ಪ್ರಣವಾನಂದ ಶ್ರೀಗಳ 700 ಕೀ ಮೀ ಪಾದಯಾತ್ರೆ ಆರಂಭ ಸಿಎಂ ಸಿದ್ದರಾಮಯ್ಯನವರೇ ಪ್ರಣವಾನಂದ ಶ್ರೀಗಳ ಜೊತೆ ಮಾತುಕತೆ ನಡೆಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಪ್ರಣವಾನಂದ ಶ್ರೀಗಳ 700 ಕೀ ಮೀ ಪಾದಯಾತ್ರೆ ಆರಂಭ ಸಿಎಂ ಸಿದ್ದರಾಮಯ್ಯನವರೇ ಪ್ರಣವಾನಂದ ಶ್ರೀಗಳ ಜೊತೆ ಮಾತುಕತೆ ನಡೆಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ
ಪ್ರಣವಾನಂದ ಶ್ರೀಗಳ 700 ಕೀ ಮೀ ಪಾದಯಾತ್ರೆ ಆರಂಭ ಸಿಎಂ ಸಿದ್ದರಾಮಯ್ಯನವರೇ ಪ್ರಣವಾನಂದ ಶ್ರೀಗಳ ಜೊತೆ ಮಾತುಕತೆ ನಡೆಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಪ್ರಣವಾನಂದ ಶ್ರೀಗಳ 700 ಕೀ ಮೀ ಪಾದಯಾತ್ರೆ ಆರಂಭ

ಸಿಎಂ ಸಿದ್ದರಾಮಯ್ಯನವರೇ ಪ್ರಣವಾನಂದ ಶ್ರೀಗಳ ಜೊತೆ ಮಾತುಕತೆ ನಡೆಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕಲಬುರಗಿ: ಈಡಿಗರು ಸೇರಿದಂತೆ 26 ಪಂಗಡಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಾ ಪ್ರಣವಾನಂದ ಶ್ರೀಗಳು ಕರದಾಳು ಮಠದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ನಡೆಸುವ 700 ಕಿಲೋಮೀಟರ್ ಉದ್ದದ 41 ದಿನಗಳ ಪಾದಯಾತ್ರೆ ಪ್ರಾರಂಭಗೊಂಡಿದೆ. ಸಿಎಂ ಸಿದ್ದರಾಮಯ್ಯನವರೇ ಸ್ವಾಮೀಜಿಗಳ 700 ಕಿಲೋಮೀಟರ್ ಪಾದಯಾತ್ರೆ ಆಗುವವರೆಗೆ ಕಾಯುತ್ತೀರಾ? ಕೂಡಲೇ ಮಾತುಕತೆಗೆ ಆಹ್ವಾನಿಸಿ ಎಂದು ಮಾಜಿ ಸಚಿವರು ಹಾಗೂ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

   ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಲ್ಲಿ ಜನವರಿ 6 ರಂದು ನಡೆದ ಐತಿಹಾಸಿಕ ಪಾದಯಾತ್ರೆಯ ಮೊದಲ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿಎಂ ಅವರೇ, ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಲೇ ಕಳಿಸಿ ಡಾ.ಪ್ರಣವಾನಂದ ಶ್ರೀಗಳ ಜೊತೆ ಚರ್ಚೆ ನಡೆಸಿ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಲು ಕೂಡಲೆ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು. 

   ಸಮಪಾಲು ಸಮಬಾಳು ಸಂಕಲ್ಪದಡಿ ಅತಿ ಹಿಂದುಳಿದ ಈಡಿಗ ಸೇರಿದಂತೆ 26 ಪಂಗಡಗಳ ನ್ಯಾಯೋಚಿತ ಬೇಡಿಕೆಗಳೊಂದಿಗೆ ನ್ಯಾಯಕ್ಕಾಗಿ ಸ್ವಾಮೀಜಿಯವರು ಹೋರಾಟ ಮಾಡುತ್ತಿದ್ದಾರೆ. ಹೊರತು ಸರಕಾರದ ಅಥವಾ ಮಂತ್ರಿಗಳ ವಿರುದ್ಧವಲ್ಲ. ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಬೇಡ. ಈ ಸಮುದಾಯ ಅಸ್ಪೃಶ್ಯತೆಯ ನೋವನ್ನು ಉಂಡು ತುತ್ತು ಅನ್ನಕ್ಕಾಗಿ ಪರದಾಡಿದ ಸಮಾಜವಾಗಿದೆ. ರಾಜ್ಯದಲ್ಲಿ 208 ಹಿಂದುಳಿದ ಜಾತಿಗಳಿದ್ದು ಅದರಲ್ಲಿ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳು ಒಳಗೊಂಡಿದ್ದು ಅದಕ್ಕಾಗಿ ಕಳೆದ ಬಿಜೆಪಿ ಸರ್ಕಾರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಈಡಿಗ ನಿಗಮ ಹಾಗೂ ಕುಲ ಶಾಸ್ತ್ರೀಯ ಅಧ್ಯಯನ ಮಾಡಲ್ 25 ಲಕ್ಷ ಘೋಷಣೆ ಮಾಡಲಾಗಿದೆ. ಆದರೆ ನಿಗಮಕ್ಕೆ ಅನುದಾನ ಹಾಗೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಸರಕಾರ ಮೀನ ಮೇಷ ಎಣಿಸುತ್ತಿದೆ. ಅವಮಾನ, ಅನ್ಯಾಯ ಹೋಗಲಾಡಿಸಿ ನ್ಯಾಯಕ್ಕಾಗಿ ಹೋರಾಡುವ ಡಾ.ಪ್ರಣವಾನಂದ ಶ್ರೀಗಳ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಈ ಸರಕಾರವು ನ್ಯಾಯಕ್ಕಾಗಿ ಹೋರಾಟ ನಡೆಸುವ ಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಬೇಕು. ಸರಕಾರ ಮೌನವಾಗಿದ್ದರೆ ತಾನು ಕೂಡ ಮುಂದಿನ ದಿನಗಳಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಎಸ್ ಬಂಗಾರಪ್ಪ, ಜನಾರ್ಧನ ಪೂಜಾರಿ, ಆರ್ ಎಲ್ ಜಾಲಪ್ಪ, ಕಾಗೋಡು ತಿಮ್ಮಪ್ಪ ಮುಂತಾದ ಸಮುದಾಯದ ನಾಯಕರು ಕೊಟ್ಟ ಕೊಡುಗೆ ಈ ರಾಜ್ಯದಲ್ಲಿ ಅಪಾರವಾಗಿದೆ. ದೇವರಾಜ ಅರಸು ಅವರು ಜಾರಿಮಾಡಿದ ಭೂ ಮಸೂದೆ ಕಾನೂನು ಜಾರಿಯಿಂದ ಭೂಮಿ ಹೊಂದುವ ಹಕ್ಕು ಸಿಕ್ಕಿದೆ. ಅದಕ್ಕಾಗಿ ಸಮುದಾಯದ ಜನರು ಒಗ್ಗಟ್ಟಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದರು.

*ಅತಿ ಹಿಂದುಳಿದ ಸ್ವಾಮೀಜಿಗಳಿಂದ ಪಾದಯಾತ್ರೆಗೆ ಚಾಲನೆ*

ಅತಿ ಹಿಂದುಳಿದ ಸಮುದಾಯದ ಚಲವಾದಿ ಪೀಠದ ಜಗದ್ಗುರು ಬಸವನಾಗಿದೇವ ಶರಣರು, ವಿಶ್ವಕರ್ಮ ಏಕದಂಡಾಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮಿಗಳು, ಉಪ್ಪಾರ ಗುರು ಪೀಠದ ಜಗದ್ಗುರು ಭಗೀರಥಾನಂದ

ಪುರಿ ಸ್ವಾಮೀಜಿ, ಹೂಗಾರ ಪೀಠದ ಗುರುರಾಜೇಂದ್ರ ಶಿವಯೋಗಿಗಳು ಹಳದಿ ದ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಭವ್ಯವಾದ ನಾರಾಯಣ ಗುರುಗಳ ಅಲಂಕೃತ ರಥ, ಡೊಳ್ಳು ಹಲಿಗೆ ಮೇಳಗಳೊಂದಿಗೆ ನೂರಾರು ಸಂಖ್ಯೆಯ ಸಮಾಜ ಬಾಂಧವರು ಕರದಾಳು ಶಕ್ತಿಪೀಠದಿಂದ ಚಿತ್ತಾಪುರದವರೆಗೆ 9 ಕಿಲೋಮೀಟರ್ ಮೊದಲ ದಿನದ ಪಾದಯಾತ್ರೆ ಮಾಡಿದರು. ಈಡಿಗ ಸಮುದಾಯದ 26 ಪಂಗಡಗಳ ಕಲ್ಯಾಣಕ್ಕಾಗಿ ಪ್ರಣ ವಾನಂದ ಶ್ರೀಗಳು ಹಮ್ಮಿಕೊಂಡ ಪಾದಯಾತ್ರೆಯನ್ನು ಎಲ್ಲರೂ ಯಶಸ್ವಿಗೊಳಿಸಬೇಕು.ಆದಷ್ಟು ಬೇಗ ಸರಕಾರ ಸಮಸ್ಯೆಯ ಬಗ್ಗೆ ಸ್ಪಂದನೆ ನೀಡಿ ಪಾದಯಾತ್ರೆ, ಮೊಟಕುಗೊಳಿಸಲು ಪ್ರಯತ್ನಿಸಬೇಕು. ಗಂಗಾವತಿಯ ತಲುಪುವ ಮೊದಲು ಪಾದಯಾತ್ರೆ ಇತ್ಯರ್ಥಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್ ಶ್ರೀನಾಥ್ ಹೇಳಿದರು. 

*ಸಮಾಜದ ಹಿತ ಕಾಯಲು ಪಕ್ಷ, ತ್ಯಾಗಕ್ಕೂ ಸಿದ್ಧ: ಬಾಲರಾಜ್*

ರಾಜ್ಯದಲ್ಲಿ ಈಡಿಗ ಸೇರಿದಂತೆ 26 ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಪ್ರಣವಾನಂದ ಶ್ರೀಗಳನ್ನು ಬಿಟ್ಟರೆ ಮತ್ತೆ ಯಾವೊಬ್ಬ ಸ್ವಾಮೀಜಿಯು ಸ್ಪಂದನೆ ನೀಡುತ್ತಿಲ್ಲ. ಅವರ ಈ ಹಿಂದಿನ ಎರಡು ಪಾದಯಾತ್ರೆಗಳ ಪರಿಣಾಮವಾಗಿ ನಿಗಮ ಮತ್ತು ಕುಲಶಾಸ್ತ್ರೀಯ ಅಧ್ಯಯನದ ಅವಕಾಶ ಸಿಕ್ಕಿದೆ. ಸಮುದಾಯದ ಹಿತ ಕಾಪಾಡಲು ಪಕ್ಷ ಹಾಗೂ ಎಲ್ಲ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಹೇಳಿದರು.

ಪಾದಯಾತ್ರೆ ಕೈ ಬಿಡಲು ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಕರೆ

ಪಾದಯಾತ್ರೆಯನ್ನು ಕೈ ಬಿಡಬೇಕು ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಆದರೆ ಯಾವುದೇ ಸ್ಪಷ್ಟ ಭರವಸೆಗಳಿಲ್ಲದೆ ಪಾದಯಾತ್ರೆ ಕೈ ಬಿಡಲು ಸಾಧ್ಯವಿಲ್ಲ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣಮನಂದ ಶ್ರೀಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. 

    ಕಳೆದ ಎರಡುವರೆ ವರ್ಷಗಳಿಂದ ಈ ಸರಕಾರವು ಸಮುದಾಯದ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಅತಿ ಹಿಂದುಳಿದ ಸಮಾಜವನ್ನು ಕಡೆಗಣಿಸಿದೆ ಬೇಡಿಕೆ ಒತ್ತಾಯಿಸಿ 700 ಕೀ ಮೀ ಪಾದಯಾತ್ರೆ ಮಾಡಲಾಗುವುದು. ಏಕಾಏಕಿ ದೂರವಾಣಿ ಕರೆ ಮಾಡಿ ಪಾದಯಾತ್ರೆ ಕೈ ಬಿಡಲು ಮಾಡಿದ ಮನವಿಯನ್ನು ನಯವಾಗಿ ತಿರಸ್ಕರಿಸಲಾಗಿದೆ. ಮತ್ತು ಬೇಡಿಕೆ ಈಡೇರದಿದ್ದರೆ ಅಮರಣಾಂತ ಉಪವಾಸ ಮಾಡುವುದಾಗಿ ತಿಳಿಸಿದರು. ಸಮುದಾಯದ ಜನರು ಈಗಾಗಲೇ ಆತ್ಮಾಹುತಿಗೂ ಸಿದ್ಧ ಎಂದು ಒತ್ತಾಯಿಸುತ್ತಿದ್ದಾರೆ.

ಸರಕಾರವು ಕೂಡಲೇ ಬೇಡಿಕೆಗಳ ಇತ್ಯರ್ಥಕ್ಕೆ ಮನಸ್ಸು ಮಾಡಬೇಕು. ಇಲ್ಲವಾದರೆ ಯಾವುದೇ ಬೆದರಿಕೆ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ. ಸಮಾಜದ ಬೇಡಿಕೆಗಳನ್ನು ಈಡೇರಿಸಲು ನಡೆಸುವ ಹೋರಾಟಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ ಸಮುದಾಯದ ಜನರನ್ನು ವಿಧಿ ವಿಭಜಿಸಬೇಡಿ ಎಂದು ಪ್ರಣವಾನಂದ ಶ್ರೀಗಳು ಹೇಳಿದರು. ಕಾರ್ಯಕ್ರಮದಲ್ಲಿ ನಿತಿನ್ ಗುತ್ತೇದಾರ್ ಮಹಾದೇವ ಗುತ್ತೇದಾರ್, ಡಾ ಮಂಚೇಗೌಡ, ತಿಪ್ಪೇಶ್, ವೆಂಕಟೇಶ ಎಂ ಕಡೇಚೂರ್,

ಕೆಪಿಎಸ್‌ಸಿ ಮಾಜಿ ಸದಸ್ಯ ಲಕ್ಷ್ಮೀ ನರಸಯ್ಯ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ವನಜಾ 

ಕುಪೇಂದ್ರ ಗುತ್ತೇದಾರ್ ನಾಗುರ್, ಸುರೇಶ್ ಗುತ್ತೇದಾರ್ ಕರದಾಳ, ವೆಂಕಟೇಶ ಗುಂಡನವರು ಮತ್ತಿತರ ಅನೇಕರು ಉಪಸ್ಥಿತರಿದ್ದರು. ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಸಯ್ಯ ಗುತ್ತೇದಾರತೆಲ್ಲೂರು ಮತ್ತು ಶ್ರೀಶೈಲ ಗುತ್ತೇದಾರ್ ಪ್ರಾರ್ಥನಾ ಗೀತೆ ಹಾಡಿದರು. ಕಾಶಿನಾಥ್ ಗುತ್ತೇದಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. 

*ಶಾಸಕರೂ ಪಾದಯಾತ್ರೆಯಲ್ಲಿಹೆಜ್ಜೆ ಹಾಕಿದರು*

ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾಕ್ಟರ್ ಅವಿನಾಶ್ ಜಾಧವ್ ಮತ್ತು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ನಾಗಾವಿ ಯಲ್ಲಮ್ಮ ದೇವಸ್ಥಾನದಿಂದ ಸ್ವಾಮೀಜಿಗಳ ಜೊತೆ ಪಾದಯಾತ್ರೆಯನ್ನು ಕೈಗೊಂಡು ಎಲ್ಲರ ಗಮನ ಸೆಳೆದರು. ಸ್ವಾಮೀಜಿಯವರ ಹೋರಾಟಕ್ಕೆ ಪೂರ್ಣ ಬೆಂಬಲವಿದೆ ಎಂದು ಈ ಸಂದರ್ಭದಲ್ಲಿ ಮಾಲಿಕಯ್ಯ ಗುತ್ತೇದಾರ್ ಸುದ್ದಿಗಾರರಿಗೆ ತಿಳಿಸಿದರು.

*ಮತ್ತೊಬ್ಬ ಅರಸು ಆಗಲು ಯಾರಿಂದಲೂ ಸಾಧ್ಯವಿಲ್ಲ*

ದೇವರಾಜ ಅರಸು ಅವರಿಗೆ ಸರಿ ಸಮಾನವಾಗಿ ಈ ಇವರಿಗೆ ಯಾರು ಹುಟ್ಟಿಲ್ಲ ಅಂತಹ ಮಹಾತ್ಮನ ಸ್ಥಾನ ತುಂಬಲು ಯಾರಿಂದಲೂ ಅಸಾಧ್ಯ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಟಾಂಗ್ ನೀಡಿದರು.

   ದೇವರಾಜ್ ಅರಸುವವರು ಉಳುವವನೇ ಹೊಲದೊಡೆಯ ಕಾನೂನು ಜಾರಿ ಮಾಡಿರುವುದರಿಂದ ಅತಿ ಹಿಂದುಳಿದ ಸಮುದಾಯದವರು ಭೂಮಿಯ ಹಕ್ಕನ್ನು ಪಡೆಯಲು ಸಾಧ್ಯವಾಗಿದೆ ಅಂತಹ ನಾಯಕ ಇನ್ನೊಬ್ಬ ಈವರೆಗೆ ಹುಟ್ಟಿಲ್ಲ ಎಂದು ಹೇಳಿದರು