ಜೂನ್ 21ರ ವಿಶ್ವಯೋಗ ಯಶಸ್ವಿಗಾಗಿ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ...
ಜೂನ್ 21ರ ವಿಶ್ವಯೋಗ ಯಶಸ್ವಿಗಾಗಿ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ...
ವಾಡಿ: ಪಟ್ಟಣದಲ್ಲಿ 12ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕುಂದನೂರ ವೃತ್ತದಿಂದ ಶ್ರೀನಿವಾಸ ಗುಡಿ ವೃತ್ತ,ಬಸವೇಶ್ವರ ವೃತ್ತ ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರ ವೃತ್ತದ ಮುಖಾಂತರ ಆಝಾದ್ ವೃತ್ತದ ವರೆಗೆ ಪಟ್ಟಣದ ವಿವಿಧ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಜರುಗಿತು.
ಈ ವೇಳೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ
12ನೇ ಅಂತರರಾಷ್ಟ್ರೀಯ ಯೋಗ ದಿನದ ಘೋಷ ವಾಕ್ಯವಾದ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’
ಎಂಬ ಸಂದೇಶದ ಮಹತ್ವ ಸಾರುವುದು ಸೈಕಲ್ ಜಾಥಾದ ಉದ್ದೇಶವಾಗಿದೆ ಎಂದರು.
ದೈಹಿಕ ಶಕ್ತಿ,ಮಾನಸಿಕ ನೆಮ್ಮದಿ ಜೊತೆಗೆ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಪರಿಸರ ಕಾಳಜಿ ಜೊತೆಗೆ ಯೋಗ ಒಂದು ಅತ್ಯುತ್ತಮವಾದ ಮಾರ್ಗವಾಗಿದೆ ಅದನ್ನು ನಮ್ಮ ಬದುಕಿನ ಭಾಗವಾಗಿಸಲು 21ರಂದು
ಬೆಳಗ್ಗೆ 06:30ಗಂಟೆಗೆ ಪಟ್ಟಣದ ರೈಲ್ವೆ ಬ್ರೀಡ್ಜ್ ಹತ್ತಿರದ ಶ್ರೀ ಮುನಿಯಪ್ಪ ದಾಸ ಶಾಲಾ ಆವರಣದಲ್ಲಿ ಜರುಗುವ 12ನೇ ವಿಶ್ವಯೋಗ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ನೆರೆದಂತ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿಎವಿ ಶಾಲೆಯ ಅನ್ವರ ಹುಸೇನ್,ಪ್ರಮೋದ್ ಕುಲಕರ್ಣಿ, ಬಿ ಸುಧಾಕರ,ರೇವಣಸಿದ್ದಯ್ಯ,ಮಹಾತ್ಮ ಗಾಂಧಿ ಶಾಲೆಯ ಲಿಂಬು ರಾಠೋಡ,ಸೆಂಟ್ ಅಂಬ್ರುಷ್ ಶಾಲೆಯ ಚಾರ್ಲಿ ಸರ್,ಹಾಗೂ ಗಂಗಮಾತೆ ಪ್ರೌಢ ಶಾಲೆಯ ಮುಕುಂದ ಕರ್ಲಿ,
ಮುಖಂಡರಾದ ದಿಪಕ ಸಾತಖೇಡ,ಭೀಮಣ್ಣ ಹವಾಲ್ದಾರ್ ಇದ್ದರು.
ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೋಲಿಸ್ ಸಿಬ್ಬಂದಿಗಳಾದ ಬಸವಲಿಂಗಪ್ಪ ಮುನ್ಗಲ್,ಶಿವಕುಮಾರ ವರಕೇರಿ ಸುಗಮ ಸಂಚಾರದ ವ್ಯವಸ್ಥೆ ಕೈಗೊಂಡರು.
