ಬಾಬು ಜಗಜೀವನರಾಮ ಜಯಂತಿಗೆ ರಾಜು ಹದನೂರ ಆಯ್ಕೆ

ಬಾಬು ಜಗಜೀವನರಾಮ ಜಯಂತಿಗೆ ರಾಜು ಹದನೂರ ಆಯ್ಕೆ

ಬಾಬು ಜಗಜೀವನರಾಮ ಜಯಂತಿಗೆ ರಾಜು ಹದನೂರ ಆಯ್ಕೆ

ಕಲಬುರಗಿ : ದೇಶದ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತೋತ್ಸವ ಆಚರಣೆ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ನ್ಯಾಯವಾದಿ ರಾಜು ಹದನೂರ ಹಾಗೂ ಗೌರವಧ್ಯಕ್ಷರಾಗಿ ಮಂಜುನಾಥ ನಾಲವಾರಕರ್ ಅವರನ್ನು ಆಯ್ಕೆ ಮಾಡಲಾಯಿತು ಮಾದಿಗ ಸಮಾಜದ ಹಿರಿಯ ಮುಖಂಡರು ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಬಾಬು ಜಗಜೀವನ್ ರಾಮ್ ರವರ 119ನೇ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಗೌರವಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಪ್ರತಿಯೊಬ್ಬ ಪದಾಧಿಕಾರಿಗಳು ಒಗ್ಗಟ್ಟಾಗಿ ನಿಂತು ಮಾದಿಗ ಸಮಾಜವನ್ನು ಗಟ್ಟಿಗೊಳಿಸಬೇಕು. ಇದರ ಜೊತೆಗೆ ನಮ್ಮ ಸಮುದಾಯದ ಕೆಲಸಗಳನ್ನು ಸಹ ನೋಡಿಕೊಳ್ಳಬೇಕು. ಸಂಘ ಮಾಡುವುದು ದೊಡ್ಡದಲ್ಲ ಅದನ್ನು ನಿರ್ವಹಣೆ ಮಾಡಿಕೊಂಡು ಹೋಗುವುದು ಬಹಳ ಕಷ್ಟ, ಹಾಗಾಗಿ ಎಲ್ಲರೂ ಸಹಕಾರದಿಂದ ಸಮಾಜವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಬೇಕು ಎಂದರು.

                 ಮಾರ್ಚ 5ರಂದು ನಗರ‌ ಜಗತ್ತ ವೃತದಲ್ಲಿರುವ ಆಮಂತ್ರಣ ಹೋಟೆಲ್ ನಲ್ಲಿ ಜಿಲ್ಲಾ ಮಟ್ಟದ ಸಭೆ ಕರೆದು ಪಧಾದಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ನ್ಯಾಯವಾದಿ ರಾಜು ಹದನೂರ ಹಾಗೂ ಗೌರವಾಧ್ಯಕ್ಷ ಮಂಜುನಾಥ ನಾಲವಾರಕರ್ ಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.