ಶುಗರ್ ಕಂಟ್ರೋಲ್ ಅಕ್ಕಿ ಮಾರಾಟಕ್ಕೆ ‘ವರಾಹಿ ರಾಯಲ್ ಭವಾನಾ ರೈಸ್ ಕಂಪನಿ’ ಉದ್ಘಾಟನೆ
ಶುಗರ್ ಕಂಟ್ರೋಲ್ ಅಕ್ಕಿ ಮಾರಾಟಕ್ಕೆ ‘ವರಾಹಿ ರಾಯಲ್ ಭವಾನಾ ರೈಸ್ ಕಂಪನಿ’ ಉದ್ಘಾಟನೆ
ಕಲಬುರಗಿ: ನಗರದ ಜಫರಾಬಾದ್ ರಿಂಗ್ ರಸ್ತೆಯ ಬುರ್ಹಾನ್ ಬಿಸಿನೆಸ್ ಪಾರ್ಕ್‌ನಲ್ಲಿ ‘ವರಾಹಿ ರಾಯಲ್ ಭವಾನಾ ರೈಸ್ ಕಂಪನಿ (ಶುಗರ್ ಕಂಟ್ರೋಲ್ ರೈಸ್)’ಯನ್ನು ಗುರುವಾರ ಅದ್ದೂರಿಯಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಕಲಬುರಗಿ ಮಹಾಪೌರರಾದ ವರ್ಷಾ ಆರ್. ಜಾನೆ ಉದ್ಘಾಟಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯಪೂರಕ ಆಹಾರ ಉತ್ಪನ್ನಗಳ ಪರಿಚಯ ಮತ್ತು ವಿತರಣೆ ಸಮಾಜಕ್ಕೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಮಾತನಾಡಿ, ಹೊಸ ಉದ್ಯಮಗಳು ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಯುವ ಉದ್ಯಮಿಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಕಂಪನಿಯ ಕಲ್ಯಾಣ ಕರ್ನಾಟಕ ಅಧ್ಯಕ್ಷೆ ಸೌಭಾಗ್ಯ ಆರ್. ಲಸ್ಕರಿ ಮಾತನಾಡಿ, ಗುಣಮಟ್ಟದ ಹಾಗೂ ಆರೋಗ್ಯಕ್ಕೆ ಪೂರಕವಾದ ಶುಗರ್ ಕಂಟ್ರೋಲ್ ರೈಸ್ ಅನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈಸ್ ಕಂಪನಿಯ ಸಂಸ್ಥಾಪಕ ಸುಧೀರ್, ಕರ್ನಾಟಕ ಅಧ್ಯಕ್ಷ ಫಿರೋಜ್ ಖಾನ್, ಪಾಲುದಾರರಾದ ರಾಘವೇಂದ್ರ ಲಸ್ಕರಿ, ರಾಘು ಭಾರತಿ, ಕಾಂಗ್ರೆಸ್ ಮುಖಂಡ ಅಶೋಕ ವೀರನಾಯಕ್ ಸೇರಿದಂತೆ ಅನೇಕ ಉದ್ಯಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
