ನಗರದ ರಸ್ತೆಗಳು: ದುರಸ್ತಿಗೆ ಜೆಡಿಎಸ್ ಆಗ್ರಹ

ನಗರದ ರಸ್ತೆಗಳು: ದುರಸ್ತಿಗೆ ಜೆಡಿಎಸ್ ಆಗ್ರಹ

ನಗರದ ರಸ್ತೆಗಳು: ದುರಸ್ತಿಗೆ ಜೆಡಿಎಸ್ ಆಗ್ರಹ

ನಾಗರಾಜ್ ದಂಡಾವತಿ ವರದಿ ಶಹಾಬಾದ : ನಗರದ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ತಗ್ಗು-ದಿಣ್ಣೆಗಳಿಂದ ಕೂಡಿದ್ದು, ಸಾರ್ವಜನಿಕರ ಹಾಗೂ ವಾಹನ ಸವಾರರ ಸಂಚಾರಕ್ಕೆ ನರಕಯಾತನೆಯಾಗಿ ಪರಿಣಮಿಸಿದೆ ಎಂದು ಜೆಡಿಎಸ ಪಕ್ಷದ ಅಧ್ಯಕ್ಷ ಅಬ್ದುಲ ಘನಿ ಸಾಬೀರ ಹೇಳಿದರು.

ಅವರು ಪತ್ರಿಕಾ ಮಾಧ್ಯಮದ ಜೊತೆ ರಸ್ತೆ ವಿಕ್ಷಣೆ ಮಾಡಿ,ಈ ರಸ್ತೆಗಳ ದುರಸ್ತಿ ಮತ್ತು ಹೊಸ ಬಿ.ಟಿ. (ಡಾಂಬರು) ರಸ್ತೆ ನಿರ್ಮಾಣಕ್ಕಾಗಿ ಬರೋಬ್ಬರಿ ಎರಡು ವರ್ಷಗಳ ಹಿಂದೆಯೇ ಕೋಟಿಗಟ್ಟಲೆ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ, ಒಂದಿಲ್ಲೊಂದು ಕುಂಟು ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇವರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದ ಧೋರಣೆಯಿಂ ದಾಗಿ ಸಾರ್ವಜನಿಕರು ಪ್ರತಿದಿನ ಅಪಘಾತದ ಭೀತಿಯಲ್ಲಿ ಬದುಕುವಂತಾಗಿದೆ. ಧೂಳಿನ ಸಮಸ್ಯೆಯಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಸಾರಿಗೆ ಬಿಡುಗಡೆಯಾಗಿರುವ ಕೋಟಿಗಟ್ಟಲೆ ಸಾರ್ವಜನಿಕ ಹಣ ಎಲ್ಲಿಗೆ ಹೋಯಿತು? ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾರ ಹಿತಾಸಕ್ತಿಗಾಗಿ ಕಾಮಗಾರಿಯನ್ನು ನನೆಗುದಿಗೆ ಹಾಕಿದ್ದಾರೆ ಎಂದು ಜೆ.ಡಿ.ಎಸ್. ಪಕ್ಷದವರು ತೀಕ್ಷಣವಾಗಿ ಪ್ರಶ್ನಿಸಿದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಕ್ಷಣವೇ ತಮ್ಮ ಕುಂಟು ನೆಪಗಳನ್ನು ಬದಿಗಿಟ್ಟು, ಇಂದಿನಿಂದಲೇ ನಗರದ ಮುಖ್ಯ ರಸ್ತೆಯ ಬಿ.ಟಿ. ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ, ಜೆ.ಡಿ.ಎಸ್. ಪಕ್ಷದ ವತಿಯಿಂದ ಸಾರ್ವಜನಿಕರನ್ನು ಸಂಘಟಿಸಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ನಗರದ ಪ್ರಮುಖ ವೃತ್ತದಲ್ಲಿ ಉಗ್ರ ಹೋರಾಟ ಹಾಗೂ ರಸ್ತೆ ತಡೆ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದರಿಂದಾಗುವ ಸಾರ್ವಜನಿಕ ಸಾರಿಗೆ ವ್ಯತ್ಯಯ ಹಾಗೂ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಿಗೆ ನೇರವಾಗಿ ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಜೆ.ಡಿ.ಎಸ್. ಪಕ್ಷದ ಪ್ರಮುಕರು ಈ ಮೂಲಕ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಎಂದು

ಈ ಸಂದರ್ಭದಲ್ಲಿ ಜೆಡಿಎಸ ಪಕ್ಷದ ಪ್ರಾಧಾನ ಕಾರ್ಯದರ್ಶಿ ಶ್ರೀಧರ ಕೊಲ್ಲೂರ, ಉಪಾಧ್ಯಕ್ಷ ಶೇ.ಮಹೇಬೂಬ ಗೋಗಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.