ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮುಳ್ಳಿನ ಗಿಡ ಗಂಟಿಗಳನ್ನು ತೆರವು

ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮುಳ್ಳಿನ ಗಿಡ ಗಂಟಿಗಳನ್ನು  ತೆರವು

ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮುಳ್ಳಿನ ಗಿಡ ಗಂಟಿಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಆನಂದ್ ದೊಡ್ಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕಟ್ಟಿಮನಿ, ಆಳಂದ್ ತಾಲೂಕ ಅಧ್ಯಕ್ಷರಾದ ಸಚಿನ್ ಜಿ ಲೋಕಾಣಿ, ಆಳಂದ್ ತಾಲೂಕು ಉಪಾಧ್ಯಕ್ಷ ಜಗನ್ನಾಥ್ ಬಿರಾದರ್, ಕಾರ್ಯದರ್ಶಿಗಳಾದ ಶ್ರೀಶೈಲ್ ಬಿರಾದರ್, ಶಶಿಕಾಂತ್ ಕೆರಳ್ಳಿ, ಸಂಘಟನೆಯ ಕಾರ್ಯಕರ್ತರಾದ ಮಹದೇವ್ ಬಿರಾದರ್, ಶರಣಬಸು ಬಿರಾದರ್ ಇವರ ನೇತೃತ್ವದಲ್ಲಿ ಕಮಲಾನಗರ ಗ್ರಾಮದಲ್ಲಿ ರೈತರು ತಮ್ಮ ಜಮೀನಿಗೆ ಹೋಗುವ ರಸ್ತೆ ಮುಳ್ಳಿನ ಕಂಟೆಗಳು ಬೆಳೆದಿದ್ದವು ರೈತರು ತಮ್ಮ ಜಮೀನಿಗೆ ಹೋಗಲು ಬಹಳ ತೊಂದರೆ ಅನುಭವಿಸುತ್ತಿದ್ದರು. 

ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಎಲ್ಲಾ ಮುಳ್ಳಿನ ಗಿಡ ಗಂಟಿಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಯಿತು. ರೈತರ ಪರವಾಗಿ ಯಾವುದೇ ರಾಜಕಾರಣಿ ಹಾಗೂ ಗ್ರಾಮ ಪಂಚಾಯಿತಿ ಯವರು ರೈತರಿಗೆ ಹೊಲಗಳಿಗೆ ಹೋಗಲು ದಾರಿ ಅನುಕೂಲ ಮಾಡಿ ಕೊಟ್ಟಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿAದ ಮಾಡಿ ಕೊಟ್ಟಿದ್ದೇವೆ ಕನ್ನಡಪರ ಹೋರಾಟಗಾರರು ಟಿಎ ನಾರಾಯಣಗೌಡರ ಸಾರಥ್ಯದಲ್ಲಿ ಜಿಲ್ಲಾಧ್ಯಕ್ಷರ ಸಾರಥ್ಯದಲ್ಲಿ ತಾಲೂಕು ಅಧ್ಯಕ್ಷರ ಸಾರಥ್ಯದಲ್ಲಿ ನಮ್ಮ ಸಂಘಟನೆ ಪರವಾಗಿ 2 ರಿಂದ 3 ಕಿಲೋಮೀಟರ್ ವರೆಗೂ ಜಂಗಲ್ ಕಟಿಂಗ್ ಮಾಡಿಕೊಟ್ಟಿದ್ದೇವೆ ರೈತರಿಗಾಗಿ ಹೋಗಲು ದಾರಿ ಅನುಕೂಲ ಮಾಡಿ ಕೊಟ್ಟಿದ್ದೇವೆ.

ಈ ಸಂದರ್ಭದಲ್ಲಿ ರೈತರಾದ ಬಸವರಾಜ್ ಬಿರಾದಾರ್, ಗಣಪತಿ ಮಾಲಿ ಪಾಟೀಲ್, ಗುರು ಸಾಹು, ಶಿವರಾಜ್ ಬಿರಾದಾರ್, ಖಾಮಣ್ಣ ಪೂಜಾರಿ, ಗುಂಡಪ್ಪ ಪೂಜಾರಿ, ಶಿವಶರಣಪ್ಪ ಕೆರಳ್ಳಿ, ಹನುಮಂತ್ ಪೂಜಾರಿ, ಮಹದೇವಪ್ಪ ಬಿರಾದರ್, ಮೇಘರಾಜ್ ಬಿಲಗುಂದಿ, ನಾಗರಾಜ್ ವಾಗ್ದರ್ಗಿ, ಉಪಸ್ಥಿತರಿದ್ದರು. ನಾವು ಯಾವಾಗಲೂ ರೈತರ ಪರ ಕರ್ನಾಟಕಕ್ಕೆ ಏನಾದರೂ ಧಕ್ಕೆ ಆದರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟ ಮಾಡಲು ಇಂತಹ ಸಾಮಾನ್ಯ ಕೆಲಸ ಮಾಡಿಕೊಡಲು ಮುಂದಾಗುತ್ತೇವೆ ಎಂದರು.