ವೇಗ ನಿಯಂತ್ರಕ ಅಳವಡಿಸಲು ಒತ್ತಾಯ

ವೇಗ ನಿಯಂತ್ರಕ ಅಳವಡಿಸಲು ಒತ್ತಾಯ

ವೇಗ ನಿಯಂತ್ರಕ ಅಳವಡಿಸಲು ಒತ್ತಾಯ

ಕಲಬುರಗಿ: ನಗರದ ಹೊರವಲಯದ ಸಮೀಪದ ತಾವರಗೇರಾ ಕ್ರಾಸ್ ನ ಏಷಿಯನ್ ಫನ್ ವರ್ಡ ಬಳಿಯ ರಸ್ತೆಗಳಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು ಎಂದು ಬಿಜೆಪಿ ಮುಖಂಡ ರವಿ ಸಿಂಗೆ ಅರಣಕಲ್ ಅವರು ಒತ್ತಾಯಿಸಿದ್ದಾರೆ.

    ಕಲಬುರಗಿ ನಗರದ ಹೊರವಲಯದ ತಾವರಗೇರಾ ಕ್ರಾಸ್ ಹತ್ತಿರದ ಕಲಬುರಗಿ- ಬೀದ‌ರ್ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಏಷಿಯನ ಫನ್ ವರ್ಡ್ ಇದ್ದು, ರಸ್ತೆ ದಾಟಿಯೇ ಜನ ಅಲ್ಲಿಗೆ ಹೋಗಬೇಕಾಗುತ್ತದೆ.ಇಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಅಫಘಾತ ಆಗುವ ಸಂಭವ ಹೆಚ್ಚಿದ್ದು. ಅಲ್ಲಿಗೆ ಕುಟುಂಬದವರು ಮತ್ತು ತಮ್ಮ ಚಿಕ್ಕ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ವೇಗವಾಗಿ ಬರುವ ವಾಹನಗಳು ದಿಕ್ಕಿ ಹೊಡೆದರೆ ಯಾರು ಹೊಣೆ. ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೋರಾಟವೂ ಮಾಡಲಾಗುತ್ತದೆ. ಆದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಜನರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕಾಳಜಿ ಇದ್ದರೆ ತಕ್ಷಣವೇ ಸ್ಪೀಡ್‌ ಬ್ರೇಕರ್‌ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.