ರಾವೂರ ಮಕ್ಕಳಿಂದ ಅಣಕು ವಿಧಾನಸಭಾ ಅಧಿವೇಶನ.

ರಾವೂರ ಮಕ್ಕಳಿಂದ ಅಣಕು ವಿಧಾನಸಭಾ ಅಧಿವೇಶನ.
ಚಿತ್ತಾಪೂರ : ಪ್ರತಿ ವರ್ಷ ಮಕ್ಕಳ ದಿನಾರಣೆಯ ಅಂಗವಾಗಿ ಒಂದಿಲ್ಲದೊಂದು ಮಕ್ಕಳ ವಿನೂತನ ಪ್ರಯೋಗಗಳನ್ನು ಹಮ್ಮಿಕೊಳ್ಳುವ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಈ ಬಾರಿ ಅಣಕು ವಿಧಾನಸಭಾ ಅಧಿವೇಶನಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಕ್ರಮದ ಸಂಯೋಜಕ ಸಿದ್ದಲಿಂಗ ಬಾಳಿ, ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಮಕ್ಕಳಿಗಾಗಿ ಇಂತಹದೊಂದು ಪ್ರಯೋಗ ಹಮ್ಮಿಕೊಳ್ಳಲಾಗಿದೆ. ಒಟ್ಟು 40 ಮಕ್ಕಳು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರಾಗಿ, ಸಚಿವರಾಗಿ, ಸಭಾಪತಿಯಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ನವೆಂಬರ್ 13 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಈ ಅಧಿವೇಶನ ನಡೆಯಲಿದೆ ಎಂದು ಹೇಳಿದರು.