ಡಾ. ಅಲೋಕ್ ಮೋಹನ್ ನಿವೃತ್ತಿ: ಹಂಗಾಮಿ ಡಿಜಿ ಐಜಿಪಿಯಾಗಿ ಡಾ. ಎಂ.ಎ. ಸಲೀಂ ನೇಮಕ

ಡಾ. ಅಲೋಕ್ ಮೋಹನ್ ನಿವೃತ್ತಿ: ಹಂಗಾಮಿ ಡಿಜಿ ಐಜಿಪಿಯಾಗಿ ಡಾ. ಎಂ.ಎ. ಸಲೀಂ ನೇಮಕ

ಡಾ. ಅಲೋಕ್ ಮೋಹನ್ ನಿವೃತ್ತಿ: ಹಂಗಾಮಿ ಡಿಜಿ ಐಜಿಪಿಯಾಗಿ ಡಾ. ಎಂ.ಎ. ಸಲೀಂ ನೇಮಕ

ಬೆಂಗಳೂರು, ಮೇ 21 (ಕೆಕೆಪಿ ವಾರ್ತೆ):ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ ಐಜಿಪಿ) ಸೇವೆ ಸಲ್ಲಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಅಲೋಕ್ ಮೋಹನ್ ಅವರು ಇಂದು, ಮೇ 21 ರಂದು ಅಧಿಕೃತವಾಗಿ ನಿವೃತ್ತಿ ಹೊಂದಿದ್ದಾರೆ. ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 1993ನೇ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಿದೆ.

ಪ್ರಸ್ತುತ ಸಿಐಡಿ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸಲೀಂ ಅವರನ್ನು ಸೇವಾ ಜೇಷ್ಠತೆ ಗಮನದಲ್ಲಿರಿಸದೇ ನೇಮಕ ಮಾಡಲಾಗಿದ್ದು, ಈ ನಿರ್ಧಾರ ರಾಜ್ಯ ಸರಕಾರದ ವಿಶೇಷ ಒಲವಿನಂತೆ ಕಂಡುಬರುತ್ತಿದೆ. ಡಿಜಿಪಿ ಹುದ್ದೆಗೆ ಪ್ರಶಾಂತ್ ಕುಮಾರ್ ಠಾಕೂರ್ ಅವರ ಹೆಸರು ಜೇಷ್ಠತೆ ಆಧಾರದ ಮೇಲೆ ಮುಂದಿನ ಸಾಲಿನಲ್ಲಿ ಇದ್ದರೂ, ಸಲೀಂ ಅವರನ್ನು ಹಂಗಾಮಿ ನೇಮಕ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ.

ಡಾ. ಎಂ.ಎ. ಸಲೀಂ – ಅನುಭವಸಂಪನ್ನ ಅಧಿಕಾರಿ:

1993ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿ ಡಾ. ಸಲೀಂ ಅವರು ತಮ್ಮ ವೃತ್ತಿ ಜೀವನವನ್ನು 1995ರಲ್ಲಿ ಕುಶಾಲನಗರ ಎಎಸ್‌ಪಿಯಾಗಿ ಆರಂಭಿಸಿದರು. ನಂತರ ಉಡುಪಿ ಎಸ್‌ಪಿಯಾಗಿ, ಮೈಸೂರು ಪೊಲೀಸ್ ಆಯುಕ್ತ, ಬೆಂಗಳೂರು ವಿಶೇಷ ಪೊಲೀಸ್ ಆಯುಕ್ತ, ಪೂರ್ವ ವಲಯದ ಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಎಸಿಬಿ ನಿರ್ದೇಶಕರಾಗಿ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಗಳಿಗೂ ನೇತೃತ್ವ ವಹಿಸಿದ್ದರು.

ತಾತ್ಕಾಲಿಕ ಹಂಗಾಮಿ ಡಿಜಿಪಿಯಾಗಿ ಅವರ ನೇಮಕ ಮಾಡಲಾಗಿದ್ದರೂ, ಜನರ ಭದ್ರತೆಗಾಗಿ ಅಧಿಕಾರಿಯಾಗಿರುವ ಈ ಹುದ್ದೆಗೆ ಅಂತಿಮ ಆಯ್ಕೆ ಯಾರು ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.