ಶಿಕ್ಷಕ ದಿನಾಚರಣೆ: ವಿದ್ಯಾರ್ಥಿಗಳು ಬಹಳ ವಿಜೃಂಭಣೆಯಿಂದ ಶಿಕ್ಷಕರ ದಿನಾಚರಣೆ ಆಚರಿಸಿದರು.
ಶಿಕ್ಷಕ ದಿನಾಚರಣೆ: ವಿದ್ಯಾರ್ಥಿಗಳು ಬಹಳ ವಿಜೃಂಭಣೆಯಿಂದ ಶಿಕ್ಷಕರ ದಿನಾಚರಣೆ ಆಚರಿಸಿದರು.
ಕಮಲನಗರ್: ತಾಲೂಕಿನ ಡಾಕ್ಟರ್ ಚನ್ನಬಸವ ಪಟ್ಟದೇವರ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ ಸಂಗಮ ಖೇಡ ಶಾಲೆಯಲ್ಲಿ ವಿದ್ಯಾರ್ಥಿಗಳು ವಿಜೃಂಭಣೆಯಿಂದ ಶಿಕ್ಷಕ ದಿನಾಚರಣೆ ಆಚರಿಸಿದರು.
ಗುರಿ ಇರಲು ಗುರು ಇರಲೇಬೇಕು ಮೇಲ್ಮಟ್ಟಕೆ ಎರಬೇಕಾದರೆ ಯಾವುದೇ ಕ್ಷೇತ್ರದಲ್ಲಿ ಬದುಕಬೇಕಾದರೆ ಗುರುವಿನಿಂದ ಕಲಿತ ಅಕ್ಷರದಿಂದಲೇ ಸಾಧ್ಯ ಎಂದು ಗುರುವಿನ ಮಹಿಮೆಯ ಗುಣಗಾನವನ್ನು ಪೂಜ್ಯ ಡಾ. ಮಹಾದೇವಮ್ಮಾ ತಾಯಿಯವರು ನುಡಿದರು. ಮುಖ್ಯ ಗುರುಗಳಾದ ಶ್ರೀ ಸಂಜುಕುಮಾರ್ ಮೇಂಗಾ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಾದ ಶಿವಕುಮಾರ್ ಸ್ವಾಮಿ ಸುರೇಶ್ ನೀಲಮಠ ರವಿಕಾಳೆ, ಬಸವರಾಜ್ ಚಿಂದೆ ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಕಾರ್ಯಕ್ರಮಕ್ಕೆ ಮೊದಲು ಕುಮಾರಿ ಸಂಗೀತಾ ಮೇತ್ರೆ ಸ್ವಾಗತ ಭಾಷಣ ನುಡಿದಳು. ಮಕ್ಕಳಾದ ಸೃಷ್ಟಿ ಶಿವಕುಮಾರ್ ಸಂಚಾಲನೆ ಮಾಡಿದಳು. ವಿದ್ಯಾರ್ಥಿಗಳ ಸಂಕೇತ ನಿರೂಪಿಸಿದನು. ರೇಷ್ಮಾ ಹೊಳೆಸಮುದ್ರಯವರು ಶಿಕ್ಷಕರ ದಿನಚರಣೆ ಕುರಿತು ಮಾತನಾಡಿದರು.ಗುರುಗಳ ಶಕ್ತಿ ಅಪಾರವಾದದ್ದು ಎಂದು ಬಣ್ಣಿಸಿದರು. ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಕ್ಕಳು ಶಿಕ್ಷಕರೊಂದಿಗೆ ಸಂತೋಷದಿಂದ ಕಾರ್ಯಕ್ರಮ ನೆರವೇರಿಸಿದರು.