ನಗರದಲ್ಲಿ ಕಾನೂನು ಸು-ವ್ಯವಸ್ಥೆಯನ್ನು ಜಾರಿಗೆ ತರುವಂತೆ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್. ಢಗೆ ರವರಿಗೆ ಮುತ್ತಣ್ಣ ನಡಗೇರಿ ಮನವಿ

ನಗರದಲ್ಲಿ ಕಾನೂನು ಸು-ವ್ಯವಸ್ಥೆಯನ್ನು ಜಾರಿಗೆ  ತರುವಂತೆ  ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್. ಢಗೆ ರವರಿಗೆ ಮುತ್ತಣ್ಣ ನಡಗೇರಿ ಮನವಿ

ನಗರದಲ್ಲಿ ಕಾನೂನು ಸು-ವ್ಯವಸ್ಥೆಯನ್ನು ಜಾರಿಗೆ ತರುವಂತೆ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್. ಢಗೆ ರವರಿಗೆ ಮುತ್ತಣ್ಣ ನಡಗೇರಿ ಮನವಿ ಮಾಡಿದ್ದಾರೆ.

ಕಲಬುರಗಿ ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಡಾ|| ಶರಣಪ್ಪ ಎಸ್. ಢಗೆ ಅವರು ಮೂಲತಃ ಕಲಬುರಗಿ ಜಿಲ್ಲೆಯವರಾಗಿದ್ದು ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮನವಿಯನ್ನು ಸಲ್ಲಿಸಿದರು.

 ನಗರ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ದರೋಡೆಗಳನ್ನು ಹೆಚ್ಚಾಗಿದೆ ಅದನ್ನು ನಿಯಂತ್ರಣ ಮಾಡಬೇಕು. ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು, ಕಲಬುರಗಿ ನಗರದ ರೌಡಿಗಳ ಅಟ್ಟಹಾಸ ನಿಯಂತ್ರಣ , ಲಾಡ್ಜಗಳಲ್ಲಿನ ಅನೈತಿಕ ಚಟುವಟಿಕೆ, ಮಟಕಾ, ಆನ್‌ಲೈನ್ ಬೆಟ್ಟಿಂಗ್, ಸೈಬರ್ ಅಪರಾಧಗಳ ನಿಯಂತ್ರಣ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸಾರ್ವಜನಿಕರ ಜಾಗವನ್ನು ಅತಿಕ್ರಮಣ ಮಾಡುತ್ತಿದ್ದಾರೆ.

  ನಗರದ ಸಂಚಾರ ದಟ್ಟಣೆಯ ಸುಗಮ ನಿರ್ವಹಣೆ,ರಾಮಮಂದಿರ, ಹೈಕೊರ್ಟ, ಪಟ್ಟಣ ಮತ್ತು ಕಪನೂರ ಬಡಾವಣೆಗಳಲ್ಲಿ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.

      ಕಲಬುರಗಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಕಲಬುರಗಿ ನಗರದ ಜನತೆಗೆ ನೆಮ್ಮದಿಯ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ಮುತ್ತಣ್ಣ ಎಸ್. ನಡಗೇರಿ, ಜೈಭೀಮ ಮಾಳಗೆ, ಮೋಹನಸಾಗರ, ಪ್ರವೀಣ ಖೇಮನ್, ಸೂರ್ಯಪ್ರಕಾಶ ಚಾಳಿ, ಅರುಣ ಇನಾಮದಾರ, ಜೀವನ ಖಿರಸಾಗರ, ರಾಣೇಶ ಸಾವಳಗಿ, ಮಹೇಶ ಮಾನೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು