ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಅಪಾಯ - ಶರಣಪ್ಪ ಸಲದಾಪುರ.

ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಅಪಾಯ - ಶರಣಪ್ಪ ಸಲದಾಪುರ.

ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಅಪಾಯ - ಶರಣಪ್ಪ ಸಲದಾಪುರ.

ಶಹಪುರ : ಮಾದಕ ವಸ್ತು ಸೇವನೆ ಮಾಡುವುದರಿಂದ, ಆರೋಗ್ಯ ಹಾಳಾಗುವುದರ ಜೊತೆಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ,ಇಂಥ ದುಶ್ಚಟಗಳಿಂದ ಯುವ ಜನತೆ ದೂರವಿರಿ ಎಂದು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲದಾಪುರ ಸಲಹೆ ನೀಡಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ.ಟ್ರಸ್ಟ್ ವತಿಯಿಂದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಯಥೇಚ್ಛವಾಗಿ ಯುವ ಸಮೂಹ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಯೋಜನಾ ನಿರ್ದೇಶಕರಾದ ವಸಂತಗೌಡ ಮಾತನಾಡಿ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು,ಜೊತೆಗೆ ಸಂಘ ಸಂಸ್ಥೆಗಳು ಹಾಗೂ ಸರ್ಕಾರಗಳು ಇನ್ನೂ ಹೆಚ್ಚೆಚ್ಚು ಜಾಗೃತಿ ಜಾಥಾ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಿ.ವೀರೇಂದ್ರ ಹೆಗ್ಡೆಯವರು ಮಾತೋಶ್ರೀ ಹೇಮಾವತಿ ಅಮ್ಮನವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಕೆಟ್ಟ ದುಷ್ಪರಿಣಾಮಗಳು ಬೀರಿ.ಅದ ರಿಂದ ಕುಟುಂಬದಲ್ಲಿ ಉಂಟಾಗುವ ಆರ್ಥಿಕ ನಷ್ಟದ ಕುರಿತು ಸಮಗ್ರವಾಗಿ ತಿಳಿಪಡಿಸಿ ಮನವರಕೆ ಮಾಡಿಕೊಟ್ಟು, ದುಶ್ಚಟಗಳಿಂದ ದೂರ ಉಳಿದು,ಸಮಾಜದ ಒಳ್ಳೆಯ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ: ದೇವಿಪ್ರಸಾದ್ ಶೆಟ್ಟಿ ಅವರು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಸಮಗ್ರ ಮಾಹಿತಿ ನೀಡುವುದರ ಜೊತೆಗೆ,ಮಾದಕ ವಸ್ತುಗಳಿಂದ ದೂರ ಉಳಿದು, ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ ಎಂದು ಸಲಹೆ ಮತ್ತು ಸೂಚನೆಗಳು ನೀಡಿದರು.

ಕಾಲೇಜಿನ ಡೀನ್ ಪ್ರಕಾಶ್ ಕೂಚನೂರ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆ ಮೇಲೆ ಯೋಜನಾಧಿಕಾರಿಗಳಾದ ಕುಮಾರ,ಜನ ಜಾಗೃತಿ ವೇದಿಕೆ ಸದಸ್ಯ ಬಸವರಾಜ,ಕಾಲೇಜು ಸಿಬ್ಬಂದಿಗಳಾದ ರಾಜು ಚೌಹಾಣ, ಉಪನ್ಯಾಸಕರಾದ ಸಂಗೀತ,ಕೃಷಿ ಮೇಲ್ವಿಚಾರಕರ ಮಹಾಲಿಂಗ,ಸಹಾಯಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.