ಜುಲೈ 10 ರಂದು ಜಿಲ್ಲಾ ಮಟ್ಟದ ಕವಿಗೋಷ್ಠಿ
ಜುಲೈ 10 ರಂದು ಜಿಲ್ಲಾ ಮಟ್ಟದ ಕವಿಗೋಷ್ಠಿ
ಶಹಪುರ : ತಾಲೂಕಿನ ಸಗರ ಗ್ರಾಮದ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಗರನಾಡಿನ ಖ್ಯಾತ ವೈದ್ಯರು ಬರಹಗಾರರಾದ,ಡಾ: ದೇವೇಂದ್ರಪ್ಪ ಹಡಪದ ಅವರ, 68ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ,ಸಗರದ ಕಾವೇರಿ ವಿದ್ಯಾಮಂದಿರ ಹಾಗೂ ಕಲಾನಿಕೇತನ ಟ್ರಸ್ಟ್ ಸಗರ ಸಹಯೋಗದಲ್ಲಿ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಬಸವರಾಜ ಶಿಣ್ಣೂರ ಪ್ರಕಟಣೆಗೆ ತಿಳಿಸಿದ್ದಾರೆ.
ಬೀದರ - ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ, ಕೆ.ಇ.ಬಿ.ಎದುರುಗಡೆ ಇರುವ, ಬಾಪುಗೌಡ ನಗರದ,ಹೋಟೆಲ್ ಮಾತೋಶ್ರೀ ಸಭಾಂಗಣದಲ್ಲಿ, ಸಾಯಂಕಾಲ 5 ಗಂಟೆಗೆ,ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ತಮ್ಮ ಸ್ವರಚಿತ ಕವನ ವಾಚಿಸುವರು, ಆಸಕ್ತ ಯುವ ಕವಿಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗೆ 9902965535/ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುಬೇಕು ಎಂದು ತಿಳಿಸಿದ್ದಾರೆ.
