ದಂಡ ವಿನಾಯಿತಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಿʼ ಐ ಕೆ ಪಾಟೀಲ

ದಂಡ ವಿನಾಯಿತಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಿʼ ಐ ಕೆ ಪಾಟೀಲ

““ದಂಡ ವಿನಾಯಿತಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಿʼ ಐ ಕೆ ಪಾಟೀಲ

ಕಲಬುರ್ಗಿ: ಪಿಯುಸಿ ವಿಳಂಬ ದಾಖಲಾತಿ ದಂಡ ವಿನಾಯಿತಿ ಆದೇಶಕ್ಕೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಸ್ವಾಗತಿಸಿದೆ.

(06-07-2026 ಶಾಲಾ ಶಿಕ್ಷಣ ಇಲಾಖೆಯ ಆದೇಶದಂತೆ )ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1ನೇ ಮತ್ತು 2ನೇ ಪಿಯುಸಿಗೆ ವಿಳಂಬವಾಗಿ ಸೇರುವ ವಿದ್ಯಾರ್ಥಿಗಳಿಗೆ 670 ರೂ. ವಿಳಂಬ ಶುಲ್ಕ ಮತ್ತು 2220 ರೂ. ವಿಶೇಷ ದಂಡದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಇದರಿಂದ ಆರ್ಥಿಕವಾಗಿ ಹಿಂದುಳಿದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ಇದೇ ವಿನಾಯಿತಿ ವಿಸ್ತರಿಸಬೇಕು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಈರನಗೌಡ ಕೆ ಪಾಟೀಲ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.