದರಿ  ಎಂದು ಹೇಳಿದರು.

“ಇಂದು ನಾನು ಆಕಸ್ಮಿಕವಾಗಿ ನನ್ನ ಮಗನ ಮದುವೆ ಆಮಂತ್ರಣ ನೀಡಲು ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ದಾಸಿಮಯ್ಯನವರ ‘ಸತಿ ಪತಿ ಒಂದಾದ ಭಕ್ತಿ ಹಿತವಾಗಿಪುತು ಶಿವಂಗೆ’ ಎಂಬ ವಚನ ಸಂಸಾರ ಜೀವನಕ್ಕೆ ಮಹತ್ತರ ಮಾರ್ಗದರ್ಶನ ನೀಡುತ್ತದೆ,” ಎಂದು ತಿಳಿಸಿ ಇದೇ ಸಂದರ್ಭದಲ್ಲಿ ವಕೀಲರಿಗೆ ಮದುವೆಗೆ ಆಗಮಿಸಲು ಕೋರಿದರು

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮಿನಾರಾಯಣ ಮಾತನಾಡಿ, ವಿಶ್ವಕ್ಕೆ ಕನ್ನಡದ ವಚನ ಸಾಹಿತ್ಯವೇ ಮಾರ್ಗದರ್ಶಕವಾಗಿದೆ. ಮಾನವಕುಲಕ್ಕೆ ಶರಣ ಧರ್ಮದ ಮೂಲಕ ಜ್ಞಾನ ಮತ್ತು ಅರಿವು ನೀಡಿದ ದೇವರ ದಾಸಿಮಯ್ಯನವರು ಧರ್ಮಗುರುಗಳಾಗಿ ಕಂಗೊಳಿಸಿದ್ದಾರೆ ಎಂದು ಹೇಳಿದರು. 

 ವಕೀಲರ ಸಂಘದ ಅಧ್ಯಕ್ಷರಾದ ಎಸ್.ವಿ. ಪಸಾರ ಅವರ ಅಧ್ಯಕ್ಷತೆ ವಹಿಸಿದ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು 

 ನೇಕಾರ ಸಮುದಾಯದ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಕ. ನೇಕಾರ ಸಮುದಾಯ ವಕೀಲರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ವಿಶೇಷ ಉಪನ್ಯಾಸ ನೀಡಿದರು

 ವಕೀಲರ ಸಂಘದ ಕಾರ್ಯದರ್ಶಿ ಸಿದ್ದು ವಾಡಿ ಅವರು ನಿರೂಪಿಸಿ ವಂದಿಸಿದರು. ಅನೇಕ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು, ಮಹಿಳಾ ವಕೀಲರು, ಯುವ ವಕೀಲರು ಸೇರಿದಂತೆ ಹಲವರು ಉಪಸ್ಥಿತರಿದ್ದರು .