ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನಿಂದ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ಮಾಲಾ ಕಣ್ಣಿ
ಕಲಬುರಗಿಯ ಎಮ್.ಎಸ್.ಕೆ.ಮಿಲ್ಲ್.ಬಡಾವವಣೆಗೆ ಹೊಂದಿಕೊಂಡಿರುವ ಜಿ.ಡಿ.ಎ.ಕಾಲೂನಿಯಲ್ಲಿರುವ ಯಾವೊಂದು ಮಗು ಕೂಡ ಶಿಕ್ಷಣದಿಂದ ವಂಚಿತರಾಗಬಾರದೆಂಬ ಚಿಕ್ಕ ಪ್ರಯತ್ನದೊಂದಿಗೆ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ ವತಿಯಿಂದ ಶಾಲಾ ಬ್ಯಾಗ್ ವಿತರಣಾ ಅಭಿಯಾನ ಅಂಗವಾಗಿ ನಾಲ್ಕುಚಕ್ರ ತಂಡದಿಂದ ಸೋ ಕೇರ್ ಸಂಸ್ಥೆಯ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು..
ಕಳೆದ 2020 ರಿಂದ ಕಲಬುರಗಿ ನಗರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ತಂಡದ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೂ ಒತ್ತು ನೀಡಿ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಬಸ್ ಪಾಸ್, ನೋಟ್ ಬುಕ್ಸ್, ಪೆನ್ -ಪೆನ್ಸಿಲ್ ಆಟೊಪಕರಣಗಳು ಮತ್ತು ಅಗತ್ಯವಿರುವ ಸಾಮಗ್ರಿಗಳನ್ನು ತಮ್ಮ ಸ್ವಂತ ದುಡ್ಡುಮತ್ತು ದಾನಿಗಳ ಸಹಾಯದಿಂದ ಇಂತಹ ಕಾರ್ಯಗಳನ್ನು ಮಾಡುತಿದ್ದೆವೆ.
ನಾಲ್ಕುಚಕ್ರ ತಂಡದಲ್ಲಿ ಸುಮಾರು ಯುವಕ ಯುವತಿಯರು ಸ್ವ ಇಚ್ಚೆಯಿಂದ ಭಾಗಿಯಾಗಿ ಸಮಜಾಕ್ಕೆ ಅಳಲು ಸೇವೆ ಸಲ್ಲಿಸುತ್ತಿದ್ದಾರೆ.. ಅದರಂತೆ ತಂಡದಲ್ಲಿ ಸಕ್ರೀಯವಾಗಿ ಮಾಲಾ ಕಣ್ಣಿ ಮಹೇಶ್ಚಂದ್ರ ಪಾಟೀಲ್ ಕಲ್ಯಾಣರಾವ್ ಪಾಟೀಲ್ ಪೂರ್ಣಿಮಾ ಹೊಸಳ್ಳಿಕರ್ ವಿಜಯಲಕ್ಷ್ಮಿ ಹಿರೇಮಠ ವೈಶಾಲಿ ನಾಟಿಕಾರ್, ಜಯಶ್ರೀ ಜೈನ್, ಸಂಗೀತಾ ಕೋರಳ್ಳಿ, ರಾಹುಲ್ ರಾಠೊಡ್, ಆನಂದತೀರ್ಥ ಜೋಶಿ, ಸುಭಾಷ ಮೇತ್ರೆ, ಲಿಂಗರಾಜ್ ಡಾಂಗೆ, ನಾಗರಾಜ್ ಹೆಂಬಾಡಿ, ಅನಿಲ್ ಬಿದನೂರ್ ಒಳಗೊಂಡಂತೆ ಅನೇಕರು ಕೈ ಜೋಡಿಸುತ್ತಾರೆ..
ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ ಮಹಿಳಾ ಉದ್ಯಮಿಯಾಗಿದ್ದು, ಇನ್ನೂಳಿದ ಎಲ್ಲರೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತ ತಂಡಕ್ಕೆ ಆಧಾರವಾಗಿ ನಿಂತಿದ್ದಾರೆ. ತಂಡಕ್ಕೆ ಸರ್ಕಾರದ ಅಥವಾ ಯಾವುದೇ ರಾಜಕೀಯ ಪಕ್ಷಗಳ ಸಹಾಯವಿಲ್ಲದೇ ಸಮಾಜಕ್ಕಾಗಿ ಏನಾದರೂ ಉಡುಗೊರೆ ನೀಡಬೆಕೆಂಬ ಹಂಬಲದಿಂದ ಅಳಿಲು ಸೇವೆ ಸಲ್ಲಿಸುತಿದ್ದಾರೆ.
ನಾಲ್ಕುಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ, ಸಮಾಜ ನಮಗೇನುನೀಡಿತು ಎಂಬುವುದಕ್ಕಿಂತ ಸಮಾಜಕ್ಕೆನಾವೇನು ಮಾಡಿದ್ವಿ ಎಂಬುವುದು ತುಂಬ ಮುಖ್ಯ ಅದನ್ನರಿತು ಇರುವಷ್ಟು ದಿನ ಸನ್ಮಾರ್ಗದಲ್ಲಿ ಸತ್ಕಾರ್ಯಗಳನ್ನು ಮಾಡುತ್ತ ಬಡವ ಅನಾಥರ ನಿರ್ಗತಿಕರ ಸೇವೆ ಮಾಡುವುದೇ ನಮ್ಮ ಉದ್ದೇಶ. ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ ಇರುವಷ್ಟು ದಿನ ಆಸರೆಯಾಗಬೇಕು ತುಕ್ಕು ಹಿಡಿಯುವ ಬದಲು ಸವೆಯುವುದು ಲೇಸು ಎಂಬುವುದು ನಮ್ಮ ತಂಡದ ಧ್ಯೇಯವಾಕ್ಯ ಇದನ್ನೆ ನಾವೆಲ್ಲರೂ ಪಾಲಿಸುತ್ತ ಬರುತಿದ್ದೆವೆ ನಮ್ಮ ತಂಡಕ್ಕೆ ತನುಮನಧನದಿಂದ ಆಧಾರವಾಗಿ ನಿಂತಿರುವ ಸದಸ್ಯರು ಮತ್ತು ದಾನಿಗಳೆ ಆಧಾರಸ್ತಂಭ ಅವರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಹೇಳಿದರು.