ಚಿಂತಾಕಿ, ಬಲ್ಲೂರ(ಜೆ) ವಸತಿ ಶಾಲೆಗಳಿಗೆ ಶಾಸಕ ಪ್ರಭು ಚವ್ಹಾಣ ಭೇಟಿ
ಚಿಂತಾಕಿ, ಬಲ್ಲೂರ(ಜೆ) ವಸತಿ ಶಾಲೆಗಳಿಗೆ ಶಾಸಕ ಪ್ರಭು ಚವ್ಹಾಣ ಭೇಟಿ
ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಕಮಲನಗರ:ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಚಿಂತಾಕಿಯ ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಹಾಗೂ ಬಲ್ಲೂರ(ಜೆ) ಗ್ರಾಮದಲ್ಲಿನ ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆಗೆ ನ.20ರಂದು ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ತರಗತಿ ಕೋಣೆಗಳು, ಪ್ರಯೋಗಾಯಾಲಯ, ಕಂಪ್ಯೂಟರ್ ಕೋಣೆ, ಲೈಬ್ರರಿ, ಭೋಜನಾಲಯ, ಬಾಲಕಿಯರ ವಸತಿ ನಿಲಯ ಸೇರಿದಂತೆ ವಸತಿ ಶಾಲೆಯ ಆವರಣದಲ್ಲಿ ಸಂಚರಿಸಿ ಕಾಮಗಾರಿ ಹೇಗೆ ನಡೆಯುತ್ತಿದೆ ಎಂದು ತಿಳಿದುಕೊಂಡರು. ನಮ್ಮ ಭಾಗದ ಬಡ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ಹಿಂದೆ ನಾನು ಸಚಿವನಾಗಿದ್ದಾಗ ಸಾಕಷ್ಟು ಪ್ರಯತ್ನಪಟ್ಟು ವಸತಿ ಶಾಲೆಗಳನ್ನು ಮಂಜೂರು ಮಾಡಿಸಿ, ಅವಶ್ಯಕ ಅನುದಾನ ತಂದು ಕೆಲಸ ಆರಂಭಿಸಿದ್ದೇನೆ ಎಂದು ಹೇಳಿದರು.
ಬಲ್ಲೂರ(ಜೆ) ವಸತಿ ಶಾಲೆಗೆ ಭೇಟಿ ನೀಡಿ ಅಂದಾಜು ಪಟ್ಟಿಯಲ್ಲಿ ಇರುವಂತೆ ಕೆಲಸ ಮಾಡಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಂಡರು. ವಸತಿ ನಿಲಯದಲ್ಲಿನ ಬೆಡ್, ತರಗತಿ ಕೋಣೆಗಳಲ್ಲಿನ ಬೆಂಚುಗಳು ಹಾಗೂ ಮತ್ತಿತರೆ ಸೌಕರ್ಯಗಳನ್ನು ಗಮನಿಸಿ, ವಸತಿ ನಿಲಯದಲ್ಲಿನ ಎಲ್ಲ ಉಪಕರಣಗಳು ಗುಣಮಟ್ಟದಿಂದ ಕೂಡಿರಬೇಕು. ಈ ವಿಷಯದಲ್ಲಿ ಲೋಪವಾದರೆ ನಾನು ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು. ಕಾಮಗಾರಿಗೆ ಚಾಲನೆ ನೀಡಿ ಬಹಳಷ್ಟು ದಿನಗಳಾಗಿವೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಏಕೆ ಮುಗಿಸಿಲ್ಲವೆಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅಂದಾಜು ಪಟ್ಟಿಯಲ್ಲಿರುವಂತೆ ಎಲ್ಲ ಕೆಲಸಗಳು ಪೂರ್ಣಗೊಳಿಸಬೇಕು. ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಏನಾದರೂ ಲೋಪಗಳು ಕಾಣಿಸಿದರೆ ತಕ್ಷಣ ಸರಿಪಡಿಸಬೇಕು. ಇಲ್ಲವಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅಧಿಕಾರಿಗಳ ವಿರುದ್ದವೂ ಕಠಿಣ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
*ಬೇಗ ಆರಂಭಿಸಿ:* ಚಿಂತಾಕಿ ವಸತಿ ಶಾಲೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಶಾಸಕರನ್ನು ಭೇಟಿ ಮಾಡಿ ಪ್ರಸ್ತುತ ವಾಸವಿರುವ ತಾತ್ಕಾಲಿಕ ವಸತಿ ನಿಲಯ ತುಂಬಾ ಚಿಕ್ಕದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಸಾಕಷ್ಟು ಸಮಸ್ಯೆಯಾಗುತ್ತಿದೆ, ಬೇಗ ಹೊಸ ಕಟ್ಟಡ ಆರಂಭಿಸಬೇಕೆAದು ಮನವಿ ಮಾಡಿದರು. ನಾನು ನಿಮಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದಲೇ 15 ಕೋಟಿ ಅನುದಾನ ತಂದು ಭವ್ಯವಾದ ವಸತಿ ನಿಲಯವನ್ನು ನಿರ್ಮಿಸುತ್ತಿದ್ದೇನೆ. ಶೀಘ್ರ ಆರಂಭಿಸಬೇಕೆನ್ನುವುದು ನನ್ನ ಹಂಬಲವೂ ಇದೆ. ಇನ್ನು ಮುಂದೆ ವಿಳಂಬವಾಗಲು ಬಿಡುವುದಿಲ್ಲ. ಒಂದು ತಿಂಗಳೊಳಗಾಗಿ ಕಟ್ಟಡ ಆರಂಭಿಸಲು ಕ್ರಮ ವಹಿಸುತ್ತೇನೆ. ತಾವು ಸರಿಯಾಗಿ ಅಭ್ಯಾಸ ಮಾಡಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
*ಕುಡಿಯುವ ನೀರಿನ ಸಮಸ್ಯೆ:* ಬಲ್ಲೂರ(ಜೆ) ಶ್ರೀಮತಿ ಇಂದಿರಾಗಾAದಿ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾಚಾರ್ಯರು ವಸತಿ ನಿಲಯದ ಆವರಣದಲ್ಲಿ ಈಗಾಗಲೇ 2-3 ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಸುಮಾರು 250 ವಿದ್ಯಾರ್ಥಿಳಿರುವ ವಸತಿ ಶಾಲೆಗೆ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸಾಕಷ್ಟು ಪ್ರಯತ್ನಪಟ್ಟು ವಸತಿ ನಿಲಯವನ್ನು ವಸತಿ ಶಾಲೆಯನ್ನು ಮಂಜೂರು ಮಾಡಿಸಿ ಕೆಲಸ ಆರಂಭಿಸಲಾಗಿದೆ. ಯಾವುದೇ ರೀತಿಯ ಕೊರತೆಗಳು ಇರದಂತೆ ನೋಡಿಕೊಳ್ಳಬೇಕು. ಈ ದಿಶೆಯಲ್ಲಿ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರೇಮಸಾಗರ, ಎಂಜಿನೀಯರ ರಮೇಶ ಕೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ, ದಯಾನಂದ ಘೂಳೆ, ಕೇರಬಾ ಪವಾರ್, ರವೀಂದ್ರರೆಡ್ಡಿ ಉಜನಿ, ರಾಜಪ್ಪ ಸೋರಾಳೆ, ಈರಾರೆಡ್ಡಿ ನಾಗನಪಲ್ಲಿ, ಗೋವಿಂದರೆಡ್ಡಿ ಎನಪತ್ಲೆ, ಗೋವಿಂದ ರೆಡ್ಡಿ, ಖಾಜಾಮಿಯ್ಯಾ, ಸಂಜು ಉಪ್ಪಾರ, ಮಾರುತಿರೆಡ್ಡಿ ಪಟ್ನೆ, ಅಶೋಕ ಶೆಂಬೆಳ್ಳಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳು, ವಸತಿ ಶಾಲೆಗಳ ಪ್ರಾಂಶುಪಾಲರು ಸೇರಿದಂತೆ ಇತರರು ಉಪಸ್ಥಿತರಿದ್ದರು
