ಹಳ್ಳಿಸಲಗರ ಗ್ರಾಮದ ಹನುಮಾನ ರಥೋತ್ಸವ
ಹಳ್ಳಿಸಲಗರ ಗ್ರಾಮದ ಹನುಮಾನ ರಥೋತ್ಸವ
ಆಳಂದ ತಾಲೂಕಿನ ಸುಕ್ಷೇತ್ರ ಹಳ್ಳಿಸಲಗರ ಗ್ರಾಮದ
ಗ್ರಾಮ ದೇವತಾ ಶ್ರೀಹನುಮಾನ 4ನೇ ವರ್ಷದ ರಥೋತ್ಸವ ಅದ್ಧೂರಿಯಾಗಿ ಜರುಗಿತು. 27.3.26 ರಿಂದ 4.4.26ರವರೆಗೆ ಮಹಾಲಿಂಗಯ್ಯ ಶಾಸ್ತ್ರೀಗಳು ಪುರಾಣ ಹೇಳಿದರು. 2.4 . 26. ರಿಂದ 4.4.2026ರವರೆಗೆ 6ಗಂಟೆಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಹಾಗೂ ಪ್ರವಚನವನ್ನು ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು ನೇರವೆರಿಸಿದರು.ಡೊಳ್ಳು ಕುಣಿತ, ಗೊಂಬೆ ಕುಣಿತ, ಅನೇಕ ಸಂಗೀತ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ನಂದಿಕೋಲ ಪಲ್ಲಕ್ಕಿ ಮೆರವಣಿಗೆ ತೇರು ಮೈದಾನಕ್ಕೆ ಬಂದು ತಲುಪಿತು. ಪುರವಂತರ ಕುಣಿತದ ನಂತರ ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ರಥೋತ್ಸವ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀ ಅಭಿನವ ಶ್ರೀಗಳಿಗೆ ಡಾ.ಬಿ.ಸಿ. ಪಾಟೀಲ ಕುಟುಂಬದ ವತಿಯಿಂದ ತುಲಾಭಾರ ಮಾಡಲಾಯಿತು.
ನಂತರ ಶ್ರೀಗಳು ಆಶಿರ್ವಚನ ನೀಡಿದರು.
ಜಾತ್ರೆಯಲ್ಲಿ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಭಕ್ತಿಯಿಂದ ಉಪಸ್ಥಿತರಿದ್ದರು.
ಡಾ. ಅವಿನಾಶ ಎಸ್. ದೇವನೂರ
