ದಿನನಿತ್ಯ ಜೀವನದಲ್ಲಿ ಕನ್ನಡ ಬಳಕೆಯಿಂದಲೇ ಭಾಷೆ ಬೆಳವಣಿಗೆ ಸಾಧ್ಯ – ನೀಲಕಂಠರಾವ ಮೂಲಗೆ
ದಿನನಿತ್ಯ ಜೀವನದಲ್ಲಿ ಕನ್ನಡ ಬಳಕೆಯಿಂದಲೇ ಭಾಷೆ ಬೆಳವಣಿಗೆ ಸಾಧ್ಯ – ನೀಲಕಂಠರಾವ ಮೂಲಗೆ
ಕಲಬುರಗಿ: ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ದಿನನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸಿದಾಗ ಮಾತ್ರ ಅದರ ನಿಜವಾದ ಬೆಳವಣಿಗೆ ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಹೇಳಿದರು.
ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾಮಂಡಳದಲ್ಲಿ ನಡೆದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಬೇಡ್ ಶೀಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಬದುಕು ಕನ್ನಡ ಭಾಷೆಗೆ ಮೀಸಲಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಸಪಾಯಿ ಕರ್ಮಚಾರಿಗಳ ದಿನನಿತ್ಯದ ಬದುಕು ಅತ್ಯಂತ ಕಷ್ಟಕರವಾಗಿದ್ದು ಅವರಿಗೆ ಸಿಗಬೇಕಾದ ಸವಲತ್ತುಗಳು ದೊರೆತಾಗ ಮಾತ್ರ ಅವರ ಜೀವನ ಸಾರ್ಥಕವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಬಸವರಾಜ್ ಕಾಮರೆಡ್ಡಿ ಮಾತನಾಡಿ, ಪ್ರಕೃತಿಯು ನಮಗೆ ಪಂಚಭೂತಗಳನ್ನು ನೀಡಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೇ ಹೊರತು ನಾಶಪಡಿಸಬಾರದು ಎಂದು ಸಲಹೆ ನೀಡಿದರು.
ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಮಾತನಾಡಿ, ಕನ್ನಡ ಭಾಷೆ, ನೆಲ-ಜಲ ಮತ್ತು ಸಪಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಜೈ ಕನ್ನಡಿಗರ ಸೇನೆಯ ಅಧ್ಯಕ್ಷ ದತ್ತು ಭಾಸಗಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಜೈ ಕನ್ನಡಿಗರ ಸೇನೆಯ ಅಧ್ಯಕ್ಷ ದತ್ತು ಭಾಸಗಿ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಎಸ್ಐ ಪೋಲಿಸ್ ಅಧಿಕಾರಿ,ಡಾ ಅಣ್ಣಪ್ಪ ಎಸ್ ಜಿ ,ಗಣಜಲಖೇಡದ ಪೂಜ್ಯ ನಾಗೇಶ್ ಮುತ್ಯಾ ಅವರು ಸಾನಿಧ್ಯ ವಹಿಸಿದ್ದರು.
ಸಫಾಯಿ ಕರ್ಮಚಾರಿಗಳ ನಾಲ್ಕು ತಿಂಗಳಿಂದ ಬಾಕಿ ಇರುವ ಸಂಬಳವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಪುತ್ರ ಶರಣಗೌಡ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, 200 ಕ್ಕೂ ಹೆಚ್ಚು ಸಪಾಯಿ ಕರ್ಮಚಾರಿಗಳಿಗೆ ಬೇಡ್ಶೀಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಸಿದ್ದು ಹಂಚನಾಳ ಅವರು ನಿರೂಪಿಸಿದರು.ಸಂಜೀವಕುಮಾರ ಜಿ ಮಾಳಗಿ, ಮಲ್ಲು ಆಲಗೂಡ , ದಿಲೀಪ್ ಕುಮಾರ್ ಕೊಡ್ಲಿ ,ಅಭಿಷೇಕ್ ಅಪ್ಪಾಜಿ ಕೊಟನೂರ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡಾಂಬೆ ಪೂಜೆ
2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ
ಸಫಾಯಿ ಕರ್ಮಚಾರಿಗಳಿಗೆ ಬೇಡ್ಡಶೀಟ ವಿಚಾರಣೆ
