ಭಾರತದ ಎಲ್ಲಾ ವಿ.ವಿ.ಗಳಲ್ಲಿ ವಚನಪೀಠ -- ಕೇಂದ್ರ ನಿರ್ಧಾರ

ಭಾರತದ ಎಲ್ಲಾ ವಿ.ವಿ.ಗಳಲ್ಲಿ ವಚನಪೀಠ -- ಕೇಂದ್ರ ನಿರ್ಧಾರ
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 26ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ವಿಶ್ವವಿದ್ಯಾಲಯಗಳು ಬಸವ ಸಿದ್ದಾಂತ ಅಧ್ಯಯನ ಮಾಡುತ್ತಿದ್ದರೂ ಕೂಡ ಅದಕ್ಕೆ ಮಿತಿ ಇದೆ ,ಅವು ಜನ ಸಮೂಹವನ್ನು ತಲುಪಲು ಆಗುತ್ತಿಲ್ಲ. ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಚನ ಸಾಹಿತ್ಯ ಅಧ್ಯಯನ ಪೀಠಗಳನ್ನು ತೆರೆಯಲು ಕೇಂದ್ರ ಸರ್ಕಾರ ಇತ್ತೀಚಿಗೆ ನಿರ್ಧರಿಸಿದೆ. ಪದವಿ ಪಡೆಯಲು ಪಿಎಚ್ .ಡಿ ಸಂಶೋಧನಾ ಅಧ್ಯಯನ ಮಾಡಿದರೆ ಸಾಲದು ,ಪ್ರಾಮಾಣಿಕ ಅಧ್ಯಯನ ಮತ್ತು ಅನುಷ್ಠಾನ ನಡೆದಾಗ ಮಾತ್ರ ಬಸವ ಸಿದ್ದಾಂತ ಉಳಿಯಲು ಸಾಧ್ಯವಿದೆ .ಧಾರವಾಡದ ವಿಶ್ವವಿದ್ಯಾಲಯದ ಬಸವ ಪೀಠವು ವಚನ ಸಾಹಿತ್ಯದ ಕುರಿತಾದ ಪ್ರಾಮಾಣಿಕ ಅಧ್ಯಯನ ಮಾಡಿದೆ. ಪ.ಗು. ಹಳಕಟ್ಟಿ ,ಉತ್ತಂಗಿ ಚನ್ನಪ್ಪ, ಧಾರವಾಡದ ಮೃತ್ಯುಂಜಯ ಅಪ್ಪಗಳವರು ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದರು .ಈ ಪರಂಪರೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಬಸವ ಸಮಿತಿಯು ಶರಣ ಸಿದ್ದಾಂತವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಚಿತ್ರದುರ್ಗದ ಜಯದೇವ ಜಗದ್ಗುರುಗಳು ವರ್ಷದಲ್ಲಿ 11 ತಿಂಗಳು ಜಂಗಮ ಸಂಚಾರ ಮಾಡಿ ನಾಡಿನಾದ್ಯಂತ ಬಸವ ಸಿದ್ಧಾಂತ ಪಸರಿಸಿದರು. ಹಾನಗಲ್ ಕುಮಾರಸ್ವಾಮಿ ,ಮುರುಗೋಡು ಮಹಾಂತ ಅಜ್ಜ , ಬಂತನಾಳದ ಗುರುಗಳು ಬಸವ ತತ್ವವನ್ನು ಮನೆ ಮನೆಗೆ ತಲುಪಿಸಿದರು .ಧಾರವಾಡದ ವಿವಿ ಬಸವ ಅಧ್ಯಯನ ಪೀಠ ಸ್ಥಾಪಿಸಲು ಬಂತನಾಳದ ಅಜ್ಜನವರು ತಮ್ಮ ಶತಾಯುಶದ ಸಂಭ್ರಮದ ಆಚರಣೆಗೆ ಭಕ್ತರು ಕೂಡಿಸಿಟ್ಟ 3 ಲಕ್ಷ ರೂಪಾಯಿಗಳನ್ನು 1967 ರಲ್ಲಿ ನೀಡಿ ಅದನ್ನು ಆರಂಭಿಸಿದರು .
ಸಂ.ಶಿ.ಭೂಸನೂರು ಮಠರ ಭವ್ಯಮಾನವ ಅತ್ಯಂತ ಮೌಲಿಕ ಕೃತಿಯಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಧಾರವಾಡದ ವೀರಣ್ಣ ರಾಜೂರ್ ,ಕಲಬುರ್ಗಿಯ ವೀರಣ್ಣ ದಂಡೆ ಯಂತವರು ಶರಣ ಸಾಹಿತ್ಯ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಭಾರತ ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಿ ಶರಣರನ್ನು ಭಕ್ತಿ ಚಳುವಳಿಯ ವಾರಸುದಾರರೆಂದು ಬಿಂಬಿಸಿದರೆ ಶರಣ ಸಿದ್ದಾಂತದ ಕೊಲೆ ಮಾಡಿದಂತೆ .ಶರಣ ಸಿದ್ದಾಂತ ಸ್ವತಂತ್ರ ಧರ್ಮ ಸಿದ್ಧಾಂತವಾಗಿದೆ .
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಘರ್ಷಗಳಾಗಿ ವಿಷ್ಣುವಿನ ಮೂರ್ತಿಯನ್ನು ಭಗ್ನ ಮಾಡಿದಾಗ ಅದರ ಮುಖ ತೆಗೆದುಕೊಂಡು ಹೋಗಿ ಪಂಡರಾಪುರದಲ್ಲಿ ಕಾನಡಿ/ಕನ್ನಡ ವಿಠಲ ಹೆಸರಿನಲ್ಲಿ ಸ್ಥಾಪಿಸಿದರು .ಅವನೇ ಪಂಡರಾಪುರದ ವಿಠಲ. ಮಹಾರಾಷ್ಟ್ರದ ವಾರಿ /ವಾರಕಾರಿ ಚಳುವಳಿಯ ಅಭಂಗಗಳು ವೇದ ಆಗಮ ಒಪ್ಪುತ್ತವೆ, ಕರ್ನಾಟಕದ ವಚನಕಾರರು ವೇದ ಆಗಮಗಳನ್ನು ಖಂಡಿಸಿದರು .ಭಾರತದ ಭಕ್ತಿ ಚಳುವಳಿ ಕರ್ನಾಟಕದ ವಚನ ಚಳುವಳಿ ಎರಡು ಬೇರೆ ಬೇರೆಯಾಗಿವೆ .ವಾರಕಾರಿ ಚಳುವಳಿ
ಬರೀ ಭಕ್ತಿಯನ್ನು ಹೇಳುತ್ತದೆ, ವಚನ ಚಳುವಳಿ ವೈಚಾರಿಕ ಭಕ್ತಿ ಆರಾಧನೆಯನ್ನು ಹೇಳುತ್ತದೆ .
ದಾಸ ಸಾಹಿತ್ಯಕ್ಕೂ ವಚನ ಚಳುವಳಿಗೂ ಬಹಳಷ್ಟು ವ್ಯತ್ಯಾಸವಿದೆ .ಇಹದ ಬದುಕನ್ನು ಸುಧಾರಿಸಲು ಶರಣರು ಚಿಂತಿಸಿದರೆ ಹೊರತಾಗಿ ದ್ವೈತ ಅದ್ವೈತ ವಿಶಿಷ್ಟಾದ್ವೈತದ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ ಎಂದು ನುಡಿದರು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ, ಚಾಮರಸ ಸಂಗಣ್ಣ ಸತ್ಯಂಪೆೇಟ್ ,ನಾಗಮ್ಮ ಸುರಪುರ ,ಚಂದ್ರಮಪ್ಪ ಹಡಪದ್ ಅವರು ಹಾಜರಿದ್ದರು