ಎಕ್ಸ್ಪೋರ್ಟ್–ಇಂಪೋರ್ಟ್ ಉದ್ಯೋಗ ಆರಂಭಿಸಲು ಕಲಬುರಗಿಯಲ್ಲಿ ಒಂದು ದಿನದ ಕಾರ್ಯಾಗಾರ
ಎಕ್ಸ್ಪೋರ್ಟ್–ಇಂಪೋರ್ಟ್ ಉದ್ಯೋಗ ಆರಂಭಿಸಲು ಕಲಬುರಗಿಯಲ್ಲಿ ಒಂದು ದಿನದ ಕಾರ್ಯಾಗಾರ
ಕಲಬುರಗಿ: ಎಕ್ಸ್ಪೋರ್ಟ್ ಹಾಗೂ ಇಂಪೋರ್ಟ್ ಉದ್ಯೋಗ ಆರಂಭಿಸುವವರು ಮತ್ತು ಈ ಕ್ಷೇತ್ರದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಆಸಕ್ತರಿಗೆ ಸುವರ್ಣ ಅವಕಾಶವಾಗಿ, ಕಲಬುರಗಿ ನಗರದಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ದಿನಾಂಕ 11 ಜನವರಿ 2026 ರಂದು ದಿ ಓಕ್ಸ್ ಎಲೈಟ್, ಸೇಡಂ ರಸ್ತೆ, ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಕಾರ್ಯಾಗಾರದ ಮುಖ್ಯ ಉದ್ದೇಶ ನಮ್ಮ ಭಾಗದಲ್ಲಿ ಬೆಳೆಯುವ ಹಾಗೂ ಉತ್ಪಾದನೆಯಾಗುವ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಇರುವ ಹೆಚ್ಚಿನ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸುವಂತಹ ಎಕ್ಸ್ಪೋರ್ಟ್–ಇಂಪೋರ್ಟ್ ಉದ್ಯಮಿಗಳನ್ನು ರೂಪಿಸುವುದು ಆಗಿದೆ. ತೊಗರಿ ಬೇಳೆ, ಶಾಬಾದ್ ಪರ್ಸಿ ಸೇರಿದಂತೆ ಹಲವು ಉತ್ಪನ್ನಗಳಿಗೆ ವಿದೇಶಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದ್ದರೂ, ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಸ್ಥಳೀಯವಾಗಿ ಉತ್ಪಾದಕರಿಗೆ ಅಗತ್ಯ ಅವಕಾಶಗಳು ದೊರೆಯುತ್ತಿಲ್ಲ.
ನಮ್ಮ ಪ್ರದೇಶದಲ್ಲಿ ಬೆಳೆದ ಅನೇಕ ಉತ್ಪನ್ನಗಳನ್ನು ಬೇರೆ ರಾಜ್ಯಗಳವರು ಖರೀದಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಕೈ ತಪ್ಪುತ್ತಿವೆ. ಈ ಹಿನ್ನೆಲೆ, ವಿದೇಶಗಳಿಗೆ ರಫ್ತು ಮಾಡಲು ಬೇಕಾದ ನಿಯಮಗಳು, ಪ್ರಕ್ರಿಯೆಗಳು, ಗ್ರಾಹಕರನ್ನು ಕಂಡುಕೊಳ್ಳುವ ವಿಧಾನ, ಬ್ರಾಂಡಿಂಗ್, ಪ್ಯಾಕೇಜಿಂಗ್ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ಈ ಕಾರ್ಯಾಗಾರದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಇದಷ್ಟೇ ಅಲ್ಲದೆ, ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದಾದ ಕೃಷಿ ತಂತ್ರಜ್ಞಾನ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಹೇಗೆ ತರಿಸಿಕೊಳ್ಳಬೇಕು, ಅವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಬ್ರಾಂಡ್ ಮಾಡಿ ಮಾರಾಟ ಮಾಡುವ ವಿಧಾನಗಳ ಕುರಿತೂ ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ನುರಿತ ಹಾಗೂ ಅನುಭವಿ ತಜ್ಞರೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಕನಿಷ್ಠ ನೂರು ಎಕ್ಸ್ಪೋರ್ಟರ್ ಮತ್ತು ಇಂಪೋರ್ಟರ್‌ಗಳನ್ನು ತಯಾರಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ತಿಳಿಸಲಾಗಿದೆ.
ಆಸಕ್ತರು ತಕ್ಷಣವೇ ನೀಡಿರುವ QR ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಾಗಾರ ಶುಲ್ಕ ರೂ. 2,999 ಆಗಿದ್ದು, ಆಸನಗಳು ಸೀಮಿತವಾಗಿವೆ. ಈ ಮಾಹಿತಿಯನ್ನು ಸ್ನೇಹಿತರು ಹಾಗೂ ಬಂಧುಗಳಿಗೆ ಹಂಚಿಕೊಂಡು ಹೆಚ್ಚಿನವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಕುರಿತು ಇಂದು ಕಲಬುರಗಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ಗಜೋರೆ, ಸಿದ್ದ್ಲಿಂಗ್ ಶೆಲ್ಲಾಸ್, ಶ್ರೀಚೈಲ್ ರೆಡ್ಡಿ ಮೋರ್ಪಳ್ಳಿ ಹಾಗೂ ಅಶ್ವನಾಥ ಭಕ್ತಿ ಅವರು ಮಾಹಿತಿ ನೀಡಿದರು.
