ಪರಿಸರ ರಕ್ಷಣೆ ಅಗತ್ಯ - ಸಾಹಿತಿ ಡಾ.ಹೊನ್ಕಲ್ ಅಭಿಮತ

ಪರಿಸರ ರಕ್ಷಣೆ ಅಗತ್ಯ - ಸಾಹಿತಿ ಡಾ.ಹೊನ್ಕಲ್ ಅಭಿಮತ

ಚಕೋರ ವೇದಿಕೆ ಪರಿಸರ ವಿಶೇಷ ಉಪನ್ಯಾಸ

ಪರಿಸರ ರಕ್ಷಣೆ ಅಗತ್ಯ - ಸಾಹಿತಿ ಡಾ.ಹೊನ್ಕಲ್ ಅಭಿಮತ

ಕಲಬುರಗಿ:ನೀರು,ಗಾಳಿ,ಬೆಳಕು,ಆರೋಗ್ಯ ಶುದ್ಧವಾಗಿರ ಬೇಕಾದರೆ ನಮ್ಮ ಪರಿಸರ ಕಾಳಜಿ ನಮ್ಮ ವಿದ್ಯಾರ್ಥಿಗಳಿಗೆ ಅರಿವು ಇರಬೇಕು. ಕಾಡು ಕಡಿಯುವ,ಮರ ಉರಳಿಸಿ ನಮ್ಮನ್ನು ನಾವು ಹಾನಿಗೆ ಒಳಪಡಿಸಿಕೊಳ್ಖುತ್ತಿದ್ದೇವೆ ನಮ್ಮ ಮುಂದಿನ ಯುವ ಜನಾಂಗಕ್ಕೆ ನಾವು ಪರಿಸರ ಶುದ್ಧವಾಗಿ ಇಡಬೇಕಾಗಿದೆ ಇದು ಪ್ರತಿಯೊಬ್ಬರ ಕರ್ತವ್ಯ ಎಂದು ಹಿರಿಯ ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅಭಿಮತ ವ್ಯಕ್ತಪಡಿಸಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಘಡಕ ಹಮ್ಮಿಕೊಂಡ ಪರಿಸರ ಕುರಿತು ವಿಶೇಷ ಉಪನ್ಯಾಸದ ಆಶಯ ನುಡಿ ಆಡುತ್ತಾ ನಮಗೆ ಸಾಹಿತ್ಯ,ಸಂಸ್ಕೃತಿಯ ಪರಿಚಯ ಅಗತ್ಯ,ನಾವು ಸೋತರು ಮುಂದೆ ಗೆಲುವೆ ಎಂಬ ಆಶಾ ಭಾವನೆ ಹೊಂದಿಬೇಕು ಗುರಿ ಸಾಧಿಸಲು ಸಾಧ್ಯವೆಂದರು.ಕರ್ನಾಟಕ ಸಾಹಿತ್ಯ ಆಕಾಡೆಮಿ ಎಸ್.ಎಲ್.ಮುಕುಂದರಾಜ ಅಧ್ಯಕ್ಷರಾದ ಮೇಲೆ ಹಲವು ಯೋಜನೆಗಳ ಬಗ್ಗೆ ‌ಮೆಚ್ಚುಗೆ ವ್ಯಕ್ತಪಡಿಸಿದರು.

"ಯಾತಕ್ಕ ಮಳೆ ಹೋದವೋ" ಎಂಬ ವಿಷಯದ ಮೇಲೆ ಶ್ರೀ ವಿಜಯಕುಮಾರ್ ರೋಣದ ಉಪನ್ಯಾಸ ನೀಡಿ ನಿಸರ್ಗ ಪ್ರೇಮ ಬೆಳೆಸಿಕೊಳ್ಳುವುದು, ಗಿಡ ಮರ ಹೆಚ್ಚು ಬೆಳೆಸುವುದು, ಹೂದೋಟ ನಿರ್ಮಾಣ, ಮಾಲಿನ್ಯ ನಿಯಂತ್ರಣ, ಶಕ್ತಿ ಬಳಕೆಯಲ್ಲಿ ಮಿತವ್ಯಯ, ವನಮಹೋತ್ಸವ ಆಚರಣೆ, ಅವಶ್ಯವೆಂದು ಹೇಳುತ್ತಾ ಪರಿಸರ ಪ್ರೇಮಿ ಸುಂದರ್ಲಾಲ್ ಬಹುಗುಣ, ಪರಿಸರ ವಿಜ್ಞಾನಿ ನಾಗೇಶ್ ಹೆಗಡೆ, ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಿದ ಸಾಲುಮರದ ತಿಮ್ಮಕ್ಕ, ನರ್ಮದಾ ಬಚಾವೋ ಚಳುವಳಿಯ ರೂವಾರಿ ಮೇಧಾ ಪಾಟ್ಕರ್, ಚಲನಚಿತ್ರ ನಿರ್ದೇಶಕ ಸುರೇಶ್ ಹೆಬ್ಳಿಕರ್ ಇವರನ್ನು ಸ್ಮರಿಸಿ ಪರಿಸರ ರಕ್ಷಣೆಯ ಜವಾಬ್ದಾರಿ ಹೊರಬೇಕೆಂದರು.

ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಶ್ರೀ ಜಡ್. ಎನ್. ಜಾಗಿರ್ದಾರ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಡಾ.ಗವಿಸಿದ್ದಪ್ಪ ಹೆಚ್. ಪಾಟೀಲ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಹೇಳುತ್ತಾ ಅಕಾಡೆಮಿ ಬೆಲಕೆದು ಬಂದ ಬಗೆ ,ಚಕೋರ ವಿದ್ಯಾರ್ಥಿಗಳಿಗೆ ಮೀಸಲಾದ ಕಾರ್ಯಕ್ರಮ, ಪರಿಸರದಲ್ಲಿ ಮಳೆ ಇಂದು ಹೋಗಲು ಕಾರಣ ನಾವೇ, ಪರಿಸರ ಹಾಳು ಮಾಡುವುದನ್ನು ಜನಪದ ಗೀತೆ ಯಾತಕ ಮಳೆ ಹೋದವು ಎಂದು ಹಾಡುವ ಬಗೆ ಅನನ್ಯವೆಂದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಾಗರತ್ನ ಇಂಡೆ ನಿರೂಪಿಸಿದರು.

ವಿದ್ಯಾರ್ಥಿ ನಿಯರು ಭಾಗವಹಿಸಿ ಯಶಸ್ವಿಯಾಗಿಸಿದರು.