ಕಲಬುರಗಿ ಬಹುಮನಿ ಕೋಟೆ ಅಭಿವೃದ್ಧಿಪಡಿಸಲು ಸಿಎಂ ಡಿ.ಕೆ ಶಿವಕುಮಾರ ಅವರಿಗೆ ಕರವೇ ಮನವಿ

ಕಲಬುರಗಿ ಬಹುಮನಿ ಕೋಟೆ ಅಭಿವೃದ್ಧಿಪಡಿಸಲು ಸಿಎಂ ಡಿ.ಕೆ ಶಿವಕುಮಾರ ಅವರಿಗೆ ಕರವೇ ಮನವಿ

ಕಲಬುರಗಿ ಬಹುಮನಿ ಕೋಟೆ ಅಭಿವೃದ್ಧಿಪಡಿಸಲು ಸಿಎಂ ಡಿ.ಕೆ ಶಿವಕುಮಾರ ಅವರಿಗೆ ಕರವೇ ಮನವಿ

ಕಲಬುರಗಿ:ನಗರದ ಹೃದಯ ಭಾಗದಲ್ಲಿರು ಬಹುಮನಿ ಕೋಟೆಯನ್ನು ಅಭಿವೃದ್ದಿಪಡಿಸಿ ಹಾಗೂ ಕೋಟೆಯನ್ನು ಪ್ರವಾಸಿಗರ ತಾಣವಾಗಿ ಮಾಡಬೇಕು ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ನಗರ ಅಧ್ಯಕ್ಷ ಶರಣು ದ್ಯಾಮ ನೇತೃತ್ವದಲ್ಲಿ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.

 ಈ‌ ಕುರಿತು ಸಿಎಂಗೆ ಮನವಿ ಸಲ್ಲಿಸಿದ ಅವರು,ದೇಶದ ಅತಿ ದೊಡ್ಡ ಪ್ರಾಚೀನ ತೋಪನ್ನು ಹೊಂದಿರುವ ಕಲಬುರಗಿಯ ಬಹಮನಿ ಕೋಟೆಯಲ್ಲಿ ಸರಿಯಾದ ನಡಿಗೆ ಪಥ ಇಲ್ಲದಿರುವುದು ರಸ್ತೆಯಲ್ಲಿ ನೀರು ಹರಿಯುತ್ತಿರುವುದು. ಅಲ್ಲದೇ ಬೃಹತ್ ತೋಪು ವೀಕ್ಷಣೆಗೆ ಹೋಗುವ ದಾರಿ ಸಮರ್ಪಕವಾಗಿ ಇರುವುದಿಲ್ಲ. ಕೋಟೆಯಲ್ಲಿ ಗಿಡ-ಗಂಟಿಗಳು ಬೆಳೆದು ಕೋಟೆ ಹಾಳಾಗುತ್ತಿದೆ. ಹಾಗೂ ಕೋಟೆಯಲ್ಲಿ ವಾಸವಾಗಿರುವ ಜನರನ್ನು ಪ್ರತ್ಯೇಕವಾಗಿ ಮನೆ ನೀಡಿ ಸ್ಥಳಾಂತರಿಸುವದು. ಕೋಟೆಯಲ್ಲಿ ರ್ಸಾಜನಿಕರಿಗೆ ಮುಕ್ತವಾಗಿ ಓಡಾಟ ಮಾಡಲು ಅನುಕೂಲ ಮಾಡಿಕೊಡಬೇಕು. ಮತ್ತು ಕಲಬುರಗಿ ಬಹಮನಿ ಕೋಟೆ ಅಭಿವೃದ್ದಿ ಪಡಿಸಿ ಪ್ರವಾಸಿಗರ ತಾಣವಾಗಿ ನಿರ್ಮಾಣ ಮಾಡುವುದು, ಸಾರ್ವಜನಿಕರಿಗೆ ತಂಗುದಾಣ, ಲೈಟಿಂಗ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ವ್ಯವಸ್ಥೆ ಸೇರಿದಂತೆ ಇತರೆ ಬೇಡಿಕೆಗಳಿಗೆ ಸ್ಪಂದಿಸಬೇಕು. ಆದಕಾರಣ ತಾವುಗಳು ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಯಿಂದ ಕಲಬುರಗಿ ಬಹಮನಿ ಕೋಟೆ ಅಭಿವೃದ್ದಿ ಪಡಿಸಿ,ಪ್ರವಾಸಿಗರ ತಾಣವಾಗಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅನುವು ಮಾಡಿಕೊಡಬೇಕೆಂದು ಅವರು ಮನವಿ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಸಂಘಟನೆಯ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಗೋಪಾಲ‌ ನಾಟೀಕಾರ,ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ,ಕಲಬುರಗಿ ತಾಲೂಕು ಅಧ್ಯಕ್ಷ ವಿಜಯಕುಮಾರ ಅಂಕಲಗಿ,ಮಂಜುನಾಥ ಮಠಪತಿ,ಮನೋಹರ ಬೀರನೂರ ಸೇರಿದಂತೆ ಇತರರು ಇದ್ದರು.