ಕಲಬುರಗಿ ಜಿಲ್ಲೆಯನ್ನು 'ಬರಪೀಡಿತ ಜಿಲ್ಲೆ' ಎಂದು ಘೋಷಿಸಲು ಕರವೇ ಆಗ್ರಹ

ಕಲಬುರಗಿ ಜಿಲ್ಲೆಯನ್ನು 'ಬರಪೀಡಿತ ಜಿಲ್ಲೆ' ಎಂದು ಘೋಷಿಸಲು ಕರವೇ ಆಗ್ರಹ

ಕಲಬುರಗಿ ಜಿಲ್ಲೆಯನ್ನು 'ಬರಪೀಡಿತ ಜಿಲ್ಲೆ' ಎಂದು ಘೋಷಿಸಲು ಕರವೇ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯ)ಘಟನೆಯ ಜಿಲ್ಲಾಧ್ಯಕ್ಷ ಶರಣು ಬಿ ಹೊಸಮನಿ ಅವರು ಆಗ್ರಹಿಸಿದ್ದಾರೆ.

                ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,

ಈ ಬಾರಿ ಮುಂಗಾರು ಮಳೆ ಅಭಾವದಿಂದ ಜಿಲ್ಲೆಯ ಕೆಲವು ಕೆರೆಗಳು ಹಾಗೂ ಕಟ್ಟೆಗಳು ಬರಿದಾಗಿದೆ. ಇದರಿಂದ ರೈತರು ಬೆಳೆದ ಕಬ್ಬು,ಜೋಳ,ತೊಗರಿ,ರಾಗಿ,ತೆಂಗು,ಬಾಳೆ ಹಾಗೂ ಬೆಳೆಗಳು ನೀರಿನ ಅಭಾವದಿಂದ ಒಣಗುವ ಹಂತಕ್ಕೆ ಬಂದಿದೆ ಎಂದು ಅವರು ಮನವಿ ಮಾಡಿಕೊಂಡರು.

   ಸಕಾಲದಲ್ಲಿ ಮುಂಗಾರು ಮಳೆ ಆರಂಭವಾಗಿದ್ದರೆ ರೈತರ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳವ ಎಲ್ಲಾ ಅವಕಾಶಗಳು ಇತ್ತು. ಆದರೆ, ಮಳೆ ಕೊರತೆಯಿಂ ದಾಗಿ ಬೆಳೆನಷ್ಟವಾಗಿ ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತವು ಚರ್ಚೆ ನಡೆಸಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವ ಜೊತೆಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ.