ಅಕ್ಷರ ಧರ್ಮ ಅನುಸರಿಸಿ: ಪಂಚಾಳ ಕರೆ

ಅಕ್ಷರ ಧರ್ಮ ಅನುಸರಿಸಿ: ಪಂಚಾಳ ಕರೆ

ಅಕ್ಷರ ಧರ್ಮ ಅನುಸರಿಸಿ: ಪಂಚಾಳ ಕರೆ

ಆಳಂದ: ನಗರದ ಸಂಸ್ಥಾನ ಹಿರೇಮಠದಲ್ಲಿ ನಡೆದ ಧರ್ಮ ಚಂತನ ಕಾರ್ಯಕ್ರಮದ ಪ್ರಯುಕ್ತ ಸಂಸ್ಥಾನ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ ಸರ್ವ ಜನಾಂಗದ ಉನ್ನತಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿ ಬೆಳೆಯಬೇಕು ಎಂದರು. ಸಮೃದ್ಧ ಬಾಳಿಗೆ ಅಕ್ಷರಧರ್ಮ ಅನುಸರಿಸಬೇಕು ಎಂದು ಉಪನ್ಯಾಸಕ ಪ್ರಮೋದ ಪಂಚಾಳ ಅಭಿಪ್ರಾಯಪಟ್ಟರು. ಜಿಲ್ಲಾ ಮಟ್ಟದ ಶ್ರೇಷ್ಟ ಶಿಕ್ಷಕ ಪ್ರಶಸ್ತಿ ಪಡೆದ ಶಿವಲಿಂಗಪ್ಪ ಮಂಟಗಿ, ವೈಶಾಲಿ ಪಾಟೀಲರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಎಲ್. ಎಸ್. ಬೀದಿ, ಅಪ್ಪಾಸಾಹೇಬ ತೀರ್ಥೆ, ಪಂಡಿತ ಸೇರಿಕಾರ, ಪ್ರಕಾಶ ಪುಲಾರೆ, ವೀರಯ್ಯ ಸ್ವಾಮಿ,ಡಾ.ಮೋನಪ್ಪ ಸುತಾರ ಲಕ್ಷ್ಮಕಾಂತ ಕೋಣೆ ಮುಂತಾದವರು ಉಪಸ್ಥಿತರಿದ್ದರು.