ಪರಿಸರ ರಕ್ಷಣೆ ನಮ್ಮ ಹೊಣೆ- ಎಚ್ ಕೆ ಇ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ

ಪರಿಸರ ರಕ್ಷಣೆ ನಮ್ಮ ಹೊಣೆ- ಎಚ್ ಕೆ ಇ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ

ಪರಿಸರ ರಕ್ಷಣೆ ನಮ್ಮ ಹೊಣೆ- ಎಚ್ ಕೆ ಇ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ

ಕಲಬುರಗಿ: ದೇಶ ಮತ್ತು ಪ್ರಪಂಚದಲ್ಲಿ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜು ನೇತೃತ್ವದಲ್ಲಿ ಐ ಟಿ ಐ ಕಾಲೇಜು ಆವರಣದಲ್ಲಿ ನಡೆದ "ತಾಯಿಯ ಹೆಸರಿನಲ್ಲಿ ಒಂದು ಮರ" ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಸಿ ನೆಡುವ ಮೂಲಕ ಮಾತಾಡುತ್ತಿದ್ದರು.ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಈ ಅಭಿಯಾನದ ಪ್ರಾರಂಭಿಸುವ ಮೂಲಕ ಅವರಿಗೆ ಪರಿಸರದ ಬಗ್ಗೆ ಇರುವ ಭಾವನಾತ್ಮಕ ಬೆಸುಗೆಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿ ತಾಯಿ ತನ್ನ ಹೆತ್ತ ಮಕ್ಕಳನ್ನು ಹೇಗೆ ಬೆಳೆಸಿ ಪೋಷಿಸುತ್ತಾಳೋ ಹಾಗೆ ನಾವು ಸಸಿ ನೆಟ್ಟು ಜೋತೆಗೆ ಪೋಷಿಸಿ ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಆಡಳಿತ ಮಂಡಳಿ ಸದಸ್ಯ ಡಾ ಕಿರಣ್ ದೇಶಮುಖ ಒಂದು ಮರ ಹತ್ತು ಗಂಡು ಮಕ್ಕಳಿಗೆ ಸಮಾನ ಎಂದು ಪೂರ್ವಜರು ಹೇಳಿದ್ದಾರೆ.ಅದರ ಪ್ರಾಮುಖ್ಯತೆ ಅರಿತು ನಿಂತರ ಮರಗಳನ್ನು ನೆಡುವ ಮೂಲಕ ಭೂಮಿಯ ಮೇಲಿನ ಆಮ್ಲಜನಕ ಮತ್ತು ನೀರನ್ನು ಉಳಿಸುವ ಪಾಲುದಾರರಾಗಬೇಕಿದೆ ಎಂದು ಹೇಳಿದರು.

ಇಂದಿನ ಕಾಲಘಟ್ಟದಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದು, ಅದನ್ನು ಸಮತೋಲನದಲ್ಲಿಡಲು ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡುವುದು ಬಹಳ ಮುಖ್ಯವಾಗಿ ದೆ ನೀರಿನ ಸಂಪನ್ಮೂಲ ಉಳಿಸುವ ಸಲುವಾಗಿ ಗುಜರಾತ್ ಕೆಲವು ಹಳ್ಳಿಗಳಲ್ಲಿ ಗಿಡ ನೆಟ್ಟು ಜಲಕ್ರಾಂತಿ ಮಾಡಿರುವ ವಿಷಯದ ಬಗ್ಗೆ ಇನ್ನೋಬ್ಬ ಆಡಳಿತ ಮಂಡಳಿ ಸದಸ್ಯ ಡಾ ಶರಣಬಸಪ್ಪ ಹರವಾಳ ಮಾತನಾಡಿದರು. ಈ ಅಭಿಯಾನದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಡಳಿತ ಮಂಡಳಿ ಸದಸ್ಯರಾದ ನಾಗಣ್ಣ ಘಂಟಿ ನಿಶಾಂತ್ ಎಲಿ 

ಪ್ರಾಚಾರ್ಯರಾದ ಎಸ್ ಆರ್ ಪಾಟೀಲ್, ಡಾ ಎಸ್ ಆರ್ ಹೊಟ್ಟೆ ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ