ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು 'ಮರು ಸ್ವಾತಂತ್ರ್ಯೋತ್ಸವವಾಗಿ ಆಚರಿಸಲು: ನ್ಯಾಯವಾದಿ ಜೇನವೆರಿ ಮನವಿ
ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು 'ಮರು ಸ್ವಾತಂತ್ರ್ಯೋತ್ಸವವಾಗಿ ಆಚರಿಸಲು: ನ್ಯಾಯವಾದಿ ಜೇನವೆರಿ ಮನವಿ
ಕಲಬುರಗಿ, ಜು. 6: ರಾಜ್ಯದ ಯುವ ಸಬಲೀಕರಣ, ಐಟಿ ಹಾಗೂ ಗೃಹ ಖಾತೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಸೋಮವಾರ ಮಧ್ಯಾಹ್ನ ಕಲಬುರಗಿಯ ಕಚೇರಿಯಲ್ಲಿ ಭೇಟಿ ಮಾಡಿದ ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಯುವ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜೇನವೆರಿ ವಿನೋದಕುಮಾರ, ಎಸ್ ಅವರು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹೈದರಾಬಾದ್ ವಿಮೋಚನಾ ದಿನಾಚರಣೆಗೆ ಸಂಬಂಧಿಸಿದ ಮನವಿಯನ್ನು ಸಲ್ಲಿಸಿದರು.
ನೈಜ ಹೋರಾಟಗಾರರ ಇತಿಹಾಸವನ್ನು ಸತ್ಯ ಘಟನೆ ಆಧಾರ ಮೇಲೆ ಆಚರಣೆ ಮಾಡಬೇಕು, ಪ್ರತಿ ವರ್ಷ ತಪ್ಪು ದಿನ ದಂದು ಸೆಪ್ಟೆಂಬರ್ ದಿ.17 ರಂದು ಆಚರಿಸುತ್ತಿರುವ ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ತಿದ್ದುಪಡಿ ಗೊಳಿಸಿ ದಿ. 18 ರಂದು "ಮರು ಸ್ವಾತಂತ್ರ್ಯೋತ್ಸವ" ಎಂದು ಮರುನಾಮಕರಣ ಮಾಡಿ ಆಚರಿಸುವ ಕುರಿತು ಸಚಿವ ಸಂಪುಟದಲ್ಲಿ ಸೂಕ್ತ ತಿದ್ದುಪಡಿ ಮಾಡಿ ಹೊಸ ಆದೇಶ ಹೊರಡಿಸಬೇಕೆಂದು ಅವರು ಮನವಿ ಮಾಡಿದರು.
ಕಾಗದರಹಿತ (ಪೇಪರ್‌ಲೆಸ್) ವಿಧಾನದಲ್ಲಿ ಕಾರ್ಯ ಮಾಡುತ್ತಿರುವ ನೂತನ ಸರಕಾರಕ್ಕೆ, ತಮ್ಮ ಕಾನೂನಾತ್ಮಕ ಪ್ರಸ್ತಾವನೆಯನ್ನು ಮೊಬೈಲ್ ಮೂಲಕ ಸಚಿವರಿಗೆ ಪ್ರದರ್ಶಿಸಿದ ಅವರು, ಸ್ವಾತಂತ್ರ್ಯ ಮತ್ತು ವಿಮೋಚನೆಗಾಗಿ ಹೋರಾಡಿದ ಹೋರಾಟಗಾರರ ತ್ಯಾಗವನ್ನು ಪರಿಗಣಿಸಿ ನ್ಯಾಯಯುತ ನಿರ್ಧಾರ ಕೈಗೊಳ್ಳುವಂತೆ ಕೋರಿದರು.
ಸಚಿವರು ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವ ಮೂಲಕ ಭರವಸೆ ನೀಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ವಕೀಲರಾದ ಸುಭಾಷ್ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
