146ನೇ ಡಾ. ಫ. ಗು. ಹಳಕಟ್ಟಿ ಜಯಂತಿ ಉತ್ಸವ ಸಮಿತಿ ರಚನೆ
146ನೇ ಡಾ. ಫ. ಗು. ಹಳಕಟ್ಟಿ ಜಯಂತಿ ಉತ್ಸವ ಸಮಿತಿ ರಚನೆ
ಕಲಬುರಗಿ, ಜುಲೈ 1: 2026 ನೇ ಸಾಲಿನ ಹಾಗೂ ವಚನ ಸಾಹಿತ್ಯ ಸಂಶೋಧನಾ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ 146ನೇ ಜಯಂತಿ/ 5 ನೇ ಸರಕಾರಿ ಉತ್ಸವ ದಿನಾಚರಣೆಯ ಉತ್ಸವ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಶ್ರೀ ಚನ್ನಮಲ್ಲಪ್ಪ ಯಳಸಂಗಿ, ಕಾರ್ಯಾಧ್ಯಕ್ಷರಾಗಿ ಶ್ರೀ ಶ್ರವಣಕುಮಾರ ಮುನ್ನೊಳ್ಳಿ, ಉಪಾಧ್ಯಕ್ಷರಾಗಿ ಶ್ರೀ ಸೂರ್ಯಕಾಂತ್ ಸೊನ್ನದ, ಶ್ರೀ ಶಿವಪುತ್ರಪ್ಪ ಭಾವಿ ಹಾಗೂ ಶ್ರೀ ಶಿವಲಿಂಗಪ್ಪ ಅಷ್ಟಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಜೇನವೆರಿ ವಿನೋದಕುಮಾರ, ಸಹ- ಕಾರ್ಯದರ್ಶಿಯಾಗಿ ಬಿ.ಎಂ. ಪಾಟೀಲ ಕಲ್ಲೂರ, ಸಂಘಟನಾ ಕಾರ್ಯದರ್ಶಿಯಾಗಿ ನ್ಯಾಯವಾದಿ ಶಿವರಾಜ್ ಅಂಡಗಿ, ಖಜಾಂಚಿಯಾಗಿ ಡಾ. ಬಸವರಾಜ್ ಚನ್ನಾ ಹಾಗೂ ಸಹ ಖಜಾಂಚಿಯಾಗಿ ರಾಜಶೇಖರ ಘಸನೆ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶರಣಗೌಡ ಪಾಟೀಲ ಪಾಳಾ, ಬಸವಂತರಾಯ ಕೊಳಕುರ, ಉದಯಕುಮಾರ ಸಾಲಿ, ಸಿದ್ದರಾಮ ಯಳವಂತಗಿ, ಮಲ್ಲಿಕಾರ್ಜುನ ಬಗಲಿ, ನಾಗಭೂಷಣ ಅಗಸ್ತ್ಯತೀರ್ಥ, ಲಕ್ಷ್ಮೀಕಾಂತ ಜೋಳದ, ಗಿರೀಶಗೌಡ ಇನಾಮದಾರ ದುಮ್ಮದ್ರಿ, ವಿಶ್ವನಾಥ ಗೌನಳ್ಳಿ, ಹಣಮಯ್ಯ ಆಲೂರ, ರಾಜು ಜೈನ್, ಮಲ್ಲಿನಾಥ ಪಾಟೀಲ ಕಾಳಗಿ, ವೀರಣ್ಣ ಲೋಢನ, ಕಲ್ಯಾಣಕುಮಾರ ಹಿರಾಪೂರ, ಶ್ರೀನಿವಾಸ ಬಲಪುರ, ನಂದಕಿಶೋರ್ ಬೂಬ್, ರಾಘವೇಂದ್ರ ಕುಲಕರ್ಣಿ, ತಾರಾಚಂದ ಜೈನ್, ಚಂದ್ರಕಾಂತ ಮಾಲಗತ್ತಿ, ಸಂಜೀವಕುಮಾರ ಡೊಂಗರಗಾವ್, ಸತೀಶ ಸಜ್ಜನ, ಪ್ರದೀಪ ದಾಬಶೆಟ್ಟಿ, ಅಣವೀರ ಸ್ವಾದಿ, ಶಾಂತಕುಮಾರ ಯಳಸಂಗಿ, ಚಂದ್ರಶೇಖರ ಮ್ಯಾಳಗಿ, ವಿಜಯಕುಮಾರ ತ್ರಿವೇದಿ, ರಾಘವೇಂದ್ರ ಮುಧೋಳ, ಬಸವಕುಮಾರ ಟಮಕೆ, ಮಲ್ಲಿಕಾರ್ಜುನ ಕೋಟೆ, ಗುರುಸ್ವಾಮಿ ಎಸ್. ಹಾಗೂ ರಮೇಶ್ ದೊಡ್ಡಮನಿ ಸೇರಿ 31 ಜನರನ್ನು ಸದ್ಯಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನ್ಯಾಯವಾದಿ ಸತೀಶ ಜಮಖಂಡಿ ಹಾಗೂ ಕಾರ್ಯದರ್ಶಿಯಾಗಿ ಸಂಗಮನಾಥ ರೇವತಗಾವ್ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಅಶೋಕ ಬೇನೂರ, ನಿತ್ಯಾನಂದ ಬಂಡಿ ಹಾಗೂ ರಾಜು ಕೋಷ್ಠಿ ನೇಮಕಗೊಂಡಿದ್ದಾರೆ.
ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಸುರೇಖಾ ನಿಂಬೆನ್ನಪ್ಪ ಕೊರವಾರ್, ಕಾರ್ಯದರ್ಶಿಯಾಗಿ, ಕುಮಾರಿ ಮಾಲಾ ಕಣ್ಣಿ ಹಾಗೂ ಸದಸ್ಯರಾಗಿ ಶ್ರೀಮತಿ ವೀಣಾ ಜೇನವೆರಿ, ಶ್ರೀಮತಿ ಸುರೇಖಾ ಅಷ್ಟಗಿ ಮತ್ತು ಶ್ರೀಮತಿ ಸ್ವಾತಿ ಹತ್ತೂರೆ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ಸವವನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
