ಸಾಹಿತ್ಯಕ್ಕೆ ಜೀವ ತೇಯ್ದ ಲೇಖಕಿ ಡಾ.ಚಂದ್ರಕಲಾ ಬಿದರಿ- ಡಾ.ಗವಿಸಿದ್ಧಪ್ಪ ಪಾಟೀಲ

ಸಾಹಿತ್ಯಕ್ಕೆ ಜೀವ ತೇಯ್ದ ಲೇಖಕಿ ಡಾ.ಚಂದ್ರಕಲಾ ಬಿದರಿ- ಡಾ.ಗವಿಸಿದ್ಧಪ್ಪ ಪಾಟೀಲ

ಮಾಡ್ಯಾಳದಲ್ಲಿ ಡಾ.ಚಂದ್ರಕಲಾ ಬಿದರಿಗೆ ನುಡಿ ನಮನ

ಸಾಹಿತ್ಯಕ್ಕೆ ಜೀವ ತೇಯ್ದ ಲೇಖಕಿ ಡಾ.ಚಂದ್ರಕಲಾ ಬಿದರಿ-ಡಾ.ಗವಿಸಿದ್ಧಪ್ಪ ಪಾಟೀಲ

ಕಲಬುರಗಿ: ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿ‌ ಕನ್ನಡ ನಾಡು ನುಡಿಗಾಗಿ ತಮ್ಮ ಜೀವನವನ್ನೇ ತೇಯ್ದ ಅಪರೂಪದ ಲೇಖಕಿ ಡಾ.ಚಂದ್ರಕಲಾ ಬಿದರಿ ಅವರೆಂದು ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ನುಡಿದರು

ಮಾಡ್ಯಾಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಚಕೋರ ಸಾಹಿತ್ಯ ವೇದಿಕೆ ಕಲಬುರಗಿ ಜಿಲ್ಲಾ ಏರ್ಪಡಿಸಿದ ವಿಶೇಷ ಉಪನ್ಯಾಸ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಸಾಹಿತಿ ಡಾ.ಚಂದ್ರಕಲಾ ಬಿದರಿ ನುಡಿ ನಮನದಲ್ಲಿ ಮಾತನಾಡಿ ಸೇಡಂದ ನೃಪತುಂಗ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ಶೈಕ್ಷಣಿಕ ಸೇವೆ ಅನನ್ಯ, ಸಾಹಿತ್ಯಕ್ಕೆ ಮೂವತ್ತಕ್ಕೂ ಹೆಚ್ಚು ಮೌಲಿಕ ಕೃತಿ ನೀಡಿ,ಮಹಿಳಾ ಸಂಘಟನೆ,ಸಾಹಿತ್ಯ ಸಾಂಸ್ಕೃತಿಕ ರಾಯಭಾರಿಯಾಗಿದ್ದರೆಂದರು.

ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಡಾ‌‌.ಸಿದ್ಧಪ್ಪ ಹೊಸಮನಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಎಂಬ ಉಪನ್ಯಾಸ ನೀಡಿ ಪ್ರಾಚೀನ ಕಾಲದಿಂದ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಾಗಿ ಅಪಾರ ಕೊಡುಗೆ ನೀಡಿದ ಉದಾಹರಣೆ ಹೇಳುತ್ತಾ ಭವ್ಯ ಪ್ರಾಚೀನ ಇತಿಹಾಸ ಸಾಹಿತ್ಯ ಮಹತ್ವ ತಿಳಿಸಿದರು.

ಅಧ್ಯಕ್ಷತೆಯನ್ನು ಇಂಗ್ಲಿಷ್ ಉಪನ್ಯಾಸಕ ಶರಣಬಸಪ್ಪ ಉಪ್ಪಿನ ವಹಿಸಿ ಎಲ್ಲಾ ಭಾಷೆಯನ್ನು ಕಲಿಯುತ್ತಾ ಕನ್ನಡ ಭಾಷೆ ಪ್ರೀತಿಸೋಣ,ನಮ್ಮ ಮಕ್ಕಳಿಗೆ ಇಂತಹ ಕಾರ್ಯಕ್ರಮ ಅತ್ಯಂತ ಪ್ರಯೋಜನಕಾರಿ ಎಂದರು.

ಅಫಜಲಪುರ ಸರಕಾರಿ ಕಾಲೇಜಿನ ಉಪನ್ಯಾಸ ಶಾಮರಾವ್ ಪ್ರಭು ನಡಗಿರಿಯವರು ಡಾ.ಚಂದ್ರಕಲಾ ಬಿದರಿ ಅವರು ಪ್ರಾಣಾಯಾಮ ಮತ್ತು ಜನಪದ ವೈದ್ಯ ಪದ್ಧತಿ ಬಗ್ಗೆ ಸಾಕಷ್ಟು ತಿಳಿದಿಕೊಂಡವರು.ಕಾವ್ಯದ ಮೂಲಕ ಮಹಿಳೆಯರನ್ನು ಎಚ್ಚರಿಸಿದ ಕವಯಿತ್ರಿ ಎಂದರು.

ಮಾಡಿಯಾಳ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ.ಶಿವಕುಮಾರ ಸಿಂಗೆ ಸಂಶೋಧಕಿಯಾಗಿ

ಬಿದರಿ ಮೇಡಂವಾವರು ಹೈದರಾಬಾದ ಕರ್ನಾಟಕ ಮಹಿಳಾ ಪ್ರತಿನಿಧಿಕರಣ ಸಾಹಿತ್ಯದ ಮೂಲಕ ಅನಾವರಣ ಮಾಡಿದ ಸಂಶೋಧಕಿ ಎಂದರು.

ಪ್ರಾರ್ಥನೆಯನ್ನು ಶ್ವೇತ, ಶಿವಲೀಲಾ ಸಂಗಡಿಗರು ಸ್ವಾಗತವನ್ಬು ರಾಜ್ಯ ಶಾಸ್ತ್ರ ಉಪನ್ಯಾಸಕ ಅಮರೇಶ ನರ್ಚೆ

ನಿರೂಪಣೆಯನ್ನು ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀ ಮತಿ

ಅಂಬಿಕಾ ಮಠ ವಂದನಾರ್ಪಣೆಯನ್ನ ಸಮಾಜಶಾಸ್ತ್ರ ಉಪನ್ಯಾಸಕ ಆಕಾಶ ಸಿಂಗೆ ನಡೆಸಿಕೊಟ್ಟರು.ವಿದ್ಯಾರ್ಥಿಗಳು ಭಾಗವಹಿಸಿದ್ದರು