ವಿಶ್ವೇಶ್ವರಯ್ಯನವರ ಆದರ್ಶ ಪಾಲನೆಯಾಗಲಿ : ಶಾಸಕ ಅಲ್ಲಮಪ್ರಭು ಪಾಟೀಲ್

ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣ
ವಿಶ್ವೇಶ್ವರಯ್ಯನವರ ಆದರ್ಶ ಪಾಲನೆಯಾಗಲಿ : ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ : ರಾಷ್ಟ್ರ ಕಂಡ ಮಹಾನ್ ಇಂಜಿನಿಯರ್ ಮೈಸೂರಿನ ನಿರ್ಮಾತೃ ಭಾರತ ರತ್ನ ಡಾಕ್ಟರ್ ಸರ್ ಎಂ ವಿಶ್ವೇಶ್ವರಯ್ಯನವರ ಆದರ್ಶ ಎಲ್ಲರೂ ಪಾಲನೆ ಮಾಡಿ ಮುಂದಿನ ಜನಾಂಗಕ್ಕೆ ತಲುಪಿಸುವ ದೊಡ್ಡ ಕಾರ್ಯ ಮಾಡಬೇಕಾಗಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಕಲಬುರಗಿಯ ಜಯನಗರ ಕಾಲನಿಯ "ಶರಣ ಮ್ಯಾನ್ಷನ್" ನಲ್ಲಿ ನೂತನವಾಗಿ ಪ್ರತಿಷ್ಠಾಪನೆ ಮಾಡಿದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ಅನಾವರಣ ಸಮಾರಂಭವನ್ನು ಮೇ.23ರಂದು ಉದ್ಘಾಟಿಸಿ ಮಾತನಾಡಿದರು.
ಇಂಜಿನಿಯರ್ ಈರಯ್ಯ ಹಿರೇಮಠ ದಂಪತಿಗಳು ಆಲಮಟ್ಟಿಯ ಮೂರ್ತಿ ಶಿಲ್ಪಿ ವೇದಮೂರ್ತಿ ಮಹಾಂತಯ್ಯ ಹಿರೇಮಠ ಅವರು ನಿರ್ಮಾಣ ಮಾಡಿದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ತಾನು ಮಾಡುವ ಇಂಜಿನಿಯರ್ ಹುದ್ದೆಗೆ ಗೌರವ ತಂದಿದ್ದಾರೆ. ಆ ಮೂಲಕ ವಿಶ್ವೇಶ್ವರಯ್ಯನವರ ಹೆಸರನ್ನು ಸದಾ ಸ್ಮರಿಸುವಂತೆ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಇಂಜಿನಿಯರ್ ಆಗಿ ಉನ್ನತ ಸ್ಥಾನಕ್ಕೇರಿ ಈ ರೀತಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸುತ್ತಿರುವುದು ಮತ್ತು ಸಮಾಜಮುಖಿಯಾಗಿ ಬೆಳೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದು ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಂತರ ಮೂರ್ತಿ ರಚನೆ ಮಾಡಿದ ವೇದಮೂರ್ತಿ ಮಹಾಂತಯ್ಯ ಹಿರೇಮಠ ಅವರನ್ನು ಶಾಲು ಹಾರ,ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಅಲ್ಲಮಪ್ರಭು ಪಾಟೀಲ್ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಸರ್ ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ. ಆ ಹಿನ್ನೆಲೆಯಲ್ಲಿ ಇಂಜಿನಿಯರ್ ಈರಯ್ಯ ಹಿರೇಮಠ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಸ್ಥಾಪನೆ ಮಾಡಿ ಅವರ ಆದರ್ಶಗಳನ್ನು ನಿತ್ಯ ಪಸರಿಸುವಂತೆ ಮಾಡಿದ್ದಾರೆ.ಪ್ರತಿವರ್ಷ ಸೆಪ್ಟೆಂಬರ್ 15ರ ಇಂಜಿನಿಯರ್ ದಿನಾಚರಣೆಯಂದು ಸರ್ ಎಂ ವಿಶ್ವೇಶ್ವರಯ್ಯನವರ ಬದುಕು ಹಾಗು ಸಾಧನೆ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಿ ಮುಂದಿನ ಜನಾಂಗಕ್ಕೆ ಅವರ ಮೌಲ್ಯಗಳನ್ನು ಪ್ರಚುರಪಡಿಸುವಂತೆ ಸಲಹೆ ನೀಡಿದರು. ಸರಿ ಎಮ್ ವಿಶ್ವೇಶ್ವರಯ್ಯ ಪ್ರತಿಮೆಯನ್ನು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶರಣು ಗದ್ದುಗೆ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಶಹಪುರ ಚರಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಬಸಯ್ಯ ಗದ್ದುಗೆ, ನ್ಯಾಯವಾದಿ ಸುಭಾಷ್ ಚಂದ್ರ
ಡೆಂಕಿ, ನ್ಯಾಯವಾದಿ ನಾಗೇಂದ್ರ ಕೋರೆ, ಜಿಮ್ಸ್ ನ ಪ್ರಾಂಶುಪಾಲರಾದ ಡಾ. ಅಜಯ್ ಕುಮಾರ್, ರವಿ ಹಿರೇಮಠ, ರಾಜಶೇಖರ ಗೌಡ ಮಾಲಿ ಪಾಟೀಲ್ ಜೈನಾಪುರ, ಪ್ರಶಾಂತ ಗೌಡ ಮಾಲಿಪಾಟೀಲ್ ಶ್ರೀಮತಿ ಚೈತ್ರಾ ಶ್ರೀಕಾಂತಗೌಡ, ಕಂಟ್ರಾಕ್ಟರ್ಗಳಾದ ಶರಣು ಮೇಟಿ ಲಿಂಗಸೂರ್ ಮಂಜು ಮೇಟಿ ಬಾಗಲಕೋಟೆ ಗೋಲಯ್ಯ ಹಿರೇಮಠ್ ಕಲಬುರ್ಗಿ ಮಂಜು ಡೆಂಗಿ, ಇಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಂಶಪಾಲರಾದ ಡಾ. ಸಿದ್ದರಾಮಪ್ಪ ಅವಂತಿ , ನಿವೃತ್ತ ಇಂಜಿನಿಯರ್ ಗುರುಪಾದಪ್ಪ ಕಾಂತಾ, ಕುಮಾರ್ ಶೌರ್ಯ ಗೌಡ, ಆರ್ಯ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಇಂಜಿನಿಯರ್ ಈರಯ್ಯ ಹಿರೇಮಠ ಹಾಗೂ ನಿರ್ಮಲಾ ಈರಯ್ಯ ಹಿರೇಮಠ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಕಾಂತ್ ಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ಆಕಾಶವಾಣಿಯ ಉದ್ಘೋಷಕರಾದ ಶ್ರೀಮತಿ ಶಶಿಕಲಾ ಜಡೆ ನಿರೂಪಣೆ ಮಾಡಿ ಧನ್ಯವಾದವಿತ್ತರು