ಎಚ್‌ಕೆಇ ಸಂಸ್ಥೆಯ ಮೂರು ಕಾಲೇಜುಗಳ 30 ವಿದ್ಯಾರ್ಥಿ ಯೋಜನೆಗಳಿಗೆ ಅನುದಾನ: ಅಧ್ಯಕ್ಷ ಶಶೀಲ್ ಜಿ. ನಮೋಶಿ ಹರ್ಷ

ಎಚ್‌ಕೆಇ ಸಂಸ್ಥೆಯ ಮೂರು ಕಾಲೇಜುಗಳ 30 ವಿದ್ಯಾರ್ಥಿ ಯೋಜನೆಗಳಿಗೆ ಅನುದಾನ: ಅಧ್ಯಕ್ಷ ಶಶೀಲ್ ಜಿ. ನಮೋಶಿ ಹರ್ಷ

ಎಚ್‌ಕೆಇ ಸಂಸ್ಥೆಯ ಮೂರು ಕಾಲೇಜುಗಳ 30 ವಿದ್ಯಾರ್ಥಿ ಯೋಜನೆಗಳಿಗೆ ಅನುದಾನ: ಅಧ್ಯಕ್ಷ ಶಶೀಲ್ ಜಿ. ನಮೋಶಿ ಹರ್ಷ

ಕಲಬುರ್ಗಿ, ಜು. 2: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ವ್ಯಾಪ್ತಿಯ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜು, ಕಲಬುರ್ಗಿ, ಶ್ರೀಮತಿ ವಿ.ಜಿ. ಮಹಿಳಾ ಪದವಿ ಕಾಲೇಜು, ಕಲಬುರ್ಗಿ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು, ರಾಯಚೂರು ಕಾಲೇಜುಗಳ ವಿದ್ಯಾರ್ಥಿಗಳ ಒಟ್ಟು 30 ನವೀನ ಯೋಜನೆಗಳು ಕರ್ನಾಟಕ ಸರ್ಕಾರದ ಕರ್ನಾಟಕ ನವೀನತೆ ಮತ್ತು ತಂತ್ರಜ್ಞಾನ ಸಂಸ್ಥೆ (KITS) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) – VRIF ಉಪಕ್ರಮದಡಿ ಆಯ್ಕೆಯಾಗಿದ್ದು, ಪ್ರತಿ ಕಾಲೇಜಿನ ತಲಾ 10 ವಿದ್ಯಾರ್ಥಿ ಯೋಜನೆಗಳಿಗೆ ಅನುದಾನ ಮಂಜೂರಾಗಿದೆ.

ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಎಚ್‌ಕೆಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ. ನಮೋಶಿ, ನಮ್ಮ ಸಂಸ್ಥೆಯ ಕಾಲೇಜುಗಳು ರಾಜ್ಯ ಮಟ್ಟದಲ್ಲಿ ನವೀನ ಸಂಶೋಧನೆ ಮತ್ತು ವಿದ್ಯಾರ್ಥಿ ಉದ್ಯಮಶೀಲತೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

NAIN 2.0 ಯೋಜನೆಯಡಿ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿಗೆ ₹41.50 ಲಕ್ಷ ಹಾಗೂ ಶ್ರೀಮತಿ ವಿ.ಜಿ. ಮಹಿಳಾ ಪದವಿ ಕಾಲೇಜಿಗೆ ₹42.50 ಲಕ್ಷ ಅನುದಾನ ಮಂಜೂರಾಗಿರುವುದು ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಗೆ ದೊರೆತ ಮಹತ್ವದ ಗೌರವವಾಗಿದೆ ಎಂದು ಅವರು ಹೇಳಿದರು.

ಈ ಸಾಧನೆಯ ಹಿಂದೆ ಶ್ರಮಿಸಿದ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ್, ಡಾ. ನಾಗೇಂದ್ರ ಎಚ್., ಡಾ. ನಾಗೇಶ್ ಸಾಲಿಮಠ ಹಾಗೂ ಪ್ರೊ. ಸಿದ್ದರಾಮ ಸಂಗೋಳಗಿ, ಹಾಗೆಯೇ ಶ್ರೀಮತಿ ವಿ.ಜಿ. ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ಆರ್.ಬಿ. ಕೊಂಡಾ, ಡಾ. ರವೀಂದ್ರ ಹಾಗೂ ಡಾ. ಶಿವರಾಜ್ ಗೌನಳ್ಳಿ ಅವರು ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡಿ ಯೋಜನೆಗಳ ಆಯ್ಕೆಗೆ ಶ್ರಮಿಸಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಮೋಶಿ ತಿಳಿಸಿದರು.

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ವಿದ್ಯಾರ್ಥಿಗಳ ನವೀನ ಆಲೋಚನೆಗಳು ಹಾಗೂ ಉದ್ಯಮಶೀಲತೆಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದೇ ರೀತಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ VRIF ತಂಡದ ಸಹಕಾರವೂ ಅಮೂಲ್ಯವಾಗಿದೆ. ಈ ಯೋಜನೆಗಳಿಗೆ ಬೆಂಬಲ ನೀಡಿದ ಮಾಹಿತಿ ತಂತ್ರಜ್ಞಾನ ಸಚಿವರು, ವಿಟಿಯು ಕುಲಪತಿಗಳು ಹಾಗೂ ವಿಟಿಯು–ವಿಆರ್‌ಐಎಫ್ ತಂಡಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಈ ಸಾಧನೆಗೈದ ವಿದ್ಯಾರ್ಥಿ ನವೋದ್ಯಮಿಗಳನ್ನು ಎಚ್‌ಕೆಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷರಾದ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ ಪಾಟೀಲ್, ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಗೂ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಎಸ್.ಎಲ್. ಹಿರೇಮಠ ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ ಎಂದು ಸಂಸ್ಥಯ ಮಾಧ್ಯಮ ಪ್ರಮುಖ್ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ