ಮಿಲನ್ ಫರ್ಟಿಲಿಟಿ ಆಸ್ಪತ್ರೆಯಿಂದ "ಅಡ್ವಾನ್ಸ್ಡ್ ಫರ್ಟಿಲಿಟಿ ಕ್ಲಿನಿಕ್" ಆರಂಭ

ಮಿಲನ್ ಫರ್ಟಿಲಿಟಿ ಆಸ್ಪತ್ರೆಯಿಂದ "ಅಡ್ವಾನ್ಸ್ಡ್ ಫರ್ಟಿಲಿಟಿ ಕ್ಲಿನಿಕ್" ಆರಂಭ
ಕಲಬುರಗಿ: ಬೆಂಗಳೂರು ಗರ್ಭಾಶಯ ಆರೋಗ್ಯ ಕ್ಷೇತ್ರದಲ್ಲಿನ ಮೂರು ದಶಕಗಳ ಪರಿಣತಿ ಹೊಂದಿರುವ ಮಿಲನ್ ಫರ್ಟಿಲಿಟಿ ಆಸ್ಪತ್ರೆಯು, "ಅಡ್ವಾನ್ಸ್ಡ್ ಫರ್ಟಿಲಿಟಿ ಕ್ಲಿನಿಕ್" ಅನ್ನು ಆರಂಭಿಸಿದೆ. ಪದೇ ಪದೇ ಐವಿಎಫ್ (Iಗಿಈ) ವೈಫಲ್ಯ, ಅಪಾಯಕಾರಿ ಗರ್ಭಾವಸ್ಥೆ ಅಥವಾ ಗರ್ಭಾಶಯ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಇದು "ಎರಡನೇ ಅವಕಾಶ" ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಈ ಹೊಸ ಕ್ಲಿನಿಕ್ ಸಮಗ್ರ ರೋಗನಿರ್ಣಯ, ಜೀವನಶೈಲಿ ಸುಧಾರಣೆ, ಮಾನಸಿಕ ಬೆಂಬಲ, ಪೌಷ್ಟಿಕಾಂಶ ಮತ್ತು ಪರ್ಯಾಯ ಚಿಕಿತ್ಸೆಗಳನ್ನು ಒಳಗೊಂಡ ವೈವಿಧ್ಯಮಯ ಸೇವೆಗಳನ್ನು ಒದಗಿಸುತ್ತದೆ. ಸಂತಾನೋತ್ಪತ್ತಿ ಔಷಧ, ಆಂಡ್ರಾಲಜಿ (ಪುರುಷರ ಸಂತಾನೋತ್ಪತ್ತಿ ಆರೋಗ್ಯ), ಇಮ್ಯುನಾಲಜಿ (ರೋಗನಿರೋಧಕ ವಿಜ್ಞಾನ), ಜೆನೆಟಿಕ್ ಕೌನ್ಸಿಲಿಂಗ್, ಎಂಬ್ರಿಯಾಲಜಿ, ಮನಃಶಾಸ್ತ್ರ ಮತ್ತು ಪೌಷ್ಟಿಕತಜ್ಞರನ್ನು ಒಳಗೊಂಡ ಎಂಟು ತಜ್ಞರ ತಂಡವು ಇಲ್ಲಿ ಕಾರ್ಯನಿರ್ವಹಿಸಲಿದೆ.
ಪದೇ ಪದೇ ಇಂಪ್ಲಾAಟೇಶನ್ ವಿಫಲತೆ, ಗರ್ಭಪಾತ, ವಯಸ್ಸಿಗೆ ಸಂಬAಧಿಸಿದ ಸಂತಾನೋತ್ಪತ್ತಿ ಸಮಸ್ಯೆಗಳು, ಪುರುಷ ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ರೋಗನಿರೋಧಕ ಸಂಬAಧಿತ ಐವಿಎಫ್ ವೈಫಲ್ಯಗಳಂತಹ ನಿರ್ದಿಷ್ಟ ಸಮಸ್ಯೆಗಳಿಗೆ ಕ್ಲಿನಿಕ್ ವಿಶೇಷ ಚಿಕಿತ್ಸೆ ನೀಡಲಿದೆ.
ಈ ಕ್ಲಿನಿಕ್ ಪ್ರತಿ ತಿಂಗಳ ನಾಲ್ಕನೇ ಗುರುವಾರ ವೈದ್ಯರ ಸಮಾಲೋಚನೆಗಾಗಿ ತೆರೆದಿರುತ್ತದೆ. ಮಿಲನ್ ಫರ್ಟಿಲಿಟಿ ಆಸ್ಪತ್ರೆಯು ಬೆಂಗಳೂರು, ದೆಹಲಿ ಮತ್ತು ಚಂಡೀಗಢದಲ್ಲಿ ಶಾಖೆಗಳನ್ನು ಹೊಂದಿದ್ದು, ಐವಿಎಫ್, ಐಯುಐ , ಐಸಿಎಸ್‌ಐ ) ಮತ್ತು ಜೆನೆಟಿಕ್ ಟೆಸ್ಟಿಂಗ್‌ನAತಹ ಸೇವೆಗಳಿಗೆ ಹೆಸರಾಗಿದೆ.