ಶಿಕ್ಷಣದ ಜೊತೆ ಸಂಸ್ಕಾರ - ಸಂಸ್ಕೃತಿ ಬೋಧಿಸುವ ಗುರುಗಳು ಶ್ರೇಷ್ಠ: ಎಡನೀರು ಶ್ರೀ

ಶಿಕ್ಷಣದ ಜೊತೆ ಸಂಸ್ಕಾರ - ಸಂಸ್ಕೃತಿ ಬೋಧಿಸುವ ಗುರುಗಳು ಶ್ರೇಷ್ಠ: ಎಡನೀರು ಶ್ರೀ

ಶಿಕ್ಷಣದ ಜೊತೆ ಸಂಸ್ಕಾರ - ಸಂಸ್ಕೃತಿ ಬೋಧಿಸುವ ಗುರುಗಳು ಶ್ರೇಷ್ಠ: ಎಡನೀರು ಶ್ರೀ

ಶಿಕ್ಷಕ ಬನರಿ ನಾರಾಯಣ ಭಟ್ಟರ ಗೌರವಾರ್ಥ "ಸುಧಾಂಶು" ಅಭಿನಂದನಾ ಗ್ರಂಥ ಲೋಕಾರ್ಪಣೆ

ವರದಿ : ಡಾ.ಸದಾನಂದ ಪೆರ್ಲ ಕಾಸರಗೋಡು: ಒಳ್ಳೆಯ ಗುರುಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ - ಸಂಸ್ಕಾರಗಳ ಬೋಧನೆ ಯೊಂದಿಗೆ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳ ಸೃಷ್ಟಿಗೆ ಕಾರಣಕರ್ತರಾಗುತ್ತಾರೆ. ಸ್ವತಃ ತಾವೇ ಒಂದು ಪಠ್ಯವಾಗಿ ಶಾಶ್ವತವಾಗಿ ಜನಮನದಲ್ಲಿ ಉಳಿದುಕೊಳ್ಳುತ್ತಾರೆ ಎಂದು ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

    ಬದಿಯಡ್ಕ ಸಮೀಪದ ಪೆರಡಾಲದ ಶ್ರೀ ಉದನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜುಲೈ 5 ರಂದು (ಭಾನುವಾರ) ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಬನರಿ ನಾರಾಯಣ ಭಟ್ಟರಿಗೆ ಗೌರವಪೂರ್ವಕವಾಗಿ ಸಮರ್ಪಿತ "ಸುಧಾಂಶು"

ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿ ಶ್ರೇಷ್ಠ ಶಿಕ್ಷಕರ ಸಾಧನೆ ಮತ್ತು ಜೀವನದ ತತ್ವವನ್ನು ಭವಿಷ್ಯದ ಜನಾಂಗಕ್ಕೆ ತಿಳಿಸುವ ಈ ಗ್ರಂಥದ ಬಿಡುಗಡೆಯು ಆದರ್ಶದ ಕೆಲಸ ಮತ್ತು ಆರೋಗ್ಯಯುತ ಸಮಾಜದ ಲಕ್ಷಣ ವಾಗಿದೆ. ಶಿಕ್ಷಕ ಸಮಾಜ ಪರಿವರ್ತನೆಯನ್ನುಂಟುಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳ ನಿರ್ಮಾಣಕ್ಕೆ ಕಾರಣಕರ್ತನಾಗಿ ಪೂರ್ಣ ವ್ಯಕ್ತಿತ್ವದ ನಿರ್ಮಾಣಕ್ಕೆ ರೂವಾರಿಗಳಾಗಿ ಶ್ರೇಷ್ಠ ಶಿಕ್ಷಕರಾದ ಬನರಿಯವರಂತೆ ಮಾದರಿಯಾಗಿ ಜನಮನದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಆಧುನಿಕ ಶಿಕ್ಷಣ ಪದ್ಧತಿ ಶಿಕ್ಷಕರ ಕೈಕಟ್ಟಿ ಹಾಕಿದ್ದರೂ ಉತ್ತಮ ಶಿಕ್ಷಕರಾದವರು ಮಾತ್ರ ತಮ್ಮ ಪ್ರತಿಭಾ ಕೌಶಲದಿಂದ ಸಾಧಕ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುತ್ತಾರೆ. ಅಂತಹ ಶ್ರೇಷ್ಠ ಬಗ್ಗೆ ಇರುವ ಈ ಕೃತಿ ಶಾಲೆಗಳ ಎಲ್ಲ ಗ್ರಂಥಾಲಯಗಳಲ್ಲೂ ಲಭ್ಯವಾಗಲಿ ಎಂದು ಹಾರೈಸಿದರು. 

ಗುರುವಿಗೆ ಸಾರ್ಥಕ ಭಾವ

ಶಿಕ್ಷಕನಾಗಿ ಬದ್ಧತೆಯಿಂದ ಕೆಲಸ ಮಾಡಿ ಶ್ರೇಷ್ಠ ವಿದ್ಯಾರ್ಥಿಗಳನ್ನು ಪಡೆದಿರುವುದು ನನ್ನ ಜೀವನದ ಸಾರ್ಥಕ ಭಾವ ಎಂದು ಶ್ರೇಷ್ಠ ಚಿಂತಕ, ಶಿಕ್ಷಕ, ಹಾಗೂ ಧಾರ್ಮಿಕ ಮುಂದಾಳು ಬನರಿ ನಾರಾಯಣ ಭಟ್ಟರು ಅಭಿವಂದನಾ ನುಡಿಯಲ್ಲಿ ತಿಳಿಸಿದರು. ಶಿಕ್ಷಕ ತನ್ನ ಪ್ರಾಮಾಣಿಕ ಸೇವೆಗೆ ಪಡೆಯುವ ದೊಡ್ಡ ಗೌರವವೆಂದರೆ ಭವಿಷ್ಯದ ಕುಡಿಗಳಾಗಿ ಸಮಾಜಕ್ಕೆ ಕೊಡುಗೆಯಾಗ ಬಲ್ಲ ವಿದ್ಯಾರ್ಥಿಗಳ ಮೂಲಕ ಎಂದು ಹೇಳಿದರು ತನ್ನ ಬಗ್ಗೆ ಅಭಿನಂದನ ಗ್ರಂಥ ಹೊರ ತಂದ ಸರ್ವರಿಗೂ ಶುಭವಾಗಲಿ ಎಂದು ಹಾರೈಸಿ ಈ ಮೂಲಕ ತನ್ನ ಜನ್ಮ ಸಾರ್ಥಕವಾಗಿದೆ ಎಂದು ಭಾವುಕರಾಗಿ ನುಡಿದರು.

ಮಂಜೇಶ್ವರ‌ ಗೋವಿಂದ ಪೈ 

ಸ್ಮಾರಕ ಸರಕಾರಿ ಕಾಲೇಜು ಪ್ರಾಂಶುಪಾಲ ಡಾ.ಮಹಮ್ಮದಾಲಿ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ ಬನರಿಯಂತಹ ಶ್ರೇಷ್ಠ ಶಿಕ್ಷರಿಂದಾಗಿ ಸಾಧನೆ .ಪರೋಪಕಾರ ತಾಳ್ಮೆ ಸಹನೆ ಅವರ ವ್ಯಕ್ತಿ ವಿಶೇಷವಾಗಿದ್ದು ಶಿಕ್ಷಣ ಜೊತೆಗೆ ಸಂಸ್ಕಾರ ಸಂಸ್ಕೃತಿ ಧಾರೆಯೆರೆದ ಅನುಪಮ ಸೇವೆ ಎಂದರು. 

ಗ್ರಂಥದ ಸಂಪಾದಕ ರಾಜೇಂದ್ರ ಬಜಕೂಡ್ಲು ಮತ್ತು ಉದಯ ಕೃಷ್ಣ ಜಿ ಅವರು ಗ್ರಂಥಾವಲೋಕನ ನಡೆಸಿದರು. ಮುಖ್ಯ ಅತಿಥಿಗಳಾದ ಕುಲಪುರೋಹಿತ ವೇದಮೂರ್ತಿ ಶಿವಶಂಕರ ಭಟ್ಟ, ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ಟ ಕಜಂಪಾಡಿ, ನಿವೃತ್ತ ಅಧ್ಯಾಪಕ ಬಳ್ಳಂಬೆಟ್ಟು ಈಶ್ವರ ಭಟ್, ಡಾ.ಜಯದೇವ ಕಂಗಿಲ, ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಅವರು ಶುಭಾಶಂಸನೆಗೈದರು.ಪ್ರಕಾಶಕರಾದ ವಿನಯ್ ಬನರಿ (ಯುಎಸ್ಎ) ಸ್ವಾಗತ ಮತ್ತು ಪ್ರಸ್ತಾವಿಕ ಭಾಷಣ ಮಾಡಿದರು.ಬನರಿ ನಾರಾಯಣ ಭಟ್ಟರ ಪತ್ನಿ ರಾಜಲಕ್ಷ್ಮಿ ಬನರಿ ಉಪಸ್ಥಿತರಿದ್ದರು. ಶ್ರೀಯಾ ಬನರಿ ವಂದಿಸಿದರು. ಇಂಚರ ಬನರಿ ಪ್ರಾರ್ಥನ ಗೀತೆ ಹಾಡಿದರು. ದೇಶ ವಿದೇಶಗಳಿಂದ ಬನರಿ ನಾರಾಯಣ ಭಟ್ಟರ ಶಿಷ್ಯಂದಿರು ಆಗಮಿಸಿ ಅವರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಿದರು.ನಂತರ ನೆರೆದ ಎಲ್ಲರಿಗೂ ಸುಧಾಂಶು ಅಭಿನಂದನಾ ಗ್ರಂಥವನ್ನು ನೀಡಲಾಯಿತು.