ಹೆಲ್ಮೆಟ್ ಧರಿಸಿ–ಜೀವ ಉಳಿಸಿ' ಸಂದೇಶದೊಂದಿಗೆ ಜನಜಾಗೃತಿ ಬೈಕ್ ರ್ಯಾಲಿ

ಹೆಲ್ಮೆಟ್ ಧರಿಸಿ–ಜೀವ ಉಳಿಸಿ' ಸಂದೇಶದೊಂದಿಗೆ  ಜನಜಾಗೃತಿ ಬೈಕ್ ರ್ಯಾಲಿ

'ಹೆಲ್ಮೆಟ್ ಧರಿಸಿ–ಜೀವ ಉಳಿಸಿ' ಸಂದೇಶದೊಂದಿಗೆ ಜನಜಾಗೃತಿ ಬೈಕ್ ರ್ಯಾಲಿ

ಕಲಬುರಗಿ : ರಸ್ತೆ ಸುರಕ್ಷತೆ ಹಾಗೂ ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಜುಲೈ 25ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಜನಜಾಗೃತಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ.

ರ್ಯಾಲಿಯು ನಗರದ ಗಂಜ ನಗರೇಶ್ವರ ಶಾಲೆಯಿಂದ ಆರಂಭವಾಗಿ ಸೂಪರ್ ಮಾರ್ಕೆಟ್ ಮಾರ್ಗ, ಜಗತ್ ವೃತ್ತ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಸಂಚರಿಸಲಿದೆ. "ಹೆಲ್ಮೆಟ್ ಧರಿಸಿ–ಜೀವ ಉಳಿಸಿ, ಡ್ರಗ್ಸ್ ಮುಕ್ತ ಕಲಬುರಗಿ–ಆರೋಗ್ಯಕರ ಸಮಾಜ ನಿರ್ಮಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಭಾಗವಹಿಸುವವರು ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ.

ಈ ಸಂಬಂಧ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಅರುಣಕುಮಾರ ಎಂ. ನಾಮದಾರ ಅವರು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ರ್ಯಾಲಿ ಸುಗಮವಾಗಿ ನಡೆಯಲು ಅಗತ್ಯ ಪೊಲೀಸ್ ಬಂದೋಬಸ್ತ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಯುವಜನರಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ವ್ಯಸನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ರ್ಯಾಲಿಯ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟನೆ ತಿಳಿಸಿದೆ.

ಈ ಕಾರ್ಯಕ್ರಮವು ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ್ ಅವರ ಸಲಹೆಯೊಂದಿಗೆ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಹೆಚ್. ರಾಮಚಂದ್ರಯ್ಯ ಅವರ ಸಹಕಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.