ಮುಖ್ಯಮಂತ್ರಿ ಡಿಕೆಶಿ - ಪ್ರಣವಾನಂದ ಶ್ರೀ ಮಹತ್ವದ ಚರ್ಚೆ ಈಡಿಗ ಬಿಲ್ಲವರ ಕಲ್ಯಾಣದ ಬಗ್ಗೆ ಚಿಂತನೆ

ಮುಖ್ಯಮಂತ್ರಿ ಡಿಕೆಶಿ - ಪ್ರಣವಾನಂದ ಶ್ರೀ ಮಹತ್ವದ ಚರ್ಚೆ ಈಡಿಗ ಬಿಲ್ಲವರ ಕಲ್ಯಾಣದ ಬಗ್ಗೆ ಚಿಂತನೆ

ಮುಖ್ಯಮಂತ್ರಿ ಡಿಕೆಶಿ - ಪ್ರಣವಾನಂದ ಶ್ರೀ ಮಹತ್ವದ ಚರ್ಚೆ ಈಡಿಗ ಬಿಲ್ಲವರ ಕಲ್ಯಾಣದ ಬಗ್ಗೆ ಚಿಂತನೆ

ಕಲಬುರಗಿ : ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಬೇಡಿಕೆ ಹಾಗೂ ಇತರ ಗಂಭೀರ ವಿಷಯಗಳ ಕುರಿತಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳು ಮುಖ್ಯಮಂತ್ರಿ ನಿವಾಸದಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. 

      ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಜೂ. 16ರಂದು ಭೇಟಿಯಾಗಿ ರಾಜ್ಯದಲ್ಲಿರುವ ಈಡಿಗ, ಬಿಲ್ಲವರು ಸೇರಿದಂತೆ 26 ಪಂಗಡಗಳು ಡಿ.ಕೆ ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದಿಂದ ಬಯಸುವ ನಿರೀಕ್ಷೆಗಳ ಬಗ್ಗೆ ಮನವಿಯನ್ನು ಸಲ್ಲಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಅನುದಾನ ಬಿಡುಗಡೆ ಹಾಗೂ ನಿರ್ದೇಶಕರ ನೇಮಕ ಬೆಂಗಳೂರಿನಲ್ಲಿ ನಾರಾಯಣ ಗುರು ಪ್ರತಿಮೆ ಸ್ಥಾಪನೆಗೆ ಜಮೀನು, ರಾಜ್ಯದ ಅತಿ ಹೆಚ್ಚು ಸಮುದಾಯದ ಜನರಿರುವ ಜಿಲ್ಲೆಗಳಿಗೆ ಅನುದಾನದ ಬಿಡುಗಡೆ, ಗೋಕರ್ಣದಲ್ಲಿ ಇತ್ತೀಚೆಗೆ ನಡೆದ ಈಡಿಗ ರಾಷ್ಟ್ರೀಯ ಮಹಾಮಂಡಳಿಯ 20 ಜಿಲ್ಲೆಗಳ ಪದಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಜಾರಿಗೆ ಒತ್ತಾಯ ಹಾಗೂ ಅತಿ ಹಿಂದುಳಿದ ಸಮುದಾಯದವರನ್ನು ಸಮಾನವಾಗಿ ಕಂಡು ಅವರ ಕಲ್ಯಾಣಕ್ಕಾಗಿ ಯೋಜನೆ ಜಾರಿ ಮಾಡಿ ಕೂಡಲೇ ಕಾರ್ಯಕ್ರಮ ಘೋಷಿಸಬೇಕು ಮತ್ತು ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ನೀಡಿದರು. ಸಚಿವ ಸಂಪುಟ ವಿಸ್ತರಣೆಯ ವೇಳೆ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಹಿರಿತನದ ಆಧಾರದ ಮೇಲೆ ಬೇಳೂರು ಗೋಪಾಲಕೃಷ್ಣ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಕೂಡ ಮನವಿ ಮಾಡಿದರು. 

   ಸ್ವಾಮೀಜಿಯವರಿಂದ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ ಸಮುದಾಯದ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಮನವರಿಕೆಯಾಗಿದ್ದು ಸೂಕ್ತ ತೀರ್ಮಾನ ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಸ್ವಾಮೀಜಿಯವರ ಜೊತೆ ನಿಮ್ಮನ್ನು ಮತ್ತೆ ಸೇರಿಸಿ ಮಾತುಕತೆ ನಡೆಸಲಾಗುವುದು ಜಿಲ್ಲಾ ಭೇಟಿಯ ಸಂದರ್ಭದಲ್ಲಿ ನಿಮ್ಮನ್ನೆಲ್ಲ ಖುದ್ದಾಗಿ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಮುಖ್ಯಮಂತ್ರಿಗಳ ನಿವಾಸಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 40ಕ್ಕೂ ಹೆಚ್ಚು ಮುಖಂಡರು ಮುಖ್ಯಮಂತ್ರಿಗಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಹಾಗೂ ಗಾಣಗಾಪುರ ದತ್ತನ ಪ್ರಸಾದ ನೀಡಿ ಗೌರವಿಸಿದರು. 

   ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಲದ ರಾಜ್ಯ ಅಧ್ಯಕ್ಷರಾದ ತಿಪ್ಪೇಶ್, ಗೌರವಾಧ್ಯಕ್ಷರಾದ ಡಾ. ಮಂಚೇಗೌಡ, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್,ರಾಜೇಶ್ ಡಿ ಗುತ್ತೇದಾರ್, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿ ವೆಂಕಟೇಶ ಗುಂಡಾನೂರು ಯಾದಗಿರಿ, ಮಾಧ್ಯಮ ಸಂಚಾಲಕರದ ಡಾ. ಸದಾನಂದ ಪೆರ್ಲ, ಮಲ್ಲಿಕಾರ್ಜುನ್, ಪತ್ರಕರ್ತ ರಮೇಶ್ ಪೆರ್ಲ, ಜಿ ಎನ್ ಸಂತೋಷ್ , ವಸಂತ ನಾಯಕ್ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.