ಲಿಂ. ಶ್ರೀ ಚಂದ್ರಶೇಖರ ಪಾಟೀಲ ರೇವೂರ ಅವರ 15ನೇ ಪುಣ್ಯಸ್ಮರಣೆಗೆ ಭಾವಪೂರ್ಣ ನಮನ

ಲಿಂ. ಶ್ರೀ ಚಂದ್ರಶೇಖರ ಪಾಟೀಲ ರೇವೂರ ಅವರ 15ನೇ ಪುಣ್ಯಸ್ಮರಣೆಗೆ ಭಾವಪೂರ್ಣ ನಮನ

ಲಿಂ. ಶ್ರೀ ಚಂದ್ರಶೇಖರ ಪಾಟೀಲ ರೇವೂರ ಅವರ 15ನೇ ಪುಣ್ಯಸ್ಮರಣೆಗೆ ಭಾವಪೂರ್ಣ ನಮನ

ಅಖಂಡ ಕಲಬುರ್ಗಿ ಜಿಲೆಯ ರಾಜಕೀಯದಲ್ಲಿ ಅಡಿಗಲ್ಲಿನಂತೆ ನಿಂತು, ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿ ಭದ್ರ ಬುನಾದಿ ಹಾಕಿದ ದಿಟ್ಟ ಧೀಮಂತ ನಾಯಕರಲ್ಲಿ ಮುಂಚೂಣಿಯವರಾಗಿದ್ದವರು ದಿ. ಶ್ರೀ ಚಂದ್ರಶೇಖರ ಪಾಟೀಲ ರೇವೂರ. "ಗೆಲುವು ಸಾಧ್ಯವಿಲ್ಲ" ಎಂಬ ತೀವ್ರ ರಾಜಕೀಯ ಸಂಕಷ್ಟದ ಸಂದರ್ಭದಲ್ಲಿಯೂ, ತಮ್ಮ ಶಕ್ತಿಶಾಲಿ ನಾಯಕತ್ವದಿಂದ ಕಮಲದ ವಿಜಯಪತಾಕೆಯನ್ನು ಹಾರಿಸಿದ ಇತಿಹಾಸಕ್ಕೆ ಅವರು ಸಾಕ್ಷಿಯಾಗಿದ್ದಾರೆ.

ಕೇವಲ ನಾಯಕತ್ವವಲ್ಲ, ನಂಬಿಕೆಗೆ ಪ್ರತೀಕವಾಗಿದ್ದ ರೇವೂರ ಗೌಡರು, ತಮ್ಮೊಂದಿಗಿರುವವರ ಕೆಲಸವನ್ನು ಪಟ್ಟು ಹಿಡಿದು ಪೂರ್ಣಗೊಳಿಸುವ ಛಲದಂಕರೂ ಆಗಿದ್ದರು. ಅವರ ಕೆಲಸದ ಪದ್ದತಿಗೆ, ರಾಜಕೀಯ ಚಾತುರ್ಯಕ್ಕೆ, ಹಾಗೂ ಸಂಘಟನೆಗೆ ಅವರು ನೀಡಿದ ಜೀವಾಳಕ್ಕೆ ಸಮಾನರು ದುರ್ಲಭ. ಅಂಥ ದಿಟ್ಟ ನಾಯಕನಿಗೆ ಕಾಲ ಕೊಟ್ಟರೆಲ್ಲ ನಾವೆಲ್ಲ ಅನಾಥರಾಗಿದ್ದೆವೆ.

ಸಚಿವ ಸ್ಥಾನವನ್ನೂ, ಹೆಚ್ಚಿನ ಗೌರವವನ್ನೂ ನೀಡದೇ ಅವಮಾನಿಸಿದ ರಾಜಕೀಯ ವ್ಯವಸ್ಥೆಗೂ ಬೆನ್ನಿಲ್ಲದೆ ನಿಂತು, ಕಲಬುರ್ಗಿಯ ಜನತೆ ತಮ್ಮ ಪ್ರೀತಿಯನ್ನು ತೋರಿಸಿದರು. ರೇವೂರ ಗೌಡರ ಮೇಲೆ ಇರುವ ಅಪಾರ ಪ್ರೀತಿ ವಿಶ್ವಾಸದಿಂದ, ಅವರ ಪತ್ನಿ ಶ್ರೀಮತಿ ಅರುಣಾ ಚ.ಪಾಟೀಲ ಅವರನ್ನೂ, ಹಾಗೂ ಪುತ್ರ ದತ್ತಾತ್ರೇಯ ಪಾಟೀಲರನ್ನು ಶಾಸಕರನ್ನಾಗಿ ಆರಿಸಿದ್ದು. ಪಾಟೀಲರಿಗೆ ಅಧಿಕಾರ ಇಲ್ಲದಿದ್ದರೂ ಜನರ ಸೇವೆಯನ್ನು ಮುಂದುವರೆಸಿದ್ದಾರೆ. ಒಂದು ಕುಟುಂಬ ರಾಜಕೀಯ ಸಾಧನೆಯಂತೆ ಕಾಣಬಹುದು, ಆದರೆ ಇದು ಪ್ರಾಮಾಣಿಕ ಸೇವೆಯಾಗಿದೆ.

ಲಿಂ.ರೇವೂರ ಗೌಡರ ತ್ಯಾಗ, ಬುದ್ಧಿವಂತಿಕೆ, ಧೈರ್ಯ ಮತ್ತು ನಾಯಕತ್ವ ನಮ್ಮೆಲ್ಲರ ಮನಗಳಲ್ಲಿ ಸದಾ ನೆನೆಸಿಕೊಳ್ಳುವಂತದ್ದು. ಇಂದಿನ 15ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ, ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಗೌಡರಿಗೆ ನನ್ನ ಭಕ್ತಿಪೂರ್ವಕ ಅಗಾಧ ನಮನಗಳನ್ನು ಅರ್ಪಿಸುತ್ತೇನೆ.

ಶರಣಗೌಡ ಪಾಟೀಲ ಪಾಳಾ