ಹಳಕಟ್ಟಿ ವಚನ ಸಾಹಿತ್ಯದ ಪುನರುಜ್ಜೀವನದ ಮಹಾನ್ ಶಿಲ್ಪಿ: ಲಿಂಗರಾಜ ಅಪ್ಪಾ

ಹಳಕಟ್ಟಿ ವಚನ ಸಾಹಿತ್ಯದ ಪುನರುಜ್ಜೀವನದ ಮಹಾನ್ ಶಿಲ್ಪಿ: ಲಿಂಗರಾಜ ಅಪ್ಪಾ

ಹಳಕಟ್ಟಿ ವಚನ ಸಾಹಿತ್ಯದ ಪುನರುಜ್ಜೀವನದ ಮಹಾನ್ ಶಿಲ್ಪಿ: ಲಿಂಗರಾಜ ಅಪ್ಪಾ

ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರು ತಾಳೇಗರಿಯಲ್ಲಿ  ಬರೆದ ವಚನಗಳು    ಕತ್ತಲ ಕೋಣೆಗಳಲ್ಲಿ ಮರೆಯಾಗುತ್ತಿದ್ದ ಸಂದರ್ಭದಲ್ಲಿ ಅವುಗಳನ್ನು ಹುಡುಕಿ, ಸಂಗ್ರಹಿಸಿ, ಸಂಪಾದಿಸಿ ಹಾಗೂ ಪ್ರಕಟಿಸುವ ಮೂಲಕ ಕನ್ನಡದ ಅಮೂಲ್ಯ ಸಾಹಿತ್ಯ ಸಂಪತ್ತನ್ನು ಜನರಿಗೆ ಪರಿಚಯಿಸಿದ ಮಹಾನ್ ಶಿಲ್ಪಿ ಡಾ. ಫ.ಗು. ಹಳಕಟ್ಟಿಯವರು ಎಂದು ಡಾ.ಲಿಂಗರಾಜ ಅಪ್ಪಾ ಹೇಳಿದರು.

ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಸ್ಮರಣೋತ್ಸವ ಹಾಗೂ ವಚನ ಸಾಹಿತ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿ,ಹಳಕಟ್ಟಿಯವರು ಕನ್ನಡ ಸಾರಸ್ವತ ಲೋಕದ ಅಪ್ರತಿಮ ಸಂಶೋಧಕರು, ವಿದ್ವಾಂಸರು, ವಕೀಲರು ಹಾಗೂ ಸಹಕಾರಿ ಚಳುವಳಿಯ ಪ್ರವರ್ತಕರಾಗಿದ್ದು, ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಅವರು ತಿಳಿಸಿದರು.

 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಸಪ್ತ ನೇಕಾರರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಹಾಗೂ ಹಿರಿಯ ಸಾಹಿತಿ ಚನ್ನಮಲ್ಲಪ್ಪ ಯಳಸಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ವಿನೋದಕುಮಾರ ಜನೇವರಿ, ಸತೀಶ ಜಮಖಂಡಿ, ಅಮೃತ ಅಣ್ಣೂರ, ಬಂಗಾರಪ್ಪ ಆಡಿನ್, ಗಣೇಶ ಚಿನ್ನಾಕರ, ಶ್ರೀನಿವಾಸ ಬಲ್ಪೂರ, ಶಿವಾನಂದ ಸುರವಾಸೆ, ರೇವಣಸಿದ್ದಪ್ಪ ಜೀವಣಗಿ, ಸೋಮಶೇಖರ ಹೊಸಮಠ, ಬಸಯ್ಯ ಹಿರೇಮಠ, ಪ್ರೊ. ಎಸ್.ಎಲ್. ಪಾಟೀಲ, ಶರಣಯ್ಯ ಮಠಪತಿ, ಆಯೋಜುದ್ದೀನ್ ಪಟೇಲ್, ಚಂದ್ರಕಾಂತ ಸೂರನ್, ರೆಹಮಾನ್ ಪಟೇಲ್, ಹೆಚ್.ಎಸ್. ಬರಗಾಲಿ, ರಾಜು ಮಾರ್ಪಳ್ಳಿ ಸೇರಿದಂತೆ ಹಳಕಟ್ಟಿ ಅಭಿಮಾನಿಗಳು ಉಪಸ್ಥಿತರಿದ್ದರು.