ಸಿ.ವಿ.ರಾಮನ್ ಅವರ ಕೊಡುಗೆ ಅಪಾರವಾದದ್ದು - ಬಸವ ಶಾಂತಲಿಂಗ ಶ್ರೀಗಳು

ಸಿ.ವಿ.ರಾಮನ್ ಅವರ ಕೊಡುಗೆ ಅಪಾರವಾದದ್ದು - ಬಸವ ಶಾಂತಲಿಂಗ ಶ್ರೀಗಳು
ಶಹಾಪುರ : ಭಾರತ ದೇಶಕ್ಕೆ ಸಿ.ವಿ.ರಾಮನ್ ಅವರ ಕೊಡುಗೆ ಅಪಾರವಾದದ್ದು,ಆದ್ದರಿಂದ ಅಂತಹ ಮಹಾ ವಿಜ್ಞಾನಿಗಳನ್ನ ಇಂದು ಸ್ಮರಿಸುವುದು ಅತ್ಯಗತ್ಯ ಹಾಗೂ ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು ಹೇಳಿದರು.
ತಾಲೂಕಿನ ರಸ್ತಾಪುರ ಗ್ರಾಮದ ಬಸವ ಶ್ರೀ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಬಿಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಸಿ.ವಿ.ರಾಮನ್ ಅವರಿಗೆ ವಿಜ್ಞಾನ ವಿಭಾಗದಿಂದ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂದು ಹೇಳಿದರು.
ಶಿಕ್ಷಕ ಬಾಲರಾಜ್ ವಿಶ್ವಕರ್ಮ ಮಾತನಾಡಿ ವಿಜ್ಞಾನ ಹಾಗೂ ಅದರ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು, ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮೂಲ ಉದ್ದೇಶವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಹೆಚ್ಚಿನ ಆಸಕ್ತಿಯಿಂದ ವಿಜ್ಞಾನ ಕ್ರಿಯಾ ಚಟುವಟಿಕೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು, ಸಂಸ್ಥೆಯ ಅಧ್ಯಕ್ಷರಾದ ಶಿವಶಂಕರ ಹೇರುಂಡಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,
ಸಮಾರಂಭದ ವೇದಿಕೆಯ ಮೇಲೆ ಮುಖ್ಯ ಶಿಕ್ಷಕಿ ರೇವತಿ ಹೇರುಂಡಿ,ಸಹ ಶಿಕ್ಷಕಿಯರಾದ ಭಾಗ್ಯಶ್ರೀ ಹಿರೇಮಠ,ಲಕ್ಷ್ಮಿ ಪುರುಷೋತ್ತಮ್,ಮರಿಯಪ್ಪ ಬೇವಿನಹಳ್ಳಿ,ಹಾಗೂ ಇತರರು ಜೊತೆಗಿದ್ದರು,ಕು.ಮೈತ್ರಾ ಹಾಗೂ ಗೌತಮಿ ಪ್ರಾರ್ಥಿಸಿದರು,ಮಲ್ಲಮ್ಮ ಸ್ವಾಗತಿಸಿದರು,ಭಾಗ್ಯ ನಿರೂಪಿಸಿದರು ಯಮನೇಶ್ ವಂದಿಸಿದರು.