ಶಿಕ್ಷಕ ವಾಜೀದ್ ಅಖ್ತರ್ ಸಿದ್ದೀಖಿ ಅವರಿಗೆ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ ಪ್ರದಾನ

ಶಿಕ್ಷಕ ವಾಜೀದ್ ಅಖ್ತರ್ ಸಿದ್ದೀಖಿ ಅವರಿಗೆ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ ಪ್ರದಾನ
ಕಲಬುರಗಿ: ಕರ್ನಾಟಕ ಉರ್ದು ಅಕಾಡೆಮಿ, ಬೆಂಗಳೂರು ಅವರ ವತಿಯಿಂದ ಬೆಂಗಳೂರಿನ ಕೆ ಎಂ ಡಿ ಸಿ ಭವನದ ಆಡಿಟೋರಿಯಂನಲ್ಲಿ ಭವ್ಯ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭವು ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಸಾಹಿತಿ, ಕವಿ ಮತ್ತು ಫೆರೋಜಬಾದಿನ ಕಲಬುರಗಿ ದಕ್ಷಿಣ ಸರಕಾರಿ ಫ್ರೌಡಶಾಲೆಯ ಆದರ್ಶ ಶಿಕ್ಷಕರಾದ ವಾಜಿದ್ ಅಖ್ತರ್ ಸಿದ್ದೀಕಿ ಅವರು "ನಕ್ಶ್ ತಹ್ರೀರ್" ಎಂಬ ಪುಸ್ತಕವನ್ನು ಬರೆದಿದಕ್ಕೆ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ ರೂ.25,000 ನಗದು, ಶಾಲು, ಪುಷ್ಪಗುಚ್ಛ ಮತ್ತು ಗೌರವ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ವಾಜೀದ್ ಅಖ್ತರ್ ಸಿದ್ದೀಖಿ ಅವರ ಐದು ಕೃತಿಗಳು ಪ್ರಕಟವಾಗಿದ್ದು, ಬಹಳ ಜನಪ್ರಿಯತೆಯನ್ನು ಪಡೆದಿವೆ. "ನಕ್ಶೆ ತಹ್ರೀರ್" ಅವರ ನಾಲ್ಕನೇ ಕೃತಿ ಆಗಿದ್ದು, ಉರ್ದು ಸಾಹಿತ್ಯ ಜಗತ್ತಿನಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.
ಉರ್ದು ಭಾಷೆ ಮತ್ತು ಸಾಹಿತ್ಯದ ಪ್ರಚಾರ ಹಾಗೂ ಅಭಿವೃದ್ದಿಗೆ ಪ್ರಮುಖ ಸೇವೆ ಸಲ್ಲಿಸಿದ 45 ಲೇಖಕರು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿ ಮತ್ತು ಬಹುಮಾನಗಳನ್ನು ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕ ಸರ್ಕಾರ ಮುಖ್ಯಮಂತ್ರಿ ಅವರ ರಾಜಕೀಯ ಸಲಹೆಗಾರ ನಸೀರ್ ಅಹ್ಮದ್, (ವಿಧಾನ ಪರಿಷತ್ತಿನ ಸದಸ್ಯೆ ಬಲ್ಕೀಸ್ ಬಾನು, ಐಪಿಎಸ್ ನಿವೃತ್ತ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯೂ. ನಿಸಾರ್ ಅಹ್ಮದ್, ಬೆಂಗಳೂರು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮುಲಾನಾ ಮೊಹಮ್ಮದ್ ಅಲಿ ಖಾಜಿ, ಇಂಜಿನಿಯರ್ ಮೊಹಮ್ಮದ್ ಅಬ್ದುಲ್ ನಯೀಮ್ ಕಾರಿಗರ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ, ಬೆಂಗಳೂರು ರಿಜಿಸ್ಟ್ರೇರ್ ಕರ್ನಾಟಕ ಉರ್ದು ಅಕಾಡೆಮಿರಾದ ಡಾ. ಮಾಜ್ ಉದ್ದೀನ್ ಖಾನ್, ಡಾ. ಅನೀಸ್ ಸಿದ್ದೀಖಿ, ಡಾ. ದಾವೂದ್ ಮೊಹ್ಸಿನ್, ಅಝಮ್ ಶಾಹಿದ್, ಮುನೀರ್ ಅಹ್ಮದ್ ಜಾಮಿ, ಮೊಹಮ್ಮದ್ ಅಮೀನ್ ನವಾಝ್ ಸೇರಿದಂತೆ ಅಕಾಡೆಮಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.