ಅಕ್ಕಿ ಕಳ್ಳತನದ ಜಪ ಮಾಡುವವರೇ ನಿಮ್ಮ ಡ್ರಗ್ಸ್ ದಂಧೆ ಯಾವಾಗಿನಿಂದ ನಡೆದಿದೆ: ದೇವೀಂದ್ರ ದೇಸಾಯಿ ಕಲ್ಲೂರ ಕಿಡಿ

ಅಕ್ಕಿ ಕಳ್ಳತನದ ಜಪ ಮಾಡುವವರೇ ನಿಮ್ಮ ಡ್ರಗ್ಸ್ ದಂಧೆ ಯಾವಾಗಿನಿಂದ ನಡೆದಿದೆ: ದೇವೀಂದ್ರ ದೇಸಾಯಿ ಕಲ್ಲೂರ ಕಿಡಿ
ಕಲಬುರಗಿ; ವಿರೋಧ ಪಕ್ಷದವರು ಏನೇ ಮಾತನಡಿದರೂ, ಮೊದಲಿಗೆ ಅಕ್ಕಿ ಕಳ್ಳತನದೇ ಜಪ ಮಾಡುವ ಕಾಂಗ್ರೇಸ್ಸಿನ ಸರ್ವೋಚ್ಛ ನಾಯಕರು ತಮ್ಮಲ್ಲಿನ ಡಗ್ರ್ ದಂಧೆ ಮಾಡುವವರನ್ನು ಹೆಗಲ ಮೇಲೆ ಹೊತ್ತುಕೊಂಡು ಎಷ್ಟು ವರ್ಷಗಳಿಂದ ಸಮಾಜ ವಿರೋಧಿ ಕೆಲಸ ನಡೆದಿದೆ ಎಂದು ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವೀಂದ್ರ ದೇಸಾಯಿ ಕಲ್ಲೂರ ಪ್ರಶ್ನಿಸಿದ್ದಾರೆ.
ಆಧಾರವಿಲ್ಲದ ಯಾರೋ ಆಪಾಧನೆ ಮಾಡಿರುವದನ್ನು ಸದಾ ಜಪ ಮಾಡುವ ಕಾಂಗ್ರೆಸ್ ನಾಯಕರೆ ತಮ್ಮ ಪಕ್ಷದಲ್ಲಿ ಇನ್ನೂ ಯಾವ ಯಾವ ದಂಧೆ ಮಾಡವವರಿದ್ದಾರೆ ಎನ್ನುವುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ?, ಸದಾ ವಿರೋಧ ಪಕ್ಷಗಳ ತಪ್ಪುಗಳನ್ನೇ ಕೆದಕುವ ಮುನ್ನಾ ನಿಮ್ಮ ಸುತ್ತಾ ಮುತ್ತಾ ಎದೇಷ್ಟೋ ತಿಮಿಂಗಲಗಳು ಇವೆ, ಎನ್ನುವುದು ಯಾರಿಗೆ ಗೊತ್ತು? ಕಲಬುರಗಿ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಅಧ್ಯಕ್ಷನೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ ಎನ್ನುವುದು ಈಗ ಜಗಜಾಹೀರವಾಗಿದೆ. ಡ್ರಗ್ಸ್ ದಂಧೆಯಲ್ಲಿ ಇರುವ ವ್ಯಕ್ತಿ ಎಷ್ಟು ವರ್ಷಗಳಿಂದ ಇನ್ನೂ ಯಾವ ಯಾವ ಡ್ರಗ್ಸ್ ಮಾರಾಟ ಮಾಡುತ್ತಿದ್ದ, ಇವನೊಂದಿಗೆ ಯರ‍್ಯಾರು ಇರುತ್ತಿದ್ದರು?, ಯರ‍್ಯಾರಿಗೆ ಫಂಡಿAಗ್ ಮಾಡುತ್ತಿದ್ದ? ಕಲಬುರಗಿ ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಅಥವಾ ಇವರ ನೇಟ್‌ವರ್ಕ ರಾಜ್ಯ ಹೊರರಾಜ್ಯದಲ್ಲಿ ಎಲ್ಲಲ್ಲಿ ಇದೇ ಎನ್ನುವುದಕ್ಕೆ ತಮ್ಮ ಸರ್ಕಾರದಿಂದ ತನಿಖೆ ಮಾಡುವುದಕ್ಕೆ ಏಕೆ ಮುಂದಾಗುತ್ತಿಲ್ಲ. ಮತ್ತು ಅವನೊಂದಿಗೆ ನಿಕಟ ಸಂಪರ್ಕ ಹೊಂದಿದವರನ್ನು ವಿಚಾರಣೆಗೆ ಏಕೆ ಒಳಪಡಿಸಬಾರದು? ಇನ್ನಾದರು ವಿರೋಧ ಪಕ್ಷದವರನ್ನು ಟೀಕಿಸದೇ ನಿಮ್ಮ ಪಕ್ಷದಲ್ಲಿನ ಆಂತರಿಕ ತನಿಖೆ ಆರಂಭಿಸಿ ಕೆಟ್ಟ ಹುಳುಗಳನ್ನು ನಿಮ್ಮ ಪಕ್ಷದಿಂದ ಹೊರಹಾಕಲು ಎಂದು ದೇವಿಂದ್ರ ದೇಸಾಯಿ ಕಲ್ಲೂರ ಪ್ರಶ್ನಿಸಿದ್ದಾರೆ.
ಸಮಾಜಘತುಕ ಕೆಲಸವೆಂದರೆ ಯುವಕರ ದಾರಿ ತಪ್ಪಿಸುವುದು ಕೂಡ ಒಂದಾಗಿದೆ. ಯವಕರಲ್ಲಿ ವಿಷಬೀಜ ಬಿತ್ತುವಂತ ಕೆಲಸ ಮಾಡುವದು ಸರಿಯಲ್ಲ ಎಂದು ಹೇಳುವ ನೀವು ನಿಮ್ಮು ಮುಖಂಡರೇ ಯವಕರಲ್ಲಿ ನಿಷೇಧಿತ ಕಾಫ್ ಸಿರಫ್ ಮಾರಾಟ ಮಾಡಿತ್ತಿದ್ದಾರೆ. ಇದರ ಅರ್ಥವೇನು? ಯವು ಸಮಾಜವನ್ನು ಹಾಳು ಮಾಡುವ ಕೆಸಲವನ್ನು ಎಷ್ಟು ವರ್ಷಗಳಿಂದ ನಡೆಯುತ್ತಿದೆ. ಏಡ್ಸ್ ರೋಗದಂತೆ ಅದೇಷ್ಟೋ ಯುವಕರ ಜೀವನ ಹಾಳಾಗಿದೆ, ಅದೇಷ್ಟು ಕುಟುಂಬಗಳು ಹಾಳಾಗಿವೆ? ಇನ್ನಾದರೂ ಮಾನಾ ಮರಿಯಾದೇ ಇಟ್ಟುಕೊಂಡು ನಿಮ್ಮಲ್ಲಿ ಇರುವ ಇನ್ನೂ ಅನೇಕ ವಿಷಜಂತುಗಳನ್ನು ಹೊರಹಾಕಿ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಒತ್ತಾಯಸಿದ್ದಾರೆ.