ನರೇಗಲ್ಲದಲ್ಲಿ ಭಾರತಿಯ ಜನಗಣತಿ–2027 ತರಬೇತಿ ಕಾರ್ಯಕ್ರಮ
ನರೇಗಲ್ಲದಲ್ಲಿ ಭಾರತಿಯ ಜನಗಣತಿ–2027 ತರಬೇತಿ ಕಾರ್ಯಕ್ರಮ
ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ
ನರೇಗಲ್ಲ: ಭಾರತಿಯ ಜನಗಣತಿ–2027ರ ಸಮೀಕ್ಷಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 06, 07 ಮತ್ತು 08 ಏಪ್ರಿಲ್ 2026 ರಂದು ಸೋಮವಾರದಿಂದ ಬುಧವಾರದವರೆಗೆ ಪ್ರತಿದಿನ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನರೇಗಲ್ಲ ಪಟ್ಟಣದ ರೋಟರಿ ಭವನದಲ್ಲಿ ಈ ತರಬೇತಿ ನಡೆಯಲಿದೆ.
ಪಟ್ಟಣ ಪಂಚಾಯತ್ ನರೇಗಲ್ಲದ ಮುಖ್ಯಾಧಿಕಾರಿಯಾಗಿರುವ ಹಾಗೂ ಭಾರತಿಯ ಜನಗಣತಿ–2027ರ ಚಾರ್ಜ್ ಅಧಿಕಾರಿಯಾಗಿರುವ ಪಚ್ಚಿ ಮಲ್ಲೇಶ ಅವರು ಈ ಕುರಿತು ಮಾಹಿತಿ ನೀಡಿದ್ದು, ಗಣತಿದಾರರು ಮತ್ತು ಮೇಲ್ವಿಚಾರಕರು ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ಸಹಕರಿಸುವಂತೆ ಮನವಿ ಮಾಡಿದರು. ಜೊತೆಗೆ ಈ ತರಬೇತಿ ಕಾರ್ಯಕ್ರಮದ ಕುರಿತು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸುವಂತೆ ವಿನಂತಿಸಲಾಗಿದೆ.
ವರದಿ: ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ.
