ಪಾಳಾ ಸ ಶಾಲೆಯಲ್ಲಿ ಮಕ್ಕಳಿಗೆ ಕಿಟ್ ವಿತರಣೆ

ಪಾಳಾ ಸ ಶಾಲೆಯಲ್ಲಿ ಮಕ್ಕಳಿಗೆ ಕಿಟ್ ವಿತರಣೆ

ಪಾಳಾ ಸ ಶಾಲೆಯಲ್ಲಿ ಮಕ್ಕಳಿಗೆ ಕಿಟ್ ವಿತರಣೆ

ಕಲಬುರಗಿ: ಪ್ರಗತಿ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಳಾ ಹಾಳ ತಾಂಡಾದಲ್ಲಿ ಶಾಲಾ ಮಕ್ಕಳಿಗೆ ಮತ್ತು ತಾಂಡಾದ ನಾಗರಿಕರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಗತಿ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ನ್ ಅಧ್ಯಕ್ಷೆ ಅಂಜನಾ ಡಿ ರಾಠೋಡ, ನಿವೃತ ಸರ್ಕಲ್ ಇನ್ಸ್ಪೆಕ್ಟರ್ ಟಿ. ಆರ್. ಪವ್ಹಾರ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದ ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ರಾಠೋಡ, ಯುವ ಮುಖಂಡ ಮಲ್ಲಿಕಾರ್ಜುನ, ಮುಖ್ಯಗುರು ಶಿಲ್ಪಾ, ಸಹ ಶಿಕ್ಷಕಿ ನಾಗಮಣಿ, ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಕಾಂತ ಜಾಧವ ಸೇರಿದಂತೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಳಾ ಹಾಳ ತಾಂಡಾ ಹಾಗೂ ತಾಂಡಾದ ನಾಯಕ, ಕಾರಭಾರಿ, ತಾಂಡಾದ ನಿವಾಸಿಗಳು ಉಪಸ್ಥಿತರಿದ್ದರು.