ಕುಲವನ್ನೇ ಪ್ರಶ್ನಿಸಿದ ಕನಕದಾಸರನ್ನ ಒಂದು ಕುಲಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ : ಸಿದ್ದಲಿಂಗ ಶ್ರೀ

ಕುಲವನ್ನೇ ಪ್ರಶ್ನಿಸಿದ ಕನಕದಾಸರನ್ನ ಒಂದು ಕುಲಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ : ಸಿದ್ದಲಿಂಗ ಶ್ರೀ

ಕುಲವನ್ನೇ ಪ್ರಶ್ನಿಸಿದ ಕನಕದಾಸರನ್ನ ಒಂದು ಕುಲಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ : ಸಿದ್ದಲಿಂಗ ಶ್ರೀ 

15-16ನೇ ಶತಮಾನದಲ್ಲಿ ಭಕ್ತಿ ಪಂಥದ ಹರಿಕಾರರಾಗಿ ಕನ್ನಡ ಭಾಷೆಯಲ್ಲಿ ಕೀರ್ತನೆ, ಉಗಾಭೋಗಗಳನ್ನು ರಚಿಸಿ ಹಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಕನಕದಾಸರು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕನಕದಾಸರು ಜಾತಿ. ಮತ. ಪoಥಗಳನ್ನು ಮೀರಿ ಬೆಳೆದವರು ಇಂತಹ ದಾಸರನ್ನು ಇಂದು ಜಾತಿ. ಮತಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು.ಸಮಾಜದಲ್ಲಿರುವ ಜಾತಿಯತೆಯನ್ನು, ಮೇಲು ಕೀಳು ಭಾವನೆಯನ್ನು, ಸಾಮಾಜಿಕ ತಾರತಮ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿ ಸುಧಾರಿಸುವ ಕಾರ್ಯವನ್ನು ಕನಕದಾಸರು ಮಾಡಿದರು ಎಂದು ಹೇಳಿದರು.

ಪ್ರಾಸ್ಥವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ ದಾಸಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ. ದಾಸಸಾಹಿತ್ಯವಿಲ್ಲದ ಕನ್ನಡ ಸಾಹಿತ್ಯ ಅಪೂರ್ಣ. ಆದ್ದರಿಂದ ಪ್ರತಿಯೊಬ್ಬರೂ ಕನಕದಾಸರ ಜೀವನವನ್ನು ಓದಿ ಅವರು ಬರೆದ ಸಾಹಿತ್ಯವನ್ನು ಅಧ್ಯಯನ ಮಾಡಿ ಆ ದಾರಿಯನ್ನು ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಮಲ್ಲಿನಾಥ ತುಮಕೂರ, ಶಿವಶರಣಪ್ಪ ಕೊಳ್ಳಿ, ಸಾಹೇಬಗೌಡ ತುಮಕೂರ, ಅಶೋಕ ವಗ್ಗರ, ಸಂಗಮೇಶ್ ಪೂಜಾರಿ, ನಿಂಗಣ್ಣ ಕೊಳ್ಳಿ, ಭೀಮು ಮದಗುಣಕಿ, ಮಹೇಶ ಬಾಳಿ, ಚಂದ್ರು ಕೊಳ್ಳಿ, ಶಿವು ಕಂಠಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.